ಪ್ರಮುಖ

#WorldAthleticsChampionship | 4×400 ಮೀ ರಿಲೇ ಓಟದಲ್ಲಿ ಏಷ್ಯನ್ ದಾಖಲೆ ಮುರಿದ ಭಾರತ ಪುರುಷರ ತಂಡ | ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿ ದಾಖಲೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕ್ರೀಡಾಪಟುಗಳ ಸಾಧನೆ ಅದು ಯಾವತ್ತಿದ್ರೂ ದೇಶದ ಸಾಧನೆ ಎಂದೇ ಪರಿಗಣಿಸಲಾಗುತ್ತದೆ. ಅವರಿಗೆ ವಿಶೇಷ ಸ್ಥಾನ ಮಾನ, ಗೌರವವನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ, ಅಥ್ಲೆಟಿಕ್ಸ್‌ನಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ಎಂಬುದು ಈಗ ಆಟಗಾರರ ಪ್ರದರ್ಶನದಿಂದ ಗೋಚರಿಸುತ್ತಿದೆ. ಬುಡಪೆಸ್ಟ್  ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ, ಡಿಪಿ ಮನು, ಕಿಶೋರ್ ಜೆನಾ ಫೈನಲ್​ಗೇರಿದ್ದು, ಭಾರತ ಹೊಸ ಇತಿಹಾಸ ಬರೆಯುವ ಹೊಸ್ತಿಲಿನಲ್ಲಿದೆ. ಇದೀಗ 4×400 ಮೀಟರ್ಸ್ ರಿಲೇ ಓಟದಲ್ಲಿ ಮೊಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮೊಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ ಅವರ ರಿಲೇ ತಂಡವು ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿ ದಾಖಲೆ ಬರೆದಿದೆ.

Advertisement

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಭಾರತದ ಪುರುಷರ ತಂಡವು 4×400 ಮೀಟರ್‌ ಓಟವನ್ನು 2.59.05 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿತು. ಅತಿ ಕಡಿಮೆ ಸಮಯದಲ್ಲಿ ಈ ಓಟವನ್ನು ಪೂರ್ಣಗೊಳಿಸಿದ ಭಾರತ ರಿಲೇ ತಂಡ, ಏಷ್ಯನ್ ದಾಖಲೆಯನ್ನು ಸಹ ಮುರಿಯಿತು. ಕಳೆದ ವರ್ಷ ನಡೆದ ಈ ಅಥ್ಲೆಟಿಕ್ಸ್‌ನಲ್ಲಿ 2.59.51 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಜಪಾನ್ ರಿಲೇ ತಂಡ ಅತಿ ಕಡಿಮೆ ಸಮಯದಲ್ಲಿ ಗುರಿ ತಲುಪಿದ ಏಷ್ಯನ್ ತಂಡ ಎಂಬ ದಾಖಲೆ ಬರೆದಿತ್ತು. ನಂತರ ಜಪಾನ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ್ದ 3.00.25 ಸೆಕೆಂಡುಗಳ ದಾಖಲೆಯನ್ನು ಮುರಿದಿತ್ತು.

ಇತಿಹಾಸ ಸೃಷ್ಟಿಸಿದ ಭಾರತ : ಟೋಕಿಯೊ ಒಲಿಂಪಿಕ್ಸ್‌ನ 4×400 ಮೀಟರ್‌ ರಿಲೇ ರೇಸ್‌ನಲ್ಲಿ ಭಾರತ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಭಾರತ ತನ್ನ ಹೀಟ್‌ನಲ್ಲಿ ಎರಡನೇ ಸ್ಥಾನ ಗಳಿಸಿ, ಫೈನಲ್ ಪ್ರವೇಶಿಸಿದೆ. ಅಮೆರಿಕ ಮೊದಲ ಸ್ಥಾನದಲ್ಲಿ ರೇಸ್ ಮುಗಿಸಿದರೆ, ಗ್ರೇಟ್ ಬ್ರಿಟನ್ ಮೂರನೇ ಸ್ಥಾನ ಗಳಿಸಿತು. ಓಟದಲ್ಲಿ ಭಾರತದ ಕ್ವಾರ್ಟೆಟ್‌ನ ಶಕ್ತಿ ಎಷ್ಟಿತ್ತೆಂದರೆ ದೈತ್ಯ ಅಮೆರಿಕ ಕೇವಲ 1 ಸೆಕೆಂಡ್ ಅಂತರದಿಂದ ಮೊದಲ ಸ್ಥಾನ ಪಡೆದುಕೊಂಡಿತು. ಅಮೆರಿಕ ತನ್ನ ಓಟವನ್ನು 2.58.47 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ, ಗ್ರೇಟ್ ಬ್ರಿಟನ್ 2.59.42 ತೆಗೆದುಕೊಂಡಿತು.

ಭಾರತೀಯರ ಪ್ರದರ್ಶನ ಹೇಗಿತ್ತು ಗೊತ್ತಾ? : ಅರ್ಹತಾ ಸುತ್ತಿನಲ್ಲಿ ಭಾರತದ ಪರ ಮೊಹಮ್ಮದ್ ಅನಾಸ್ ಓಟವನ್ನು ಪ್ರಾರಂಭಿಸಿದರು. ಅವರ ಆರಂಭ ನಿಧಾನವಾಗಿತ್ತು. ಇದರ ಪರಿಣಾಮ ಮೊದಲ 100 ಮೀಟರ್‌ ಓಟದ ನಂತರ ಭಾರತ ಆರನೇ ಸ್ಥಾನದಲ್ಲಿ ನಿಂತಿತು. ಆದರೆ, ಮುಂದಿನ 100 ಮೀಟರ್‌ಗಳಲ್ಲಿ ಭಾರತವು ಅಷ್ಟೇ ಅದ್ಭುತ ಶೈಲಿಯಲ್ಲಿ ಪುನರಾಗಮನ ಮಾಡಿತು. ಅಮೋಜ್ ಜೇಕಬ್ ಅವರ ವೇಗದ ಓಟದಿಂದಾಗಿ ಭಾರತ ಎರಡನೇ ಸ್ಥಾನಕ್ಕೆ ಏರಿತ್ತು. ಇದಾದ ನಂತರ ಮುಹಮ್ಮದ್ ಅಜ್ಮಲ್ ಮತ್ತು ಅಂತಿಮವಾಗಿ ಅಮೋಜ್ ಜೇಕಬ್ ನೀಡಿದ ಮುನ್ನಡೆಯನ್ನು ರಾಜೇಶ್ ರಮೇಶ್ ಉಳಿಸಿಕೊಂಡರು. ಕೊನೆಯ ಕ್ಷಣಗಳಲ್ಲಿ ಭಾರತವು ಅಮೆರಿಕವನ್ನು ಸೋಲಿಸಲು ಪ್ರಯತ್ನಿಸಿತು, ಆದರೆ ಯಶಸ್ವಿಯಾಗಲಿಲ್ಲ. ಆದರೆ ಭಾರತ ಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 4×400 ಮೀಟರ್ ರಿಲೇ ಓಟದ ಫೈನಲ್ ಇಂದು ಅಂದರೆ, ಇದೇ ಭಾನುವಾರ ನಡೆಯಲಿದೆ.

Source : Sports News

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆಪರೇಷನ್ ಸಿಂದೂರ್ – ಪಾಕಿಸ್ತಾನದ ದಾಳಿಗೆ ಭಾರತದ ಪ್ರತ್ಯುತ್ತರ

ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…

4 hours ago

ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಳ | ವಾಯುಪಡೆಯ ನೆಲೆಯಿಂದ ಎಚ್ಚರಿಕೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ  ಸಂಭವನೀಯ ದಾಳಿಯ ಬಗ್ಗೆ…

4 hours ago

ಭಗವದ್ಗೀತೆ ಬಿಡಿ, ಬೇರೆ ಏನಾದ್ರೂ ಸ್ತೋತ್ರ ಬರ್ತದಾ..?

ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…

14 hours ago

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…

16 hours ago

ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |

ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…

17 hours ago

ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

17 hours ago