ಭಾರತದಲ್ಲಿ ತಾಳೆ ಎಣ್ಣೆ, ಚಿನ್ನದ ಮೂಲ ಆಮದು ಬೆಲೆ ಕಡಿತ | ಅಡುಗೆ ಎಣ್ಣೆ ದರ ಇಳಿಕೆಯಾಗುವ ಸಾಧ್ಯತೆ |

Advertisement
Advertisement

ಭಾರತವು ಕಚ್ಚಾ ಮತ್ತು ಸಂಸ್ಕರಿಸಿದ ಪಾಮ್ ಆಯಿಲ್, ಕಚ್ಚಾ ಸೋಯಾ ತೈಲ ಮತ್ತು ಚಿನ್ನದ ಮೂಲ ಆಮದು ಬೆಲೆಗಳನ್ನು ಕಡಿತಗೊಳಿಸಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ.

Advertisement

2023 ರ ಮಾರ್ಚ್ 31 ರವರೆಗೆ ಅಡುಗೆ ಎಣ್ಣೆ ಮೇಲಿನ ಅಮದು ಸುಂಕಕ್ಕೆ ನೀಡಿರುವ ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸಚಿವಾಲಯ ತಿಳಿಸಿದೆ.ಈ ನಿಯಮದಿಂದಾಗಿ ಕಚ್ಚಾ ತಾಳೆ, ಕಚ್ಚಾ ಸೋಯಾ, ಕಚ್ಚಾ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಸೋಯಾ ಎಣ್ಣೆಗಳ ಮೇಲೆ ಯಾವುದೇ ಆಮದು ಸುಂಕ ಇರುವುದಿಲ್ಲ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆಯಾಗಲಿದೆ.

Advertisement
Advertisement

ಸರ್ಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ಖಾದ್ಯ ತೈಲಗಳು, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಬೆಲೆಗಳನ್ನು ಪರಿಷ್ಕರಿಸುತ್ತದೆ. ಭಾರತವು ಖಾದ್ಯ ತೈಲಗಳು ಮತ್ತು ಬೆಳ್ಳಿಯ ವಿಶ್ವದ ಅತಿದೊಡ್ಡ ಆಮದುದಾರ ಮತ್ತು ಚಿನ್ನದ ಎರಡನೇ ಅತಿ ದೊಡ್ಡ ಗ್ರಾಹಕ.  ಭಾರತದಲ್ಲಿ ಚಿನ್ನ, ಖಾದ್ಯ ತೈಲಗಳ ಬೆಲೆಯ ಮೇಲೆ ಈ ಆಮದು ದರವು ಪರಿಣಾಮ ಬೀರುತ್ತದೆ. ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಇನ್ನು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಖಾದ್ಯ ತೈಲ ದರವು ಇತ್ತೀಚೆಗೆ ಜಾಗತಿಕವಾಗಿ ಕೊಂಚ ಇಳಿಕೆಯಾಗುತ್ತಿದೆ.

 

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಭಾರತದಲ್ಲಿ ತಾಳೆ ಎಣ್ಣೆ, ಚಿನ್ನದ ಮೂಲ ಆಮದು ಬೆಲೆ ಕಡಿತ | ಅಡುಗೆ ಎಣ್ಣೆ ದರ ಇಳಿಕೆಯಾಗುವ ಸಾಧ್ಯತೆ |"

Leave a comment

Your email address will not be published.


*