ಪುತ್ತೂರಿನ ಕೊಂಬೆಟ್ಟು ಪಶುಪತಿ ಲೈಟ್ಸ್, ಫ್ರಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಜುಲೈ 24ರಿಂದ 31ರವರೆಗೆ ಜನರೇಟರ್’ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ. ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಮತ್ತು ಜೀನ್’ಎಕ್ಸ್ ಬ್ರಾಂಡ್’ಗಳ ಜನರೇಟರ್’ಗಳು ಲಭ್ಯವಾಗಲಿದೆ.
ಜುಲೈ 24ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನೆಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಹಾಗೂ ಹೋಂಡಾ ಸಂಸ್ಥೆಯ ಮಹೇಶ್ ಜೋಶಿ, ಕುಕ್ಕಿಲ ಎಂಟರ್’ಪ್ರೈಸಸ್ ಮಾಲಕರಾದ ವೆಂಕಟರಮಣ ಭಟ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಪಶುಪತಿ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಕೋನದಿಂದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹ ಜನರೇಟರ್’ಗಳನ್ನು ಇಲ್ಲಿ ಕಾಣಲು ಸಾಧ್ಯ. ಪ್ರಮುಖವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕರಾವಳಿ ಭಾಗದ ಕೃಷಿ ಚಟುವಟಿಕೆ ಸೊರಗುತ್ತಿರುವ ಕೆಲ ಉದಾಹರಣೆಯೂ ನಮ್ಮ ಮುಂದೆ ಬರುತ್ತದೆ. ಇದಕ್ಕೆ ಪರಿಹಾರದ ರೂಪದಲ್ಲಿ ಜನರೇಟರ್’ಗಳನ್ನು ಅನ್ವೇಷಿಸಿದ್ದು, ಕೃಷಿಕರ ಮುಂದೆ ಬರಲಿದೆ. ಇದಲ್ಲದೇ ಕನ್’ಸ್ಟ್ರಕ್ಷನ್ / ಫ್ಯಾಬ್ರಿಕೇಷನ್ / ಎಲೆಕ್ಟ್ರಿಕಲ್ ವೆಲ್ಡಿಂಗ್ ಕೆಲಸಗಳಿಗಾಗಿ, ಅಂಗಡಿ – ಮಳಿಗೆಗಳಿಗಾಗಿ, ದಿನಬಳಕೆ ಹಾಗೂ ಕೈಗಾರಿಕೆಗಳಿಗಾಗಿ ವಿವಿಧ ವಿನ್ಯಾಸದ ಜನರೇಟರ್’ಗಳು ಲಭ್ಯವಾಗಲಿದೆ.
ಹೋಂಡಾ ಎಂಜಿನ್ ಹೊಂದಿರುವ ಈ ಜನರೇಟರ್’ಗಳು ಅತ್ಯುತ್ತಮ ಗುಣಮಟ್ಟ, ದೀರ್ಘ ಬಾಳಿಕೆ, ಪವರ್ ಬ್ಯಾಕಪ್, 1 ವರ್ಷದ ವ್ಯಾರೆಂಟಿ, ಕಡಿಮೆ ಬೆಲೆ ನಮ್ಮೂರಿನಲ್ಲೇ ಲಭ್ಯವಾಗಲಿದೆ ಎನ್ನುವುದು ಇಲ್ಲಿನ ವಿಶೇಷತೆ.
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…