Advertisement
MIRROR FOCUS

ಅಡಿಕೆ ಹಳದಿ ಎಲೆರೋಗ ಪ್ರದೇಶದಲ್ಲಿ ಪರ್ಯಾಯ ಬೆಳೆ | ಹಣ್ಣಿನ ಕೃಷಿಯ ಬಗ್ಗೆ ಮಾಹಿತಿ | ತೋಟಗಾರಿಕಾ ಇಲಾಖೆ-ಸಹಕಾರಿ ಸಂಘದಿಂದ ಜಾಗೃತಿ ಕಾರ್ಯಕ್ರಮ | ಮಾರುಕಟ್ಟೆಗೆ ಸಹಕಾರಿ ಸಂಘ ಸ್ಥಾಪನೆಯ ಕಡೆಗೂ ಯೋಚನೆ |

Share

ಸುಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಈಗ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗುತ್ತಿದೆ. ಸುಳ್ಯದಲ್ಲಿ ಅಡಿಕೆಗೆ ಹಳದಿ ಎಲೆರೋಗದ ಆತಂಕವಾದರೆ, ಕೆಲವು ಕಡೆ ಎಲೆಚುಕ್ಕಿ ರೋಗದ ಭೀತಿ. ಇದೆಲ್ಲದರ ಜೊತೆಗೆ ಈಗ ಅಡಿಕೆ ಬೆಳೆವಿಸ್ತರಣೆಯ ವೇಗದಲ್ಲಿ ಮಾರುಕಟ್ಟೆಯ ಬಗ್ಗೆಯೂ ಆತಂಕ ಆರಂಭವಾಗಿದೆ.

Advertisement
Advertisement
Advertisement

ಇಂತಹ ಸಂದರ್ಭದಲ್ಲಿ ಪರ್ಯಾಯ ಬೆಳೆಯ ಬಗ್ಗೆ ಕೃಷಿಕರಿಗೆ ಮಾಹಿತಿ , ಜಾಗೃತಿ ನೀಡುವುದು ಅಗತ್ಯ ಇದೆ. ಈ ಕೆಲಸವನ್ನು  ವಿವಿಧ ಸಹಕಾರಿ ಸಂಘಗಳು, ಸಂಘಟನೆಗಳು ಮಾಡುತ್ತಿವೆ. ಅದರಲ್ಲಿ ಸುಳ್ಯ ತೋಟಗಾರಿಕಾ ಇಲಾಖೆ ಹಾಗೂ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘವು ಈಗ ಎರಡನೇ ಬಾರಿಗೆ ತಮ್ಮ ವ್ಯಾಪ್ತಿಯ ಕೃಷಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಿದೆ.ಅದರ ಜೊತೆಗೆ ಹಣ್ಣು ಕೃಷಿಯಲ್ಲಿ ಹಣ್ಣುಗಳ ಮಾರುಕಟ್ಟೆಗೂ ಸಹಕಾರಿ ಸಂಘ ಸ್ಥಾಪನೆಯ ಬಗ್ಗೆಯೂ ಯೋಚನೆ ನಡೆಯುತ್ತಿದೆ.

Advertisement

ಒಂದು ಕಡೆ ಅಡಿಕೆ ಬೆಳೆ ವಿಸ್ತರಣೆ ವಿಪರೀತವಾಗುತ್ತಿದೆ . ಇನ್ನೊಂದು ಕಡೆ ಅಡಿಕೆಗೆ ವಿವಿಧ ರೋಗಗಳು ಬಾಧಿಸುತ್ತದೆ. ಮತ್ತೊಂದು ಕಡೆ ಅಡಿಕೆ ಮಾರುಕಟ್ಟೆ ಬಗ್ಗೆ ಅಸ್ಥಿರತೆ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಸರಿಯಾದ ಮಾರ್ಗದರ್ಶನ, ಪರ್ಯಾಯ ಕೃಷಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕಾದ್ದು ಕೂಡಾ ಅಗತ್ಯ ಇದೆ. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯು ಸರ್ಕಾರದ ಯೋಜನೆ, ಅನುದಾನ, ಸಹಕಾರದ ಬಗ್ಗೆ ಮಾಹಿತಿ ನೀಡಿದರೆ, ಕೃಷಿಕರ ಜೊತೆಗೆ ನಾವಿದ್ದೇವೆ ಎನ್ನಬೇಕಾದ್ದು ಸಹಕಾರ ಸಂಘಗಳು ಹಾಗೂ ಪ್ರಮುಖ ಸಂಘಗಳು. ಕೃಷಿ ಪರವಾಗಿರುವ ವ್ಯಕ್ತಿಗಳು.  ಈಗ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘವು ತನ್ನ ವ್ಯಾಪ್ತಿಯ ಕೃಷಿಕರಿಗೆ ಅಡಿಕೆ ಬೆಳೆಯ ಜೊತೆಗೆ ಪರ್ಯಾಯ ಬೆಳೆಯ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಈ ಸಹಕಾರಿ ಸಂಘದ ವ್ಯಾಪ್ತಿಯಲ್ಲೂ ಅಡಿಕೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಕಂಡುಬಂದಿದೆ. ಕೆಲವು ಕೃಷಿಕರು ಸಂಕಷ್ಟದಲ್ಲಿದ್ದಾರೆ.

ಆರಂಭದಲ್ಲಿ ತೋಟಗಾರಿಕಾ ಇಲಾಖೆಯು ಹಣ್ಣು ಕೃಷಿಯ ಬಗ್ಗೆ ಮಾಹಿತಿ ನೀಡಿತು. ಇದಕ್ಕಾಗಿ ಐಐಎಚ್‌ಆರ್‌ ನ ವಿಜ್ಞಾನಿ ಡಾ. ಮುರಳಿ ಅವರು ರಂಬುಟಾನ್‌ ಹಣ್ಣಿನ ಕೃಷಿ ಸಹಿತ ವಿವಿಧ ಹಣ್ಣಿನ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಮಲೆನಾಡಿನಲ್ಲಿ, ಅಡಿಕೆ ಬೆಳೆಯ ಜೊತೆಗೆ ಯಾವುದೆಲ್ಲಾ ಹಣ್ಣಿನ ಕೃಷಿಯನ್ನು ಬೆಳೆಸಬಹುದು ಎಂದು ಮಾಹಿತಿ ನೀಡಿದರು.

Advertisement

ಅಡಿಕೆ ಜೊತೆಗೆ ಕಾಳುಮೆಣಸು, ಜಾಯಿಕಾಯಿ ಕೃಷಿಯನ್ನು ಹೇಗೆ ಬೆಳೆಯಬಹುದು ಎಂದು ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ತೊಟ್ಟೆತ್ತೋಡಿ ಅವರು ಮಾಹಿತಿ ನೀಡಿದರು. ಅಡಿಕೆಯ ಜೊತೆಗೆ ಉಪಬೆಳೆಯಾಗಿಯೂ, ಪ್ರಮುಖ ಬೆಳೆಯಾಗಿಯೂ ಹೇಗೆ ಬೆಳೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್‌ ಮೂಲೆತೋಟ ಅವರು ಕೃಷಿಕರಿಗೆ ಧೈರ್ಯ ತುಂಬಿದರು. ಅಡಿಕೆಯ ಜೊತೆಗೆ ಪರ್ಯಾಯ ಕೃಷಿಯನ್ನು ಈಗಲೇ ಬೆಳೆಯುವುದಕ್ಕೆ ಆರಂಭಿಸಬೇಕಿದೆ. ವಿವಿಧ ರೋಗಗಳು ಅಡಿಕೆಯನ್ನು ಕಾಡುತ್ತಿರುವಾಗ ಆಹಾರ ಬೆಳೆಯ ಸಾಲಿನಲ್ಲಿರುವ ಹಣ್ಣಿನ  ಕೃಷಿಯ ಕಡೆಗೆ ಆಸಕ್ತರಾಗಬೇಕು  ಎಂದರು. ಹಣ್ಣಿನ ಬೆಳೆಗಳ ಮಾರುಕಟ್ಟೆ ಬಗ್ಗೆಯೂ ಯೋಜನೆ ತಿಳಿಸಿದ ವಿಷ್ಣು ಭಟ್‌ ಅವರು, ಸಹಕಾರಿ ಸಂಸ್ಥೆಯ ಮಾದರಿಯಲ್ಲಿಯೇ ಹಣ್ಣಿನ ಕೃಷಿಯಲ್ಲಿ ಹಣ್ಣು ಬೆಳೆಗಳ ಮಾರಾಟ ಮತ್ತು ಮೌಲ್ಯವರ್ಧನೆಗೆ ಸಹಕಾರಿ ಸಂಘ ಸ್ಥಾಪನೆ ಬಗ್ಗೆಯೂ ಯೋಚನೆ ನಡೆಸಲಾಗಿದೆ. ಭವಿಷ್ಯದಲ್ಲಿ ಅಡಿಕೆಯ ಬೆಳೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಂತಹ ರೋಗಗಳು ಕಾಡುವ ವೇಳೆ ಅಡಿಕೆ  ಜೊತೆಗೆ ಅಥವಾ ಅಡಿಕೆಗೆ ಪರ್ಯಾಯವಾಗಿ ಇನ್ನೊಂದು ಕೃಷಿ ಅಗತ್ಯ ಇದೆ, ಮಾರುಕಟ್ಟೆಯ ಬಗ್ಗೆ ಆಗಲೂ ದಿಟ್ಟ ನಿರ್ಧಾರ ಅಗತ್ಯ ಇದೆ  ಎಂದು ವಿಷ್ಣು ಭಟ್‌ ಅವರು ಕೃಷಿಕರಿಗೆ ಧೈರ್ಯ ತುಂಬಿದರು.

Advertisement

ಎಲ್ಲೆಡೆ ಅಡಿಕೆ ಬೆಳೆ ವಿಸ್ತರಣೆಯ ವೇಗ ಇದ್ದರೆ, ಧಾರಣೆಯ ಅಸ್ಥಿರತೆ ಈಗಾಗಲೇ ಆರಂಭವಾಗಿದೆ. ಸುಳ್ಯದಂತಹ ಪ್ರದೇಶದಲ್ಲಿ ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿರೋಗ ಹರಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಕೃಷಿಕರು ಧೈರ್ಯದಿಂದ  ಎದುರಿಸಿ ಮುನ್ನಡೆಯುವುದು ಹಾಗೂ ಸಹಕಾರಿ ಸಂಘಗಳೂ , ತೋಟಗಾರಿಕಾ ಇಲಾಖೆಯೂ ರೈತರ ಜೊತೆ ನಿಲ್ಲುವ ಕೆಲಸ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

Advertisement

Horticulture Department and cooperative societies are conducting various programs to make farmers interested in fruit cultivation along with Arecanut cultivation.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

5 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

6 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

1 day ago