ಏರಿದ ತಾಪಮಾನಕ್ಕೆ ಹೆಚ್ಚಿದ ವಿದ್ಯುತ್‌ ಬೇಡಿಕೆ | ಭಾರತದಲ್ಲಿ ವಿದ್ಯುತ್‌ ಬಳಕೆಯಲ್ಲಿ ಶೇ.13.6 ಏರಿಕೆ | ಎಪ್ರಿಲ್‌ನಲ್ಲಿ 132.98 ಶತಕೋಟಿ ಯುನಿಟ್‌ ಬೇಡಿಕೆ |

(ಸಾಂದರ್ಭಿಕ ಚಿತ್ರ)

ಭಾರತದಲ್ಲಿ ತಾಪಮಾನ ಏರಿಕೆ ಕಂಡ ಬೆನ್ನಲ್ಲೇ ವಿದ್ಯುತ್‌ ಬೇಡಿಕೆ ಹೆಚ್ಚಿದೆ. ಎಪ್ರಿಲ್‌ ತಿಂಗಳಲ್ಲಿ  13.6 ಶೇಕಡಾ ಹೆಚ್ಚುವರಿ ವಿದ್ಯುತ್‌ ಬೇಡಿಕೆ ವ್ಯಕ್ತವಾಗಿತ್ತು. ದೆಹಲಿ, ರಾಜಸ್ಥಾನ ಮೊದಲಾದ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ತೀವ್ರವಾಗಿತ್ತು. ದೇಶದಲ್ಲಿ ಏಪ್ರಿಲ್‌ನಲ್ಲಿ 132.98 ಶತಕೋಟಿ ಯೂನಿಟ್‌ ವಿದ್ಯುತ್‌ ಬೇಡಿಕೆ ವ್ಯಕ್ತವಾಗಿತ್ತು.

Advertisement
ಮಿರರ್‌ ವ್ಯೂಸ್‌ ಏನು ? ಇಲ್ಲಿ ಕ್ಲಿಕ್‌ ಮಾಡಿ

ದೇಶದಲ್ಲಿ ವಿದ್ಯುತ್ ಬಳಕೆಯು ಏಪ್ರಿಲ್‌ನಲ್ಲಿ 132.98 ಬಿಲಿಯನ್ ಯೂನಿಟ್‌ಗಳಿಗೆ ತಲಪಿತ್ತು. ಇದು ಶೇ 13.6 ರಷ್ಟು ಹೆಚ್ಚುವರಿ ಬೇಡಿಕೆಯಾಗಿದೆ. ಬೇಸಿಗೆಯ ಆರಂಭಿಕ  ಪರಿಣಾಮವನ್ನು ಇದು ತೋರಿಸುತ್ತದೆ ಮತ್ತು ವಿದ್ಯುತ್ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಆರ್ಥಿಕ ಚಟುವಟಿಕೆಗಳಲ್ಲಿಯೂ ಏರಿಕೆಯಾಗಿದೆ. ವಿವಿಧ ಉದ್ದಿಮೆಗಳಲ್ಲೂ ಹೆಚ್ಚುವರಿ ವಿದ್ಯುತ್‌ ಬೇಡಿಕೆ ವ್ಯಕ್ತವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ವಿದ್ಯುತ್ ಬಳಕೆ 117.08 ಬಿಲಿಯನ್ ಯುನಿಟ್ ಬೇಡಿಕೆ ದಾಖಲಾಗಿದೆ, ಇದು 2020 ರ ಅದೇ ತಿಂಗಳಲ್ಲಿ 84.55 ಬಿಲಿಯನ್‌ ಯುನಿಟ್ ಗಿಂತ ಹೆಚ್ಚಾಗಿದೆ.

Advertisement

ಮತ್ತೊಂದೆಡೆ, ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗಿದೆ. ಇದು ಒಂದು ದಿನದಲ್ಲಿ ಅತಿ ಹೆಚ್ಚು ಪೂರೈಕೆಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 207.11 GW ದಾಖಲಾಗಿದೆ. ಗರಿಷ್ಠ ವಿದ್ಯುತ್ ಪೂರೈಕೆಯು ಏಪ್ರಿಲ್ 2021 ರಲ್ಲಿ 182.37 GW ಮತ್ತು ಏಪ್ರಿಲ್ 2020 ರಲ್ಲಿ 132.73 GW ಆಗಿತ್ತು ಎಂದು ವರದಿಯಾಗಿದೆ.

ಭಾರತದ ಹವಾಮಾನದಲ್ಲಿ ಏರಿಳಿತ ಕಂಡಿದೆ. ವಿಪರೀತ ತಾಪಮಾನ ಕಂಡಿದೆ. ಹೀಗಾಗಿ ಪಶ್ಚಿಮ ಮಧ್ಯ, ವಾಯುವ್ಯ, ಉತ್ತರ ಮತ್ತು ಈಶಾನ್ಯದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಟ ತಾಪಮಾನ ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆಯು ಹೆಚ್ಚಾಗುವ ನಿರೀಕ್ಷೆಯಿದೆ.

Advertisement

ದೆಹಲಿಯಲ್ಲಿ ಈಗಾಗಲೇ  ವಿದ್ಯುತ್ ಬೇಡಿಕೆಯು ಏಪ್ರಿಲ್‌ನಲ್ಲಿ 42% ರಷ್ಟು ಏರಿಕೆಯಾಗಿದೆ, ಉತ್ತರದ ರಾಜ್ಯಗಳಾದ ಪಂಜಾಬ್ ಮತ್ತು ರಾಜಸ್ಥಾನವು ವಿದ್ಯುತ್ ಬೇಡಿಕೆ ಕ್ರಮವಾಗಿ 36% ಮತ್ತು 28% ರಷ್ಟು ಬೇಡಿಕೆ ವ್ಯಕ್ತವಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ.

ಇಷ್ಟೆಲ್ಲಾ ವಿದ್ಯುತ್‌ ಬೇಡಿಕೆಗಳ ನಡುವೆ ಪೂರೈಕೆಯೂ ಸವಾಲಿನ ಕೆಲಸವೇ ಆಗಿದೆ. ಭಾರತದ ತಾಪಮಾನ ವರ್ಷದಿಂದ ವರ್ಷಕ್ಕೆ ಏರುವ ಕಾರಣದಿಂದ ವಿದ್ಯುತ್‌ ಬೇಡಿಕೆಯೂ ಹೆಚ್ಚುವ ನಿರೀಕ್ಷೆ ಇದೆ. ಹೀಗಾಗಿ  ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಆದ್ಯತೆ ಬೇಕಾಗಿದೆ. ಈ ಕಾರಣದಿಂದ ಸೌರಶಕ್ತಿಯ ಕಡೆಗೆ ಹೆಚ್ಚಿನ ಆದ್ಯತೆ , ಗಮನವನ್ನು ಸಾಮಾನ್ಯ ಜನರೂ ನೀಡಬಹುದಾಗಿದೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಏರಿದ ತಾಪಮಾನಕ್ಕೆ ಹೆಚ್ಚಿದ ವಿದ್ಯುತ್‌ ಬೇಡಿಕೆ | ಭಾರತದಲ್ಲಿ ವಿದ್ಯುತ್‌ ಬಳಕೆಯಲ್ಲಿ ಶೇ.13.6 ಏರಿಕೆ | ಎಪ್ರಿಲ್‌ನಲ್ಲಿ 132.98 ಶತಕೋಟಿ ಯುನಿಟ್‌ ಬೇಡಿಕೆ |"

Leave a comment

Your email address will not be published.


*