ರೈತರ ಹಿತದೃಷ್ಟಿಯಿಂದ ಕೇಂದ್ರ ಸಚಿವ ಸಂಪುಟ ಮೂರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಬೆಳೆ ಹಾನಿಗೆ ಸೂಕ್ತ ವಿಮೆ ನೀಡಲಾಗುತ್ತಿದೆ. ಕಟಾವಿನ ನಂತರ ಬೆಳೆ ಹಾನಿಯಾದರೂ ಸಹ ವಿಮೆಯನ್ನು ನೀಡಲಾಗುವುದು. ಬಿತ್ತನೆಯಿಂದ ಕಟಾವಿನ ನಂತರದವರೆಗೂ ಹಾನಿಗೆ ವಿಮೆ ಒದಗಿಸಲಾಗುವುದು ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಕಳೆದ ವರ್ಷ ನಾಲ್ಕು ಕೋಟಿ ರೈತರು ಫಸಲ್ ಬಿಮಾ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಬೆಳೆ ಹಾನಿ ಅಂದಾಜಿಸಲು ದೂರಸಂವೇದಿ ಮಾಪನ ಬಳಸಿಕೊಳ್ಳಲಾಗುತ್ತಿದೆ. ಫಸಲ್ ಬಿಮಾ ಯೋಜನೆಯಡಿ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ 850 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಹೇಳಿದರು. ಈ ಬಾರಿ ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಉತ್ತಮ ಪ್ರಗತಿಯಾಗಿದೆ. ಅಕ್ಕಿ ರಫ್ತಿಗೆ ಕನಿಷ್ಠ ರಪ್ತು ದರ ರದ್ದುಪಡಿಸಲಾಗಿದ್ದು, ಅಕ್ಕಿ ರಫ್ತಿಗೆ ಅನುಮತಿಸಲಾಗಿದೆ. ಇಂಡೋನೇಷ್ಯಾಗೆ 10 ಲಕ್ಷ ಮೆಟ್ರಿಕ್ ಟನ್ ಬಾಸುಮತಿ ಅಕ್ಕಿ ರಫ್ತು ಮಾಡಲು ಅಲ್ಲಿನ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಳೆ ಕಡಿಮೆ ಬೀಳುವ ಪ್ರದೇಶವಾದ ಹೊಸದುರ್ಗ ತಾಲ್ಲೂಕಿನ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಹವಾಮಾನವೂ ಇದಕ್ಕೆ…
ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷಾರಂಭದಿಂದ ನವೆಂಬರ್‌ವರೆಗೆ 1585 ಕ್ಷಯರೋಗಿಗಳನ್ನು ಪತ್ತೆ ಮಾಡಲಾಗಿದ್ದು, ಅಗತ್ಯ…
ಮಂಗಳೂರಿನಲ್ಲಿ ರಾಜ್ಯಮಟ್ಟದ ಗೆಡ್ಡೆಗೆಣಸು ಮೇಳ ನಡೆಯುತ್ತಿದೆ. ರೈತರು ಹಾಗೂ ಗ್ರಾಹಕರ ನಡುವೆ ಸಂಪರ್ಕ…
ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಜ. 4 ಮತ್ತು 5 ರಂದು…
ಡಿಜಿಟಲ್ ಗೀಳು ಮಕ್ಕಳ ಬುದ್ಧಿಯನ್ನು ಹಾಳು ಮಾಡುವ ಒಂದು ಕಾಯಿಲೆ. ಮನೆಯಲ್ಲಿ ಕಲಿತು…
ಕೃಷಿ ಸಂಕಷ್ಟದಲ್ಲಿದೆ. ಬೆಳೆ ನಷ್ಟ ಹೆಚ್ಚಾಗುತ್ತಿದೆ. ಒಂದೋ ವಿಪರೀತ ಮಳೆ ಅಥವಾ ಬರಗಾಲ.…