ಭಾರತದಾದ್ಯಂತ ಬಿಎಸ್‌ಎನ್‌ಎಲ್‌ನ ಮೊಬೈಲ್ ಸಂಪರ್ಕವನ್ನು ವಿಸ್ತರಿಸಲು ಅಂಚೆ ಇಲಾಖೆ ಮತ್ತು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನವದೆಹಲಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ. ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು, ಗ್ರಾಮೀಣ ಕುಟುಂಬಗಳನ್ನು ಮೊಬೈಲ್ ಸೇವೆಗಳೊಂದಿಗೆ ಸಬಲೀಕರಣಗೊಳಿಸುವುದು ಮತ್ತು ಆರ್ಥಿಕ ಸೇರ್ಪಡೆ , ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಡಿಜಿಟಲ್ ಇಂಡಿಯಾದ ಗುರಿಗಳನ್ನು ತಲುಪಲು ಈ ಒಪ್ಪಂದದ ಉದ್ದೇಶವಾಗಿದೆ.
ಈ ಒಪ್ಪಂದವು ಬಿಎಸ್‌ಎನ್‌ಎಲ್‌ನ ಟೆಲಿಕಾಂ ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದು ಉದ್ದೇಶವಾಗಿದೆ. ವಿಶೇಷವಾಗಿ ದೇಶದ ಗ್ರಾಮೀಣ ಭಾಗಗಳ ನಾಗರಿಕರಿಗೆ. ಇದರ ಅಡಿಯಲ್ಲಿ, ಅಂಚೆ ಇಲಾಖೆಯು ದೇಶಾದ್ಯಂತ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್‌ಗಳ ಮಾರಾಟಕ್ಕಾಗಿ ತನ್ನ 1.65 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳ ಅಂಚೆ ಜಾಲವನ್ನು ಬಳಸಿಕೊಳ್ಳಲಿದೆ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಜಾಲವನ್ನು ಹೆಚ್ಚಿಸಲು ಬಿಎಸ್‌ಎನ್‌ಎಲ್ ಉದ್ದೇಶಿಸಿದೆ. ಅಂಚೆ ಇಲಾಖೆಯ ಪರವಾಗಿ ಜನರಲ್ ಮ್ಯಾನೇಜರ್ ಮನೀಷಾ ಬನ್ಸಾಲ್ ಬಾದಲ್ ಮತ್ತು ಬಿಎಸ್‌ಎನ್‌ಎಲ್‌ನ ಪ್ರಧಾನ ಜನರಲ್ ಮ್ಯಾನೇಜರ್ ದೀಪಕ್ ಗರ್ಗ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಬಿಎಸ್ಎನ್ಎಲ್ ಸೇವೆಗಳು ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಿರುತ್ತವೆ, ವಿಶೇಷವಾಗಿ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿನ ನಾಗರಿಕರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಮೊಬೈಲ್ ಸೇವೆಗಳನ್ನು ಅನುಕೂಲಕರವಾಗಿ ಪಡೆಯಲು ಸಹಾಯ ಮಾಡಿಕೊಡುತ್ತದೆ ಎಂದು ಬಿಎಸ್ಎನ್ಎಲ್ ಪ್ರಧಾನ ಮಹಾನಿರ್ದೇಶಕ ದೀಪಕ್ ಗರ್ಗ್ ಹೇಳಿದರು.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…