ಮಧುಮೇಹ ಇಂದು ಹೆಚ್ಚಾಗಿ ಕಂಡುಬರುವ ಸಮಸ್ಯೆ. ಈ ಸಮಸ್ಯೆಗೆ ಗೋವಿನ ಔಷಧಿಯನ್ನು ತಯಾರಿಸಿದ ಗೋಪ್ರೇಮಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಹತ್ತಾರು ಮಂದಿ ಈಗ ಗೋವಿನ ಔಷಧಿಯತ್ತ ಮುಖ ಮಾಡಿದ್ದಾರೆ. ಮಧುಮೇಹ, ಕಿಡ್ನಿ ಸ್ಟೋನ್ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗೋ ಆಧಾರಿತ ಪರಿಹಾರವನ್ನು ಕಂಡಿದ್ದಾರೆ. ಈಗ ಸುಮಾರು 8 ಬಗೆಯ ಔಷಧಿಯನ್ನು ಗೋವಿನ ಮೂಲದಿಂದ ತಯಾರು ಮಾಡಿದ್ದಾರೆ.
ದೇಸೀ ಗೋವು ಎಂದರೆ ಅತ್ಯಂತ ಔಷಧೀಯ ಗುಣವುಳ್ಳ ತಳಿ ಎಂದು ಅನೇಕ ಸಮಯಗಳಿಂದ ಕೇಳಿ ಬರುತ್ತಿದೆ. ಹಲವಾರು ಮಂದಿ ಗೋ ಅರ್ಕ ತಯಾರು ಮಾಡುತ್ತಾರೆ. ದೇಸೀ ತಳಿಯ ಹಾಲು, ಮೊಸರು, ಮಜ್ಜಿಗೆ, ತುಪ್ಪವು ಅತ್ಯಂತ ಔಷಧಿ ಗುಣವುಳ್ಳದ್ದು ಎಂದು ಹೇಳುತ್ತಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಸುಬ್ರಹ್ಮಣ್ಯ ಪ್ರಸಾದ್ ನೆಕ್ಕರಕಳೆಯ ಅವರು ಸುಮಾರು 16 ವರ್ಷಗಳಿಂದ ಗೋ ಆಧಾರಿತವಾದ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದಾರೆ. ಗೋಪ್ರೇಮಿಯೂ ಆಗಿರುವ ಅವರು ಸುಮಾರು 20 ಕ್ಕೂ ಅಧಿಕ ಗೋವುಗಳನ್ನು ಸಾಕುತ್ತಿದ್ದಾರೆ. ಅದರ ಸೆಗಣಿಯಿಂದ ಗೊಬ್ಬರ ತಯಾರಿ, ಗೋಮೂತ್ರದಿಂದ ಕ್ರಿಮಿನಾಶಕ ತಯಾರು ಮಾಡುತ್ತಿದ್ದರು. ಇದೀಗ ಕೆಲವು ವರ್ಷಗಳಿಂದ ವಿವಿಧ ಆಯುರ್ವೇದ ಔಷಧಿಯನ್ನು ಸಣ್ಣ ಪ್ರಮಾಣದಲ್ಲಿ ತಾವೇ ತಯಾರು ಮಾಡುತ್ತಿದ್ದಾರೆ. ಗೋವಿನ ಸೆಗಣಿ, ಮೂತ್ರ, ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನು ಮೌಲ್ಯವರ್ಧನೆ ಮಾಡುವುದರ ಜೊತೆಗೆ ಆಯುರ್ವೇದ ಸಸ್ಯಗಳನ್ನು ಬಳಕೆ ಮಾಡಿ ಔಷಧಿಯನ್ನೂ ತಯಾರು ಮಾಡುತ್ತಿದ್ದಾರೆ.
ವಿಶೇಷವಾಗಿ ಕ್ಷೀರಬಲ ತೈಲ ಸೇರಿದಂತೆ ವಿವಿಧ ತೈಲಗಳ ತಯಾರಿಕೆ ಮಾಡುತ್ತಾರೆ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಅದೇ ಮಾದರಿಯಲ್ಲಿ ಔಷಧಿಗಳನ್ನು ತಯಾರು ಮಾಡುತ್ತಿದ್ದಾರೆ. ಸುಮಾರು 800 ಬಗೆಯ ಔಷಧೀಯ ಸಸ್ಯಗಳನ್ನು ಗೋ ಉತ್ಪನಗಳೊಂದಿಗೆ ಸೇರಿಸಿ ಔಷಧಿ ತಯಾರಿಸಬಹುದಾಗಿದೆ ಎಂದು ಸುಬ್ರಹ್ಮಣ್ಯ ಪ್ರಸಾದ್ ಹೇಳುತ್ತಾರೆ. ಸದ್ಯ 8-10 ಬಗೆಯ ಆಯುರ್ವೇದ ಔಷಧಿಗಳನ್ನು ತಯಾರು ಮಾಡುವ ಸುಬ್ರಹ್ಮಣ್ಯ ಪ್ರಸಾದ್ ಅವರು, ವಿಶೇಷವಾಗಿ ಮಧುಮೇಹಕ್ಕೆ, ಕಡ್ನಿಸ್ಟೋನ್‌ಗೆ, ಬೆನ್ನು ನೋವು ಸೇರಿದಂತೆ ದೀರ್ಘಕಾಲದ ನೋವುಗಳಿಗೆ ತೈಲ ಹಾಗೂ ಔಷಧಿಯನ್ನು ನೀಡುತ್ತಿದ್ದಾರೆ.ಈಗಾಗಲೇ ಹಲವಾರು ಮಂದಿ ಈ ಔಷಧಿ ಪಡೆದಿದ್ದಾರೆ. ಮಧುಮೇಹದಲ್ಲಿ ಸ್ಥಿರತೆಯನ್ನು ಕಂಡಿದ್ದಾರೆ. ಇದೆಲ್ಲವೂ ಗೋವಿನ ಉತ್ಪನ್ನವನ್ನು ಬಳಸಿಯೇ ತಯಾರು ಮಾಡುತ್ತಿದ್ದಾರೆ.ಇದೆಲ್ಲವೂ ಗೋವಿನ ಶಕ್ತಿ ಎನ್ನುತ್ತಾರೆ ಸುಬ್ರಹ್ಮಣ್ಯ ಪ್ರಸಾದ್.
ಅಡಿಕೆ ಕೃಷಿಯ ಆಸಕ್ತಿ ಕೈಬಿಟ್ಟ ಸುಬ್ರಹ್ಮಣ್ಯ ಪ್ರಸಾದರು ತೋಟದಲ್ಲಿ ಹುಲ್ಲು, ಹಲಸಿನ ಗಿಡಗಳನ್ನು ನೆಟ್ಟಿದ್ದಾರೆ. ಒಂದು ಅಡಿಕೆ ಮರ ತನ್ನ ಜೀವಿತಾವಧಿಯಲ್ಲಿ 32 ಸಾವಿರ ರೂಪಾಯಿ ಆದಾಯ ಬರುತ್ತದೆಯಾದರೆ ಅಡಿಕೆ ಮರವನ್ನೇ ನೋಡಬೇಕಾ ಎನ್ನುವುದು ಅವರ ಪ್ರಶ್ನೆ. ಗೋವು ಹಾಗೂ ಗೋ ಉತ್ಪನಗಳ ತಯಾರು ಮಾಡುವುದು ಹೆಚ್ಚು ಸಮಾಧಾನ, ಖುಷಿ ತರುತ್ತದೆ ಎನ್ನುತ್ತಾರೆ ಸುಬ್ರಹ್ಮಣ್ಯ ಪ್ರಸಾದರು. ಗೋವು ಕೂಡಾ ಆದಾಯವೂ ನೀಡಬಲ್ಲಿದು, ನೆಮ್ಮದಿಯೂ ನೀಡಬಲ್ಲದು, ನಾವು ಈಗ ಅದರ ಆದಾಯದಿಂದಲೇ ಬದುಕುತ್ತಿದ್ದೇವೆ ಎನ್ನುತ್ತಾರೆ ಅವರು. (ಸಂಪರ್ಕ: ಸುಬ್ರಹ್ಮಣ್ಯ ಪ್ರಸಾದ್ : 9446282951 ) (ಸಂದರ್ಶನದ ವಿಡಿಯೋ ಇದೆ )
Subrahmanya Prasad Nekkarakaleya near Badiyadka in Kasaragod district has been manufacturing cow-based products for about 16 years. He is also a cow lover and keeps more than 20 cows. They have been preparing various Ayurvedic medicines themselves in small quantities for a few years now. Apart from adding value to cow dung, urine, milk, curd, buttermilk, ghee, Ayurvedic plants are also being used to prepare medicines.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…