ಬಡತನದಿಂದ ಹೊರಕ್ಕೆ ಬಂದ ಭಾರತದ 13.5 ಕೋಟಿ ಮಂದಿ | ನೀತಿ ಆಯೋಗ ವರದಿ

July 18, 2023
12:46 PM
ಭಾರತದಲ್ಲಿ 13.5 ಕೋಟಿ ಮಂದಿ ಬಡತನದಿಂದ ಹೊರಕ್ಕೆ, ಭಾರತದಲ್ಲಿ 15 ವರ್ಷದಲ್ಲಿ ಬಡವರ ಸಂಖ್ಯೆ 41.5 ಕೋಟಿಯಷ್ಟು ಕಡಿಮೆ ಆಗಿದೆ ಎಂದು ವಿಶ್ವಸಂಸ್ಥೆ ಮತ್ತು ಆಕ್ಸ್​ಫರ್ಡ್​ನ ಅಂಗಸಂಸ್ಥೆಗಳು ನಡೆಸಿದ ಜಂಟಿ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಜನ ಇನ್ನೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಅದೆಷ್ಟೋ ಮಂದಿ ಒಂದೊತ್ತಿನ ಊಟ, ವಸತಿ, ಶಿಕ್ಷಣಕ್ಕಾಗಿ ಪರದಾಡುತ್ತಿದ್ದಾರೆ. ನಮ್ಮನ್ನು ಆಳಿದವರು ಕಾರಣವಾದರೆ, ಜನಸಂಂಖ್ಯೆಯೂ ಇದಕ್ಕೆ ಮತ್ತೊಂದು ಕಾರಣ. ಆದರೆ ಇಲ್ಲೊಂದು ಸಮಾಧಾನಕರ ವರದಿಯೊಂದು ಬಂದಿದೆ. ಭಾರತದಲ್ಲಿ 2015-16ರಿಂದ 2019-21ರ ಅವಧಿಯಲ್ಲಿ ಬಹು ಆಯಾಮದ ಬಡತನದಿಂದ 13.5 ಕೋಟಿ ಜನರು ಹೊರಬಂದಿದ್ದಾರೆ ಎಂದು ನೀತಿ ಆಯೋಗ್​ನ ವರದಿಯೊಂದು ತಿಳಿಸಿದೆ.

Advertisement
ಭಾರತದಲ್ಲಿ 2005ರಿಂದ 15 ವರ್ಷದ ಅವಧಿಯಲ್ಲಿ 41ಕೋಟಿ ಭಾರತೀಯರು ಬಹು ಆಯಾಮಗಳ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ಅಧ್ಯಯನ ವರದಿಯೊಂದು ಹೇಳಿತ್ತು. ಇದೀಗ ಭಾರತದ ನೀತಿ ಆಯೋಗ  2015ರಿಂದ ಈಚೆಗಿನ ಬಡತನ ನಿರ್ಮೂಲನೆಯ ಮಾಹಿತಿ ಪ್ರಕಟಿಸಿದೆ. ‘ನ್ಯಾಷನಲ್ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್: ಎ ಪ್ರೋಗ್ರೆಸ್ ರಿವ್ಯೂ 2023’ ಜುಲೈ 17ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ 2015-16ರಿಂದ 2019-21ರ ಅವಧಿಯಲ್ಲಿ 13.5 ಕೋಟಿ ಭಾರತೀಯರು ಬಹು ಆಯಾಮದ ಬಡತನದಿಂದ ತಪ್ಪಿಸಿಕೊಂಡಿದ್ದಾರೆ.

 ಜುಲೈ 11ಎಂದು ಪ್ರಕಟವಾದ ಈ ವರದಿ ಪ್ರಕಾರ, 2005ರ ಏಪ್ರಿಲ್​ನಿಂದ 2020ರ ಮಾರ್ಚ್​ವರೆಗಿನ ಅವಧಿಯಲ್ಲಿ 41.5 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲೇರಿರುವುದು ತಿಳಿದುಬಂದಿದೆ. 2005/06ರಲ್ಲಿ ಭಾರತದಲ್ಲಿ ಬಡತನ ಶೇ. 55.1ರಷ್ಟಿತ್ತು. 2019/2021ರ ಅವಧಿಯಲ್ಲಿ ಇದರ ಪ್ರಮಾಣ ಶೇ. 16.4ಕ್ಕೆ ಇಳಿಮುಖವಾಗಿದೆ. 2005/06ರಲ್ಲಿ ಭಾರತದಲ್ಲಿ 64.5 ಕೋಟಿ ಜನರು ಬಹು ಆಯಾಮಗಳ ಬಡತನಕ್ಕೆ ಸಿಲುಕಿದ್ದರು. 2015/16ರಲ್ಲಿ ಇದು 37 ಕೋಟಿಗೆ ಇಳಿಯಿತು. 2019/21ರಲ್ಲಿ ಈ ಸಂಖ್ಯೆ 23 ಕೋಟಿಗೆ ಬಂದಿದೆ.

ಬಡವರ ಸಂಖ್ಯೆ ಅತಿಹೆಚ್ಚು ಇಳಿಮುಖಗೊಂಡಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನ ಪಡೆದಿದೆ. ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನದಲ್ಲೂ ಗಮಾರ್ಹ ಪ್ರಮಾಣದಲ್ಲಿ ಬಡತನ ಕಡಿಮೆ ಆಗಿದೆ.
36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 707 ಆಡಳಿತಾತ್ಮಕ ಜಿಲ್ಲೆಗಳಲ್ಲಿನ ಬಡತನದ ಅಂಕಿ ಅಂಶಗಳನ್ನು ಹೊರತೆಗೆದಿರುವ ನೀತಿ ಆಯೋಗ್, ಈ 5 ವರ್ಷದಲ್ಲಿ ಉತ್ತರಪ್ರದೇಶದಲ್ಲಿ 3.43 ಕೋಟಿ ಮಂದಿ ಬಡತನದ ಪೊರೆ ಕಳಚಿ ಹೊರಬಂದಿರುವುದನ್ನು ಎತ್ತಿತೋರಿಸಿದೆ.

‘2015-16ರಿಂದ 2019-21ರ ಅವಧಿಯಲ್ಲಿ ಭಾರತದಲ್ಲಿ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (ಎಂಪಿಐ) ಮೌಲ್ಯ ಅರ್ಧದಷ್ಟು ಕಡಿಮೆ ಆಗಿದೆ. 0.117ರಷ್ಟಿದ್ದ ಎಂಪಿಐ ಮೌಲ್ಯ 0.066ಕ್ಕೆ ಇಳಿದಿದೆ. ಬಡತನದ ತೀವ್ರತೆಯೂ ಶೇ. 47ರಿಂದ ಶೇ. 44ಕ್ಕೆ ಇಳಿದಿದೆ. ಬಡತನ ನಿರ್ಮೂಲನೆಯ ಕಾರ್ಯದಲ್ಲಿ 2030ಕ್ಕೆ ನಿಗದಿ ಮಾಡಿದ ಗುರಿಯನ್ನು ಬಹಳ ಬೇಗನೇ ಭಾರತ ಮುಟ್ಟುತ್ತಿದೆ’ ಎಂದು ನೀತಿ ಆಯೋಗ್​ನ ಈ ವರದಿಯಲ್ಲಿ ಹೇಳಲಾಗಿದೆ.

ಕೃಪೆ : ಅಂತರ್ಜಾಲ 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಡಿಮೆ ದರದಲ್ಲಿ ಅಡಿಕೆ ಆಮದು ಮಾಡಿದರೆ ಸಂಪೂರ್ಣ ಜಪ್ತಿ – ದೆಹಲಿ ಹೈಕೋರ್ಟ್
February 19, 2026
8:46 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ
February 19, 2026
12:29 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ
February 19, 2026
7:55 AM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror