ಎಲ್ಲರಿಗೂ 8 ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ( International Ayurveda Day) ಹಾಗೂ ಧನ್ವಂತರಿ ಜಯಂತಿಯ(dhanvantari jayanti) ಹಾರ್ದಿಕ ಶುಭಾಶಯಗಳು. ಆಯುರ್ವೇದವು(Aayurveda) 3,000 ವರ್ಷಗಳಿಗೂ ಹಳೆಯದಾದ ಭಾರತದಲ್ಲಿ(Bharat) ಹುಟ್ಟಿದ ಔಷಧ ಮತ್ತು ಚಿಕಿತ್ಸಾ ಪದ್ಧತಿ(Medicine and therapy)ಯಾಗಿದೆ. ನೈಸರ್ಗಿಕ ಚಿಕಿತ್ಸಾ ಪದ್ಧತಿ ಆಗಿದ್ದು ಯಾವುದೇ ಅಡ್ಡ ಪರಿಣಾಮಗಳಿಂದ ಮುಕ್ತವಾಗಿರುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್(Health)ಯ ಹಾಗೂ ದೀರ್ಘ ಆಯಸ್ಸು(Long life) ಪಡೆಯುವುದು ಹೇಗೆ ಎಂಬುದನ್ನು ಹೇಳುವುದೇ ಆಯುರ್ವೇದದ ಮೂಲ ಉದ್ದೇಶ.
ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಆಯುರ್ವೇದ ಚಿಕಿತ್ಸೆ ಪ್ರಾಚೀನ ಭಾರತದಿಂದ ಬೆಳೆದು ಬಂದಿದೆ. ಆಯುರ್ವೇದ ಎಂಬುವುದು ಜೀವ ವಿಜ್ಞಾನ ನಮ್ಮ ಹಿರಿಯರ, ಋಷಿಮುನಿಗಳ ಸಾವಿರಾರು ವರ್ಷಗಳ ಅನ್ವೇಷಣೆಯ ಫಲ ಇದಾಗಿದೆ. ಮಾನವನ ಶರೀರ, ಇಂದ್ರಿಯ, ಮನಸ್ಸು ಹಾಗೂ ಆತ್ಮ ಈ ನಾಲ್ಕು ಭಾಗಗಳು ಸಮತೋಲನದಲ್ಲಿರುವುದೇ ಸ್ವಾಸ್ಥ್ಯ /ಆರೋಗ್ಯ ಎಂಬುದಾಗಿ ಹೇಳಲಾಗುತ್ತದೆ.
ಸ್ವಸ್ಥಸ್ಯ ಸ್ವಾಸ್ತ್ಯ ರಕ್ಷಣಂ ಆತುರಸ್ಯ ವಿಕಾರ ಪ್ರಶಮನo ರೋಗಬಾರದ ಹಾಗೆ ಮುನ್ನೆಚ್ಚರಿಕೆಯಿಂದ ಇರಲು ಬೇಕಾದ ಸುಲಭೋಪಾಯಗಳನ್ನು ತಿಳಿಸುವುದು ಹಾಗೂ ರೋಗ ಬಂದಾಗ ಅದರ ಮೂಲ ಕಾರಣವನ್ನು ತಿಳಿದು ನಿವಾರಣೋಪಾಯವನ್ನು ತಿಳಿಸುವುದೇ ಆಯುರ್ವೇದದ ಮೂಲ ಉದ್ದೇಶ.
ಚತುರ್ವೇದಗಳಲ್ಲಿ ಒಂದಾದ ಅಥರ್ವ ವೇದದಲ್ಲಿ ಆಯುರ್ವೇದದ ಬಗ್ಗೆ ಅತ್ಯದ್ಭುತ ಹಾಗೂ ವಿಚಾರಪೂರಿತ ವಿವರಗಳನ್ನು ವರ್ಣಿಸಲಾಗಿದೆ. ಮೊಟ್ಟಮೊದಲಾಗಿ ಆಯುರ್ವೇದವನ್ನು ಜಗತ್ತಿಗೆ ಕೊಟ್ಟವರು ಶ್ರೀ ಧನ್ವಂತರಿ ಎಂಬ ದಿವ್ಯತೇಜಸ್ವಿ ಹಾಗೂ ದೇವಪುರುಷ ಎಂಬುದಾಗಿ ತಿಳಿದು ಬಂದಿದೆ.. ಆಯುರ್ವೇದದ ಆದಿದೇವತೆ ಎಂದು ಪೂಜಿಸಲ್ಪಡುವ ಶ್ರೀ ಧನ್ವಂತರಿ ಜಯಂತಿಯಂದು ಆಯುರ್ವೇದ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪಂಚಕರ್ಮ ಚಿಕಿತ್ಸೆ,. ದಿನಾಚರ್ಯ,ಪಥ್ಯ ಆಹಾರ ವಿಹಾರ, ಯೋಗಾಸನ, ವ್ಯಾಯಾಮ, ನೈಸರ್ಗಿಕ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿಗಳ ಬಳಕೆ ಇವುಗಳನ್ನು ವಿವರವಾಗಿ ತಿಳಿಸಲಾಗಿದೆ.
ಪ್ರಾಚೀನ ಭಾರತದಿಂದ ಬೆಳೆದು ಬಂದ ಈ ಆಯುರ್ವೇದ ವೈದ್ಯ ಪದ್ಧತಿಯನ್ನು ತಾವೆಲ್ಲರೂ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲಿ. ಭಗವಾನ್ ಶ್ರೀ ಧನ್ವಂತರಿಯು ಎಲ್ಲರಿಗೂ ಉತ್ತಮವಾದ ಆರೋಗ್ಯವನ್ನು ನೀಡಲಿ ಎಂದು ಶುಭ ಹಾರೈಸುವ…
31.10.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಅಡಿಕೆ ಸಿಪ್ಪೆಯ ನೂಲು ಈಗ ಜವಳಿ ಉದ್ಯಮದಲ್ಲಿ ಉತ್ತಮವಾದ ಫಲಿತಾಂಶ ನೀಡಿದೆ.ಅಡಿಕೆ ಸಿಪ್ಪೆಯಿಂದ…
ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿ ವಿಸ್ತರಿಸಲಾಗಿದ್ದು, 70 ವರ್ಷ ದಾಟಿದ ಎಲ್ಲರಿಗೂ ಇದರಡಿ …
ರಾಜ್ಯದ ವಿವಿಧೆಡೆ ಜಿಲ್ಲಾಡಳಿತದಿಂದ ಧನ್ವಂತರಿ ಜಯಂತಿ ಆಚರಿಸಲಾಯಿತು. ಇದರ ಅಂಗವಾಗಿ ಆಯುರ್ವೇದ ಚಿಕಿತ್ಸೆ…
ರೈತರ ಹಿತಾಸಕ್ತಿ ರಕ್ಷಣೆಗಾಗಿ ಪ್ರತಿ ಜಿಲ್ಲೆಗಳಲ್ಲಿ ರೈತರಿಗೆ ತರಬೇತಿ ಕೇಂದ್ರ ಸ್ಥಾಪಿಸಲು ಸಚಿವ…
ಒಳನಾಡಿನಲ್ಲಿ ಹಿಂಗಾರು ಮಳೆ ಕಡಿಮೆ ಸಾಧ್ಯತೆ.