ಸದ್ಯ ನಮ್ಮ ದೇಶ ಮಾತ್ರವಲ್ಲ, ಇಡೀ ಪ್ರಪಂಚಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಹವಾಮಾನ ವೈಪರಿತ್ಯ. ಇಡೀ ಪ್ರಪಂಚವೇ ಕುದಿಯುತ್ತಿದೆ. ಭಾರತ ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ ಆದರೂ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಈ ನಡುವೆಯೇ ಹವಾಮಾನ ವೈಪರೀತ್ಯ ಸಮಸ್ಯೆಗೆ ಭಾರತವೇ ನೇತೃತ್ವ ವಹಿಸಬೇಕು ಎಂದು ಮಿಲೇನಿಯರ್, ಮೈಕ್ರೋಸಾಫ್ಟ್‌ನ ಸಹಸಂಸ್ಥಾಪಕ ಬಿಲ್ಗೇಟ್ಸ್ ಕರೆ ನೀಡಿದ್ದಾರೆ.
ಹವಾಮಾನ ವೈಪರೀತ್ಯ ಸಮಸ್ಯೆಗೆ ವೈಜ್ಞಾನಿಕ ಆವಿಷ್ಕಾರದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅದಕ್ಕೆ ಭಾರತ ನೇತೃತ್ವ ವಹಿಸಬೇಕು ಎಂದು ಮೈಕ್ರೋಸಾಫ್ಟ್‌ನ ಸಹಸಂಸ್ಥಾಪಕ ಬಿಲ್ಗೇಟ್ಸ್ ಕರೆ ನೀಡಿದ್ದಾರೆ.
ತಮ್ಮ ಬ್ಲಾಗ್ನಲ್ಲಿ ಅವರು, ಜಗತ್ತಿನಲ್ಲಿ ತಲೆದೂರಿರುವ ಜಾಗತಿಕ ಸಮಸ್ಯೆಯನ್ನ ನಿವಾರಣೆ ಮಾಡುವ ನಿಟ್ಟಿನಲ್ಲಿ ಭಾರತದ ಸಾಧನೆ ಉತ್ತಮವಾಗಿದೆ ಎಂದು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತವು ನನಗೆ ಮುಂದಿನ ಭವಿಷ್ಯದ ಹೊಸ ಭರವಸೆಯನ್ನು ನೀಡುತ್ತದೆ.
ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲು ಹೊರಟಿದೆ, ಇನ್ನೂ, ಭಾರತವು ದೊಡ್ಡ ಸವಾಲುಗಳನ್ನು ನಿಭಾಯಿಸಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
ಇದು ಪ್ರತಿ ವರ್ಷವೂ ಪರಿಸರ ಸ್ವಲ್ಪಮಟ್ಟಿಗೆ ಹದಗೆಡುತ್ತಲೇ ಹೋಗುತ್ತದೆ, ಇದು ಸರಿಪಡಿಸಲು ಕಷ್ಟಕರವಾದ ವಿಷಯಗಳಲ್ಲಿ ಒಂದಾಗಿದೆ. ಏಕೆಂದರೆ ಜಗತ್ತಿನಾದ್ಯಂತ ಆಧುನಿಕ ಆರ್ಥಿಕತೆಗಳು ಶಕ್ತಿಯ ತೀವ್ರತೆಯನ್ನು ಆಧರಿಸಿವೆ ಮತ್ತು ಈ ಶಕ್ತಿಯ 80 ಪ್ರತಿಶತದಷ್ಟು ಹೈಡ್ರೋಕಾರ್ಬನ್‌ಗಳನ್ನು ಸುಡುತ್ತದೆ. ಹೀಗಾಗಿ ವಾತಾವರಣದ ಉಷ್ಣತೆಯಲ್ಲಿ ಏರುಪೇರು ಇರುತ್ತದೆ.
ರಾಷ್ಟ್ರೀಯ ರಾಜಧಾನಿ ದೆಹಲಿಗೆ ಮುಂಗಾರು ಮಳೆ ವಿಳಂಬವಾಗಿದ್ದು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸಾಮಾನ್ಯವಾಗಿ…
ಒಂದೇ ತಾಯಿಯ ಗರ್ಭದಿಂದ ಸಂಜನಿಸಿದ ಸಹೋದರರ ಗುಣಗಳಲ್ಲಿ ವ್ಯತ್ಯಾಸಗಳಿವೆ. ವ್ಯಕ್ತಿತ್ವ ರೂಪೀಕರಣದಲ್ಲೂ ಭಿನ್ನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಸ್ತೆಯ ಗುಂಡಿಗಳಲ್ಲಿ ನೀರಿನ ಅಂಶ ಇರುವಾಗಲೂ ರಸ್ತೆ ತೇಪೆ ಕೆಲಸ ಮಾಡಬಹುದು ಹಾಗೂ…
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…