ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಗತಿ | ಎಥೆನಾಲ್ ಮಿಶ್ರಣದಿಂದ ಬದಲಾವಣೆ

November 15, 2024
11:24 PM

ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಇಂಧನ ಸುಸ್ಥಿರತೆ ಮತ್ತು ಸ್ವಾವಲಂಬನೆಯ ಅನ್ವೇಷಣೆಯಲ್ಲಿ ಭಾರತ ದಾಪುಗಾಲು ಇಡುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

Advertisement

ಭಾರತೀಯ ಕೈಗಾರಿಕೆಗಳ ಒಕ್ಕೂಟದ ವತಿಯಿಂದ ದೆಹಲಿಯಲ್ಲಿ ನಡೆದ ಬಯೋಎನರ್ಜಿ ಶೃಂಗಸಭೆಯ 12 ನೇ ಆವೃತ್ತಿಯಲ್ಲಿ ಅವರು ಮಾತನಾಡಿದರು. ಎಥೆನಾಲ್ ಮಿಶ್ರಣ ನೀತಿಯಿಂದ  ಕೃಷಿ ಉದ್ಯಮ ಸೇರಿದಂತೆ  ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಯಾಗಿದೆ.  ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಅಡಿಯಲ್ಲಿ 2013-14 ರಲ್ಲಿ 38 ಕೋಟಿ ಲೀಟರ್‌ಗಳಿಂದ  2022-23 ರಲ್ಲಿ 500 ಕೋಟಿ ಲೀಟರ್‌ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು. ಎಥೆಲಾನ್‌ ಯೋಜನೆಯಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ,  ಒಂದು ಲಕ್ಷದ 6 ಸಾವಿರದ 72 ಕೋಟಿ ರೂಪಾಯಿ  ವಿದೇಶಿ ವಿನಿಮಯದ ಉಳಿತಾಯವಾಗಿದೆ.  544 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಇದು ಕಡಿಮೆ ಮಾಡಿದೆ ಮತ್ತು 181 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಚ್ಚಾ ತೈಲ ಪರ್ಯಾಯವನ್ನು ಸಾಧಿಸಿದೆ. ಇಷ್ಟೇ ಅಲ್ಲದೇ, ರೈತರಿಗೆ 90 ಸಾವಿರದ 59 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ, ಸಾಂಪ್ರದಾಯಿಕ ಔಷಧ ಸೇರಿ ಹಲವಾರು ಒಪ್ಪಂದ
May 3, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ ಭಾಗದ ಜನರಿಗೆ ವಿಶ್ವಾಸ ಮೂಡಿಸಲು ಕ್ರಮ | ಕರಾವಳಿಯಲ್ಲಿ ಕೋಮು ಚಟುವಟಿಕೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ | ಗೃಹ ಸಚಿವ ಡಾ. ಪರಮೇಶ್ವರ್ ಎಚ್ಚರಿಕೆ
May 3, 2025
9:54 PM
by: The Rural Mirror ಸುದ್ದಿಜಾಲ
ದಾವಣಗೆರೆಯಲ್ಲಿ ಮಳೆಗೆ ತರಕಾರಿ , ಭತ್ತದ ಬೆಳೆ ನಾಶ
May 3, 2025
9:23 PM
by: The Rural Mirror ಸುದ್ದಿಜಾಲ
ಹಾಸನದ ಆಲೂರಿನಲ್ಲಿ ಅರಣ್ಯ ಇಲಾಖೆಯಿಂದ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ
May 3, 2025
9:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group