ಈಚೆಗೆ ದೆಹಲಿಯಲ್ಲಿ ವಾಯುಮಾಲಿನ್ಯದ ಕಾರಣದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು.ಕಾಡು ಉಳಿಸಿ ನಾಡು ಬೆಳೆಸಿ ಎನ್ನುವ ಶಾಲಾ ಮಕ್ಕಳೇ ಹೊಗೆಯ ಕಾರಣದಿಂದ ರಜೆಯೊಂದಿಗೆ ಮನೆ ಸೇರಿದರು. ಸಾವಿರಾರು ಮಂದಿ ಅಸ್ತಮಾ ಕಾಯಿಲೆಗೆ ತುತ್ತಾದರು..!. ಕಾರಣ ಮಾಲಿನ್ಯ.. ಭೂಮಿಯ ಮೇಲೆ ಹಸಿರು ಇದ್ದರೆ ಮಾತ್ರವೇ ಈ ಭೂಮಿಯಲ್ಲಿ ಎಲ್ಲಾ ಪ್ರಾಣಿಗಳೂ ನೆಮ್ಮದಿಯಿಂದ ಇರಲು ಸಾಧ್ಯ. ಇದಕ್ಕಾಗಿಯೇ ಹಸಿರು ಉಳಿಸೋಣ, ಹಸಿರು ಬೆಳೆಸೋಣ. ಇಂದು ಅಂತರಾಷ್ಟ್ರೀಯ ಅರಣ್ಯ ದಿನ.
ಈ ವರ್ಷದ ಅಂತರಾಷ್ಟ್ರೀಯ ಅರಣ್ಯ ದಿನವನ್ನು “ಅರಣ್ಯಗಳು ಮತ್ತು ಆವಿಷ್ಕಾರ – ಉತ್ತಮ ಜಗತ್ತಿಗಾಗಿ ಹೊಸ ಪರಿಹಾರ” ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ಅರಣ್ಯ-ಪರಿಸರ ವ್ಯವಸ್ಥೆಗಳ ಸಂರಕ್ಷಣೆಯಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಅಗತ್ಯ ಪಾತ್ರ ಇದೆ.ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯ ಬೆಳವಣಿಗೆಯು ಈಗಾಗಲೇ ಅಪಾಯವನ್ನು ಸೂಚಿಸಿದೆ. ಇದಕ್ಕಾಗಿ ಈ ಬದಲಾವಣೆಯನ್ನು ನಿಯಂತ್ರಿಸಲು ನಮ್ಮ ಕಾಡುಗಳಿಗೆ ತಾಂತ್ರಿಕವಾದ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ. ಕಾಡನ್ನು ಉಳಿಸುವುದು ಹಾಗೂ ಬೆಳೆಸುವುದು ಅತೀ ಅಗತ್ಯವಾದ ವಿಷಯವಾಗಿದೆ.
ನಮ್ಮ ನಾಡಿನ ಹಸಿರು , ಅವುಗಳು ಭೂಮಿಯ ಮೇಲಿನ ಹಸಿರಿನ ತೇಪೆಗಳಲ್ಲ. ಅವು ನಮ್ಮ ಅಸ್ತಿತ್ವದ ಜೀವಾಳ. ಅದರ ಬಗ್ಗೆ ಸುಮ್ಮನೆ ಯೋಚಿಸಿದಾಗ ಕೃತಜ್ಞತಾ ಭಾವವು ಜಾಗೃತವಾಗುತ್ತದೆ. ಪ್ರತೀ ಕ್ಷಣ ನಾವು ತೆಗೆದುಕೊಳ್ಳುವ ಪ್ರತಿ ಉಸಿರು, ಆನಂದಿಸುವ ಕ್ಷಣ, ಸೌಕರ್ಯದ ಪ್ರತಿ ಕ್ಷಣವು ಕೂಡಾ ಕಾಡುಗಳಿಗೆ ಅರ್ಪಣೆಯಾಗಬೇಕು. ಇದಕ್ಕಾಗಿಯೇ ಅರಣ್ಯಗಳನ್ನು ಭೂಮಿಯ ಶ್ವಾಸಕೋಶ ಎಂದು ಪರಿಗಣಿಸಲಾಗುತ್ತದೆ. ಮರಗಳು ಕಾರ್ಬನ್ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡುವ ಮೂಲಕ ಗಾಳಿಯನ್ನು ಫಿಲ್ಟರ್ ಮಾಡುತ್ತವೆ, ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಪರಿಸರ ವ್ಯವಸ್ಥೆಗಳ ಮರುಸ್ಥಾಪನೆ ಹೇಗೆ…? ತಾಂತ್ರಿಕತೆ ಬಳಕೆ ಹೇಗೆ..? : ಪರಿಸರ ವ್ಯವಸ್ಥೆಯಲ್ಲಿ ಮತ್ತೆ ಕಾಡುಗಳ ಮರುಸ್ಥಾಪನೆ, ಉಳಿಸಿಕೊಳ್ಳುವ ತೀವ್ರ ಅನಿವಾರ್ಯತೆ ಇದೆ. ಏಕೆಂದರೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಿಕೆಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿಕೊಂಡಿದೆ. ಹವಾಮಾನ ಬದಲಾವಣೆಯು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕಾಡು ನಾಶವು ಆಹಾರ ಭದ್ರತೆಯ ಮೇಲೆ, ಉಸಿರಾಡುವ ಗಾಳಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇದಕ್ಕಾಗಿಯೇ ಕಳೆದುಹೋದ ಹಸಿರು ಹೊದಿಕೆಯನ್ನು ಪುನಃ ತುಂಬಿಸುವ ಕಾರ್ಯ ನಡೆಯಬೇಕಿದೆ.
ಹೊಸ ತಂತ್ರಜ್ಞಾನಗಳ ಮೂಲಕ, ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿನ ಕ್ಷಿಪ್ರ ಪ್ರಗತಿಗಳು ಅರಣ್ಯ ನಿರ್ವಹಣೆಯಲ್ಲಿ ಬಳಸಿಕೊಳ್ಳಬೇಕಿದೆ. ಈ ಆವಿಷ್ಕಾರಗಳು ಅರಣ್ಯಗಳ ಉಳಿಸಿಕೊಳ್ಳುವಿಕೆ, ಅರಣ್ಯ ನಿರ್ವಹಣೆ, ಬೆಂಕಿಯನ್ನು ಪತ್ತೆಹಚ್ಚಲು ಹಾಗೂ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ.
ಹವಾಮಾನ ಬದಲಾವಣೆ ನಿಯಂತ್ರಣದಲ್ಲಿ ಅರಣ್ಯಗಳ ಪಾತ್ರ : ಹವಾಮಾನ ಬಿಕ್ಕಟ್ಟು ಈಗ ಬಹುದೊಡ್ಡ ಸವಾಲಾಗಿದೆ. ಇಡೀ ಪ್ರಪಂಚದಲ್ಲಿಯೇ ಈ ಬಗ್ಗೆ ಚರ್ಚೆ, ಅಧ್ಯಯನ ನಡೆಯುತ್ತಿದೆ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ತಪ್ಪಿಸುವಲ್ಲಿ ಅರಣ್ಯಗಳೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ರಾಜ್ಯದಲ್ಲಿಯೂ ಅರಣ್ಯ ರಕ್ಷಣೆಗೆ ಪ್ರಮುಖವಾದ ಕಾರ್ಯಗಳು ಜನರಿಂದಲೇ ನಡೆಯಬೇಕಿದೆ. ಕಳೆದ 7 ವರ್ಷಗಳಲ್ಲಿ 15 ಸಾವಿರ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ನಾಶವಾಗಿದೆ. ಹೀಗಾಗಿ ಜನರು ಜಾಗೃತರಾಗಿ ಕಾಡು ಉಳಿಸುವ-ಬೆಳೆಸುವ ಕಾರ್ಯವನ್ನು ನಡೆಸಬೇಕಿದೆ.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…