ಭಾರತದ ಮಣ್ಣಿನ ಆರೋಗ್ಯ ಗಂಭೀರ ಕುಸಿತದ ಹಂತಕ್ಕೆ ತಲುಪುತ್ತಿದ್ದು, ಇದು ಕೃಷಿ ಉತ್ಪಾದನೆ ಮಾತ್ರವಲ್ಲದೆ ದೇಶದ ಆಹಾರ ಭದ್ರತೆಯ ಮೇಲೂ ಎಚ್ಚರಿಕೆಯ ಸಂಕೇತವಾಗಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ, ಏಕಬೆಳೆ ಕೃಷಿ ಮತ್ತು ಜೈವಿಕ ಪೋಷಕಾಂಶಗಳ ನಿರ್ಲಕ್ಷ್ಯದಿಂದ ಮಣ್ಣಿನ ಫಲವತ್ತತೆ ದಿನೇದಿನೇ ಕುಗ್ಗುತ್ತಿದೆ ಎಂದು ಜಿಕೆ ಟುಡೇ ಪ್ರಕಟಿಸಿದ ವಿಶ್ಲೇಷಣೆ ಎಚ್ಚರಿಸಿದೆ.
ವಿಶ್ಲೇಷಣೆ ಪ್ರಕಾರ, ಭಾರತದ ಬಹುತೇಕ ಕೃಷಿಭೂಮಿಗಳು ನೈಟ್ರೋಜನ್–ಫಾಸ್ಫರಸ್–ಪೊಟಾಶ್ (NPK) ಮೇಲಿನ ಅತಿಯಾದ ಅವಲಂಬನೆಯಿಂದ ಸೂಕ್ಷ್ಮ ಪೋಷಕಾಂಶಗಳಾದ ಜಿಂಕ್, ಸಲ್ಫರ್, ಬೋರಾನ್ ಮುಂತಾದವುಗಳ ಕೊರತೆಯನ್ನು ಎದುರಿಸುತ್ತಿವೆ. ಇದರ ಪರಿಣಾಮವಾಗಿ ಮಣ್ಣಿನ ಜೀವಂತಿಕೆ, ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹಾಗೂ ಬೆಳೆಗಳ ರೋಗ ನಿರೋಧಕ ಸಾಮರ್ಥ್ಯ ಕುಂಠಿತವಾಗುತ್ತಿದೆ.
ಸಮಗ್ರ ಪೋಷಕಾಂಶ ನಿರ್ವಹಣೆ (INM) ಏನು? : ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ( Integrated Nutrient Management (INM)) ಪದ್ಧತಿಯನ್ನು ಲೇಖನ ಮುಂದಿಟ್ಟಿದೆ. ಸಮಗ್ರ ಪೋಷಕಾಂಶಗಳ ನಿರ್ವಹಣೆ ಅಂದರೆ ರಾಸಾಯನಿಕ ಗೊಬ್ಬರಗಳನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ; ಅವುಗಳನ್ನು ಜೈವಿಕ ಗೊಬ್ಬರಗಳು, ಬಯೋ–ಫರ್ಟಿಲೈಸರ್‌ಗಳು ಮತ್ತು ಬೆಳೆ ಅವಶೇಷಗಳೊಂದಿಗೆ ಸಮತೋಲನದಲ್ಲಿ ಬಳಸುವುದು.
ಸಮಗ್ರ ಪೋಷಕಾಂಶಗಳ ನಿರ್ವಹಣೆ ಪ್ರಮುಖ ಅಂಶಗಳು: ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ, ಹಸುಗೊಬ್ಬರ, ಕಂಪೋಸ್ಟ್, ವರ್ಮಿಕಂಪೋಸ್ಟ್ ಬಳಕೆ, ಬಯೋ–ಫರ್ಟಿಲೈಸರ್‌ಗಳ ಬಳಕೆ, ಬೆಳೆ ಅವಶೇಷಗಳ ಮಣ್ಣಿಗೆ ಮರಳಿಸುವಿಕೆ. ಈ ವಿಧಾನ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಪುನಶ್ಚೇತನಗೊಳಿಸುತ್ತದೆ.
ರೈತರಿಗೆ ಲಾಭವೇನು? : ಸಮಗ್ರ ಪೋಷಕಾಂಶಗಳ ನಿರ್ವಹಣೆ ರೈತರಿಗೆ ಗೊಬ್ಬರ ವೆಚ್ಚದಲ್ಲಿ ಉಳಿತಾಯ, ದೀರ್ಘಕಾಲಿಕ ಮಣ್ಣಿನ ಫಲವತ್ತತೆ, ನೀರಿನ ಉತ್ತಮ ಬಳಕೆ, ಬೆಳೆ ಗುಣಮಟ್ಟ ಹಾಗೂ ಇಳುವರಿ ಸ್ಥಿರತೆ , ವಿಶೇಷವಾಗಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುತ್ತಿರುವ ಸಣ್ಣ ಹಾಗೂ ಮಧ್ಯಮ ರೈತರಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಂತ ಸಹಾಯಕವಾಗಬಹುದು ಎಂದು ಲೇಖನ ತಿಳಿಸಿದೆ.
ರಾಷ್ಟ್ರೀಯ ಮಟ್ಟದ ಮಹತ್ವ : ಸಮಗ್ರ ಪೋಷಕಾಂಶಗಳ ನಿರ್ವಹಣೆ ಪದ್ಧತಿ ಮಣ್ಣು ಮಾತ್ರವಲ್ಲದೆ, ನೀರು ಮತ್ತು ಪರಿಸರ ಮಾಲಿನ್ಯವನ್ನು ತಗ್ಗಿಸುವಲ್ಲಿ ಸಹಕಾರಿ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಉಂಟಾಗುವ ಜಲಮಾಲಿನ್ಯ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಈ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ.
ಭಾರತದ ಮಣ್ಣು ಈಗ ಸ್ಪಷ್ಟ ಸಂದೇಶ ನೀಡುತ್ತಿದೆ “ಸಮತೋಲನ ಇಲ್ಲದ ಕೃಷಿ ದೀರ್ಘಕಾಲ ಉಳಿಯದು”. ಸಮಗ್ರ ಪೋಷಕಾಂಶಗಳ ನಿರ್ವಹಣೆಯೇ ಮಣ್ಣಿನ ಆರೋಗ್ಯ, ರೈತರ ಆದಾಯ ಮತ್ತು ದೇಶದ ಆಹಾರ ಭದ್ರತೆಯನ್ನು ಕಾಪಾಡುವ ಮುಂದಿನ ದಾರಿ ಎಂಬುದು ಈ ವಿಶ್ಲೇಷಣೆಯಲ್ಲಿ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…
ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…