World Forestry Day | ಭೂಮಿಯ ಮೇಲೆ ಜೀವ ಉಳಿಸುವ ಕಾಡನ್ನು ಉಳಿಸೋಣ… |

March 21, 2024
10:59 AM
ಅಂತರಾಷ್ಟ್ರೀಯ ಅರಣ್ಯ ದಿನದ ಸಂದರ್ಭದಲ್ಲಿ ಅರಣ್ಯ ರಕ್ಷಣೆಯ, ಅರಣ್ಯ ಉಳಿಸುವ-ಬೆಳೆಸುವ ಬಗ್ಗೆ ಜನರು ಹೆಜ್ಜೆ ಇಡಬೇಕಿದೆ.

ಈಚೆಗೆ ದೆಹಲಿಯಲ್ಲಿ ವಾಯುಮಾಲಿನ್ಯದ ಕಾರಣದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು.ಕಾಡು ಉಳಿಸಿ ನಾಡು ಬೆಳೆಸಿ ಎನ್ನುವ ಶಾಲಾ ಮಕ್ಕಳೇ ಹೊಗೆಯ ಕಾರಣದಿಂದ ರಜೆಯೊಂದಿಗೆ ಮನೆ ಸೇರಿದರು. ಸಾವಿರಾರು ಮಂದಿ ಅಸ್ತಮಾ ಕಾಯಿಲೆಗೆ ತುತ್ತಾದರು..!. ಕಾರಣ ಮಾಲಿನ್ಯ.. ಭೂಮಿಯ ಮೇಲೆ ಹಸಿರು ಇದ್ದರೆ ಮಾತ್ರವೇ ಈ ಭೂಮಿಯಲ್ಲಿ ಎಲ್ಲಾ ಪ್ರಾಣಿಗಳೂ ನೆಮ್ಮದಿಯಿಂದ ಇರಲು ಸಾಧ್ಯ. ಇದಕ್ಕಾಗಿಯೇ ಹಸಿರು ಉಳಿಸೋಣ, ಹಸಿರು ಬೆಳೆಸೋಣ. ಇಂದು ಅಂತರಾಷ್ಟ್ರೀಯ ಅರಣ್ಯ ದಿನ.

Advertisement
Advertisement

ಈ ವರ್ಷದ ಅಂತರಾಷ್ಟ್ರೀಯ ಅರಣ್ಯ ದಿನವನ್ನು “ಅರಣ್ಯಗಳು ಮತ್ತು ಆವಿಷ್ಕಾರ – ಉತ್ತಮ ಜಗತ್ತಿಗಾಗಿ ಹೊಸ ಪರಿಹಾರ” ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ಅರಣ್ಯ-ಪರಿಸರ ವ್ಯವಸ್ಥೆಗಳ ಸಂರಕ್ಷಣೆಯಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಅಗತ್ಯ ಪಾತ್ರ ಇದೆ.ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯ ಬೆಳವಣಿಗೆಯು ಈಗಾಗಲೇ ಅಪಾಯವನ್ನು ಸೂಚಿಸಿದೆ. ಇದಕ್ಕಾಗಿ ಈ ಬದಲಾವಣೆಯನ್ನು ನಿಯಂತ್ರಿಸಲು ನಮ್ಮ ಕಾಡುಗಳಿಗೆ ತಾಂತ್ರಿಕವಾದ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ. ಕಾಡನ್ನು ಉಳಿಸುವುದು ಹಾಗೂ ಬೆಳೆಸುವುದು ಅತೀ ಅಗತ್ಯವಾದ ವಿಷಯವಾಗಿದೆ.

Advertisement

ನಮ್ಮ ನಾಡಿನ ಹಸಿರು , ಅವುಗಳು ಭೂಮಿಯ ಮೇಲಿನ  ಹಸಿರಿನ ತೇಪೆಗಳಲ್ಲ. ಅವು ನಮ್ಮ ಅಸ್ತಿತ್ವದ ಜೀವಾಳ. ಅದರ ಬಗ್ಗೆ ಸುಮ್ಮನೆ ಯೋಚಿಸಿದಾಗ ಕೃತಜ್ಞತಾ ಭಾವವು ಜಾಗೃತವಾಗುತ್ತದೆ. ಪ್ರತೀ ಕ್ಷಣ ನಾವು ತೆಗೆದುಕೊಳ್ಳುವ ಪ್ರತಿ ಉಸಿರು, ಆನಂದಿಸುವ ಕ್ಷಣ,  ಸೌಕರ್ಯದ ಪ್ರತಿ ಕ್ಷಣವು ಕೂಡಾ ಕಾಡುಗಳಿಗೆ ಅರ್ಪಣೆಯಾಗಬೇಕು. ಇದಕ್ಕಾಗಿಯೇ ಅರಣ್ಯಗಳನ್ನು ಭೂಮಿಯ ಶ್ವಾಸಕೋಶ ಎಂದು ಪರಿಗಣಿಸಲಾಗುತ್ತದೆ. ಮರಗಳು ಕಾರ್ಬನ್‌ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡುವ ಮೂಲಕ ಗಾಳಿಯನ್ನು ಫಿಲ್ಟರ್ ಮಾಡುತ್ತವೆ‌,  ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಪರಿಸರ ವ್ಯವಸ್ಥೆಗಳ ಮರುಸ್ಥಾಪನೆ ಹೇಗೆ…? ತಾಂತ್ರಿಕತೆ ಬಳಕೆ ಹೇಗೆ..? : ಪರಿಸರ ವ್ಯವಸ್ಥೆಯಲ್ಲಿ ಮತ್ತೆ ಕಾಡುಗಳ ಮರುಸ್ಥಾಪನೆ, ಉಳಿಸಿಕೊಳ್ಳುವ ತೀವ್ರ ಅನಿವಾರ್ಯತೆ ಇದೆ.  ಏಕೆಂದರೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಿಕೆಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿಕೊಂಡಿದೆ. ಹವಾಮಾನ ಬದಲಾವಣೆಯು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕಾಡು ನಾಶವು ಆಹಾರ ಭದ್ರತೆಯ ಮೇಲೆ, ಉಸಿರಾಡುವ ಗಾಳಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇದಕ್ಕಾಗಿಯೇ ಕಳೆದುಹೋದ ಹಸಿರು ಹೊದಿಕೆಯನ್ನು ಪುನಃ ತುಂಬಿಸುವ ಕಾರ್ಯ ನಡೆಯಬೇಕಿದೆ.

Advertisement

ಹೊಸ ತಂತ್ರಜ್ಞಾನಗಳ ಮೂಲಕ, ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿನ ಕ್ಷಿಪ್ರ ಪ್ರಗತಿಗಳು ಅರಣ್ಯ ನಿರ್ವಹಣೆಯಲ್ಲಿ ಬಳಸಿಕೊಳ್ಳಬೇಕಿದೆ. ಈ ಆವಿಷ್ಕಾರಗಳು ಅರಣ್ಯಗಳ ಉಳಿಸಿಕೊಳ್ಳುವಿಕೆ, ಅರಣ್ಯ ನಿರ್ವಹಣೆ, ಬೆಂಕಿಯನ್ನು ಪತ್ತೆಹಚ್ಚಲು ಹಾಗೂ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಹವಾಮಾನ ಬದಲಾವಣೆ ನಿಯಂತ್ರಣದಲ್ಲಿ ಅರಣ್ಯಗಳ ಪಾತ್ರ : ಹವಾಮಾನ ಬಿಕ್ಕಟ್ಟು ಈಗ ಬಹುದೊಡ್ಡ ಸವಾಲಾಗಿದೆ. ಇಡೀ ಪ್ರಪಂಚದಲ್ಲಿಯೇ ಈ ಬಗ್ಗೆ ಚರ್ಚೆ, ಅಧ್ಯಯನ ನಡೆಯುತ್ತಿದೆ. ಜಾಗತಿಕ ತಾಪಮಾನ ಏರಿಕೆಯ  ಪರಿಣಾಮಗಳನ್ನು ತಪ್ಪಿಸುವಲ್ಲಿ ಅರಣ್ಯಗಳೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧ್ಯಯನ ವರದಿಗಳು ಹೇಳಿವೆ.

Advertisement

ರಾಜ್ಯದಲ್ಲಿಯೂ ಅರಣ್ಯ ರಕ್ಷಣೆಗೆ ಪ್ರಮುಖವಾದ ಕಾರ್ಯಗಳು ಜನರಿಂದಲೇ ನಡೆಯಬೇಕಿದೆ. ಕಳೆದ 7 ವರ್ಷಗಳಲ್ಲಿ  15 ಸಾವಿರ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ನಾಶವಾಗಿದೆ. ಹೀಗಾಗಿ ಜನರು ಜಾಗೃತರಾಗಿ ಕಾಡು ಉಳಿಸುವ-ಬೆಳೆಸುವ ಕಾರ್ಯವನ್ನು ನಡೆಸಬೇಕಿದೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror