ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಜನ ಇನ್ನೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಅದೆಷ್ಟೋ ಮಂದಿ ಒಂದೊತ್ತಿನ ಊಟ, ವಸತಿ, ಶಿಕ್ಷಣಕ್ಕಾಗಿ ಪರದಾಡುತ್ತಿದ್ದಾರೆ. ನಮ್ಮನ್ನು ಆಳಿದವರು ಕಾರಣವಾದರೆ, ಜನಸಂಂಖ್ಯೆಯೂ ಇದಕ್ಕೆ ಮತ್ತೊಂದು ಕಾರಣ. ಆದರೆ ಇಲ್ಲೊಂದು ಸಮಾಧಾನಕರ ವರದಿಯೊಂದು ಬಂದಿದೆ. ಭಾರತದಲ್ಲಿ 2015-16ರಿಂದ 2019-21ರ ಅವಧಿಯಲ್ಲಿ ಬಹು ಆಯಾಮದ ಬಡತನದಿಂದ 13.5 ಕೋಟಿ ಜನರು ಹೊರಬಂದಿದ್ದಾರೆ ಎಂದು ನೀತಿ ಆಯೋಗ್ನ ವರದಿಯೊಂದು ತಿಳಿಸಿದೆ.
ಜುಲೈ 11ಎಂದು ಪ್ರಕಟವಾದ ಈ ವರದಿ ಪ್ರಕಾರ, 2005ರ ಏಪ್ರಿಲ್ನಿಂದ 2020ರ ಮಾರ್ಚ್ವರೆಗಿನ ಅವಧಿಯಲ್ಲಿ 41.5 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲೇರಿರುವುದು ತಿಳಿದುಬಂದಿದೆ. 2005/06ರಲ್ಲಿ ಭಾರತದಲ್ಲಿ ಬಡತನ ಶೇ. 55.1ರಷ್ಟಿತ್ತು. 2019/2021ರ ಅವಧಿಯಲ್ಲಿ ಇದರ ಪ್ರಮಾಣ ಶೇ. 16.4ಕ್ಕೆ ಇಳಿಮುಖವಾಗಿದೆ. 2005/06ರಲ್ಲಿ ಭಾರತದಲ್ಲಿ 64.5 ಕೋಟಿ ಜನರು ಬಹು ಆಯಾಮಗಳ ಬಡತನಕ್ಕೆ ಸಿಲುಕಿದ್ದರು. 2015/16ರಲ್ಲಿ ಇದು 37 ಕೋಟಿಗೆ ಇಳಿಯಿತು. 2019/21ರಲ್ಲಿ ಈ ಸಂಖ್ಯೆ 23 ಕೋಟಿಗೆ ಬಂದಿದೆ.
‘2015-16ರಿಂದ 2019-21ರ ಅವಧಿಯಲ್ಲಿ ಭಾರತದಲ್ಲಿ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (ಎಂಪಿಐ) ಮೌಲ್ಯ ಅರ್ಧದಷ್ಟು ಕಡಿಮೆ ಆಗಿದೆ. 0.117ರಷ್ಟಿದ್ದ ಎಂಪಿಐ ಮೌಲ್ಯ 0.066ಕ್ಕೆ ಇಳಿದಿದೆ. ಬಡತನದ ತೀವ್ರತೆಯೂ ಶೇ. 47ರಿಂದ ಶೇ. 44ಕ್ಕೆ ಇಳಿದಿದೆ. ಬಡತನ ನಿರ್ಮೂಲನೆಯ ಕಾರ್ಯದಲ್ಲಿ 2030ಕ್ಕೆ ನಿಗದಿ ಮಾಡಿದ ಗುರಿಯನ್ನು ಬಹಳ ಬೇಗನೇ ಭಾರತ ಮುಟ್ಟುತ್ತಿದೆ’ ಎಂದು ನೀತಿ ಆಯೋಗ್ನ ಈ ವರದಿಯಲ್ಲಿ ಹೇಳಲಾಗಿದೆ.
ಕೃಪೆ : ಅಂತರ್ಜಾಲ
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…