Advertisement
ರಾಷ್ಟ್ರೀಯ

ಸಿಂಧೂ ನದಿ ಒಪ್ಪಂದ ರದ್ದತಿ ಪರಿಣಾಮ – ಪಾಕಿಸ್ತಾನ ಕೃಷಿ ಪರಿಸ್ಥಿತಿ ಏನಾಗಿದೆ..?

Share

ಸಿಂಧೂ ನದಿ ಜಲಾನಯನ ಪ್ರದೇಶದ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ, ಈ ವರ್ಷದ ಆರಂಭದಲ್ಲಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ನಂತರ ಅಲ್ಲಿನ ಕೃಷಿ ಪರಿಸ್ಥಿತಿ ಹೇಗಿದೆ..? ಈ ಬಗ್ಗೆ ಸಿಡ್ನಿ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ & ಪೀಸ್ ಪ್ರಕಟಿಸಿದ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಸದ್ಯ ಅಲ್ಲಿ ನೀರಿನ ಕೊರತೆಯಿಂದ ಕೃಷಿ ಸಂಕಷ್ಟಕ್ಕೆ ಹೋಗುತ್ತಿದೆ.

ಈ ವರ್ಷದ ಏಪ್ರಿಲ್ ನಲ್ಲಿ ನಡೆದ ಬರ್ಬರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದೆ. ಈ ಬೆಳವಣಿಗೆಯು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯನ್ನೂ ಸೂಚಿಸುತ್ತದೆ. ಏಕೆಂದರೆ ಅವರ ಕೃಷಿಯು ಸಿಂಧೂ ನದಿ ವ್ಯವಸ್ಥೆಯ ಮೇಲೆ ಶೇ. 80%ರಷ್ಟು ಅವಲಂಬಿತವಾಗಿದೆ. ಸದ್ಯ ನೀರಿನ ಕೊರತೆಯಿಂದ  ಕೃಷಿ ಚಟುವಟಿಕೆಗಳು ಗಂಭೀರ ಪರಿಣಾಮವನ್ನು ಎದುರಿಸುತ್ತಿವೆ. ಪಾಕಿಸ್ತಾನದ ಸಂಕಟಗಳನ್ನು ಸಿಡ್ನಿ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ & ಪೀಸ್ “ಪರಿಸರ ಸಂಕಷ್ಟದ ವರದಿ 2025​” ರಲ್ಲಿ  ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ನೀರಿನ ತೀವ್ರ ಕೊರತೆಯು ಪಾಕಿಸ್ತಾನದ ಕೃಷಿ ಭೂಮಿಯನ್ನು ಮರಭೂಮಿಯನ್ನಾಗಿ ಪರಿವರ್ತಿಸುತ್ತಿದೆ ಎಂದು ಎಚ್ಚರಿಸಿದೆ.

ನಿರ್ಣಾಯಕ ಕ್ಷಣಗಳಲ್ಲಿ ಸಣ್ಣ ಅಡೆತಡೆಗಳು ಸಹ ಪಾಕಿಸ್ತಾನದ ಕೃಷಿಗೆ ಗಂಭೀರ ಹಾನಿ ತರಬಹುದು. ಏಕೆಂದರೆ ಪಾಕಿಸ್ತಾನದಲ್ಲಿ ನದಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಕಷ್ಟು ಸಂಗ್ರಹಣಾ ಸ್ಥಳವಿಲ್ಲ. ಪಾಕಿಸ್ತಾನದ ಸ್ವಂತ ಅಣೆಕಟ್ಟು ಸಾಮರ್ಥ್ಯವು ಸುಮಾರು 30 ದಿನಗಳ ಸಿಂಧೂ ಹರಿವನ್ನು ಮಾತ್ರ ಹಿಡಿದುಕೊಳ್ಳಬಲ್ಲದು. ಹೀಗಾಗಿ ಯಾವುದೇ ದೀರ್ಘಕಾಲದ ನೀರಿನ ಅಲಭ್ಯತೆ ಹಾನಿಕಾರಕವಾಗಿರುತ್ತದೆ ಎಂದು ವರದಿ ಹೇಳಿದೆ. ಭಾರತದ ಪ್ರಸ್ತುತ ಮೂಲಸೌಕರ್ಯವು ನದಿ ಹರಿವನ್ನು ನಿಲ್ಲಿಸುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ ಎಂದು ವರದಿ ಹೇಳಿದೆ, ಸಣ್ಣ ಅಡಚಣೆಗಳು ಸಹ ಪಾಕಿಸ್ತಾನದ ಕೃಷಿ ವಲಯಕ್ಕೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸ್ಪಷ್ಟಪಡಿಸಿದೆ. ಅಂದರೆ ಪಾಕಿಸ್ತಾನದ ಕೃಷಿ ಚಟುವಟಿಕೆಗಳು ಹೆಚ್ಚು ಕಡಿಮೆ ಸ್ಥಗಿತಗೊಳ್ಳುವ ಹಂತವನ್ನು ತಲುಪಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?

ಅಡಿಕೆ ಎಲೆಚುಕ್ಕಿ ರೋಗ ವ್ಯಾಪಕವಾಗಿದೆ. ಮಲೆನಾಡು ತಪ್ಪಲು ಭಾಗಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗ…

7 hours ago

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ

ಉತ್ತರ ಪ್ರದೇಶ ಸರ್ಕಾರವು ಕಿಸಾನ್ ಪಾಠಶಾಲೆ ಕಾರ್ಯಕ್ರಮದ ಮೂಲಕ 2025–26 ಹಂಗಾಮಿನಲ್ಲಿ 20.15…

16 hours ago

ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ

ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಆಹ್ವಾನ ಮಾಡಿದೆ.…

16 hours ago

ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ

ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು…

17 hours ago

ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!

ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ…

17 hours ago

ಯಶಸ್ವಿನಿ ಕಾರ್ಡ್ ಅರ್ಜಿ ಪ್ರಾರಂಭ

ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದದ ದೊಡ್ಡ ಮಟ್ಟದ…

17 hours ago