ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸಂಬಂಧಿತ ಕೆಲಸಗಳಿಗೆ ಮಹತ್ವ ಆಯುಷ್ಮಾನ್ ಭಾರತ್ #AyushmanBharat ನೀಡುತ್ತಿರುವ ಭಾರತದ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ# WHO ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಶ್ಲಾಘಿಸಿದ್ದಾರೆ.
ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ಜಿ20 ಆರೋಗ್ಯ ಸಚಿವರ ಸಭೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಡಾ ಟೆಡ್ರೊಸ್, ತಮ್ಮ ಭಾಷಣದ ಆರಂಭದಲ್ಲಿ, ಜಿ 20 ಶೃಂಗಸಭೆಯನ್ನು ಆಯೋಜಿಸುವಲ್ಲಿ ಭಾರತದ ಆತಿಥ್ಯ ಮತ್ತು ದೂರದೃಷ್ಟಿಯ ನಾಯಕತ್ವಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ, ಯುನಿವರ್ಸಲ್ ಹೆಲ್ತ್ ಕವರೇಜ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯನ್ನಾಗಿ ಮುಂದುವರಿಸುವಲಿ ಭಾರತವು ಇಟ್ಟ ಹೆಜ್ಜೆಗಳಿಗಾಗಿ ನಾನು ಶ್ಲಾಘಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದಲ್ಲಿನ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನೀಡುತ್ತಿರುವ ಸೇವೆಯ ಬಗ್ಗೆಯೂ ತಮ್ಮ ಭಾಷಣದಲ್ಲಿ ಕೊಂಡಾಡಿದ ಡಾ ಟೆಡ್ರೊಸ್, ನಾನು ಇಲ್ಲಿ ಗಾಂಧಿನಗರದಲ್ಲಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ ಭೇಟಿ ನೀಡಿ ಶ್ಲಾಘಿಸಿದರಲ್ಲದೇ, ಗ್ಲೋಬಲ್ ಡಿಜಿಟಲ್ ಹೆಲ್ತ್ ಇನಿಶಿಯೇಟಿವ್‌ಗಾಗಿ ಭಾರತದ G20 ಪ್ರೆಸಿಡೆನ್ಸಿಗೆ ಧನ್ಯವಾದ ಅರ್ಪಿಸಿದರು.
ಇನ್ನು, ಸ್ಥಳೀಯವಾಗಿ ಪ್ರಿಸ್ಕ್ರಿಪ್ಷನ್‌ಗಳು ಮತ್ತು ಚಿಕಿತ್ಸೆಯನ್ನು ಒದಗಿಸುವ ಟೆಲಿಮೆಡಿಸಿನ್ ಸೇವೆಗಳನ್ನು ನಾನು ಇಲ್ಲಿ ಶ್ಲಾಘಿಸುತ್ತೇನೆ. ಇದು ಆರೋಗ್ಯವನ್ನು ಉತ್ತಮ ಗುಣಮಟ್ಟಕ್ಕೆ ಪರಿವರ್ತಿಸುವ ಅತ್ಯುತ್ತಮ ಉದಾಹರಣೆಯಾಗಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಜಿ20 ಆರೋಗ್ಯ ಸಚಿವರ ಸಭೆ ಮತ್ತು ಸೈಡ್ ಈವೆಂಟ್‌ನಲ್ಲಿ ವಿವಿಧ ದೇಶಗಳ 70 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಜಿ20 ಇಂಡಿಯಾ ಪ್ರೆಸಿಡೆನ್ಸಿ ಅಡಿಯಲ್ಲಿ ಮೂರು ದಿನಗಳ ಜಿ20 ಆರೋಗ್ಯ ಮಂತ್ರಿಗಳ ಸಭೆಯು ಇಂದು ಮುಕ್ತಾಯಗೊಂಡಿದೆ. ಭಾರತವು ಡಿಸೆಂಬರ್ 1, 2022 ರಂದು G20 ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಪ್ರಸ್ತುತ ಇಂಡೋನೇಷ್ಯಾ, ಭಾರತ ಮತ್ತು ಬ್ರೆಜಿಲ್ ಅನ್ನು ಒಳಗೊಂಡಿರುವ G20 Troika ನ ಭಾಗವಾಗಿದೆ.
Source : Digital Media
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…