ಸುಂಕದ ದೊರೆಯೆಂದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿತವಾದ ಅಮೇರಿಕಾದ ಅಧ್ಯಕ್ಷ ಇಂದು ವಿಶ್ವದ ನಾನಾ ರಾಷ್ಟ್ರಗಳಿಗೆ ಒಗ್ಗಟ್ಟಾಗಲು ಅವಕಾಶ ಕಲ್ಪಿಸುತ್ತಿದೆ.ಈ ಒಗ್ಗಟ್ಟು ರಾಜಕೀಯ,ಬೌಗೋಳಿಕ ಮತ್ತು ಆರ್ಥಿಕ ರೀತಿಯದ್ದಾಗಿ ಅಮೇರಿಕಾಕ್ಕೆ ಪ್ರತ್ಯುತ್ತರ ನೀಡಲು ದಾರಿ ಮಾಡಿ ಕೊಡುತ್ತಿದೆ.ಇದು ಮುಂದೆ ಈ ಎಲ್ಲಾ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ.
ಈ ದೃಷ್ಟಿಯಿಂದ ಭಾರತ ಬೇರೆ ಬೇರೆ ದೇಶಗಳೊಂದಿಗೆ ಯಾವ್ಯಾವ ರೀತಿಯ ವ್ಯಾಪಾರ ಒಪ್ಪಂದಗಳನ್ನು ಮಾಡಿದೆ ಮತ್ತು ಇನ್ನು ಮುಂದೆ ಮಾಡಲಿದೆ ಎಂಬುವುದನ್ನು ನೋಡಲೇಬೇಕು.
ಭಾರತ ಬೇರೆ ಬೇರೆ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಇತರ ವ್ಯಾಪಾರ ಒಪ್ಪಂದಗಳಿಗೆ ಈಗಾಗಲೇ ಸಹಿಹಾಕಿ ಅವು ಅನುಷ್ಠಾನಗೊಂಡಿದ್ದರೆ,ಇದೀಗ ಇನ್ನೂ ಕೆಲವು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ.ಈ ನಿಟ್ಟಿನಲ್ಲಿ ದೇಶವು ಈಗಾಗಲೇ 50 ಕೂ ಹೆಚ್ಚು ದೇಶಗಳೊಂದಿಗೆ ಆದ್ಯತೆಯ ಪ್ರವೇಶ, ಆರ್ಥಿಕ ಸಹಕಾರ ಮತ್ತು ಮುಕ್ತ ವ್ಯಾಪಾರ ಸಂಬಂಧವನ್ನು ಹೊಂದಿದೆ.
ಭಾರತ ಮಾಡಿಕೊಂಡ ವಿವಿಧ ರೀತಿಯ ವ್ಯಾಪಾರ ಒಪ್ಪಂದಗಳು.
ಇಷ್ಟು ಮಾತ್ರವಲ್ಲದೆ ವ್ಯಾಪಾರ ಸೌಲಭ್ಯ,ಕಸ್ಟಮ್ಸ್ ಸಹಕಾರ,ಹೂಡಿಕೆ, ಸ್ಪರ್ಧೆ, ಬೌದ್ಧಿಕ ಆಸ್ತಿ ಹಕ್ಕು ಇತ್ಯಾದಿಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿವೆ.ಈ ಎರಡೂ ಒಪ್ಪಂದಗಳು ಹೆಚ್ಚು ಸಮಗ್ರ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿವೆ.ಉದಾಹರಣೆಗೆ, ಮೂರನೇ ತರದ ಒಪ್ಪಂದದಲ್ಲಿ ಭಾರತ, ಆಸ್ಟ್ರೇಲಿಯ,ಮಲೇಶಿಯ, ಸಿಂಗಾಪುರ ಮುಂತಾದ ರಾಷ್ಟ್ರಗಳೊಂದಿಗೆ ಮಾಡಿಕೊಂಡವು ಇದ್ದರೆ ನಾಲ್ಕನೇ ವರ್ಗದಲ್ಲಿ ಭಾರತ, ಜಪಾನ್,ದಕ್ಷಿಣ ಕೊರಿಯ ಇತ್ಯಾದಿ ರಾಷ್ಟ್ರಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ಬರುತ್ತವೆ.ಇವುಗಳೊಂದಿಗೆ 24.07.2025 ರಂದು ಇಂಗ್ಲೆಂಡಿನೊಂದಿಗೆ ಮಾಡಿಕೊಂಡ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ,ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುನ್ನುಡಿ ಬರೆದಿದೆ.
ಬಹುಪಕ್ಷೀಯ ಒಪ್ಪಂದಗಳು:
ಪ್ರಸ್ತಾವಿತ ಒಪ್ಪಂದಗಳು :
ಇವೆಲ್ಲದರ ಜೊತೆಗೆ ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್,ಸಂಯುಕ್ತ ಅರಬ್ ರಾಷ್ಟ್ರಗಳು,ಇತ್ಯಾದಿ ದೇಶಗಳೊಂದಿಗೆ ಮಾತುಕತೆ ಮುಂದುವರಿಯುತ್ತಿದೆ.
ಒಪ್ಪಂದಗಳಿಂದ ಏನು ಲಾಭ? : ಮೇಲೆ ಹೆಸರಿಸಿದ ನಾನಾ ರೀತಿಯ ಒಪ್ಪಂದಗಳಿಂದ ಭಾರತಕ್ಕೆ ಆಗುವ ಲಾಭಗಳು ಹಲವು.ಉದಾಹರಣೆಗೆ ಭಾರತ ಆಸ್ಟ್ರೇಲಿಯ ಒಂದಿಗೆ ಮಾಡುವ ಒಪ್ಪಂದಕ್ಕೆ ಅನುಗುಣವಾಗಿ ಭಾರತ ಜವುಳಿ,ಆಭರಣ ಮತ್ತು ರತ್ನಗಳು,ಚರ್ಮದ ಉತ್ಪನ್ನಗಳು,ಇಂಜಿನಿಯರಿಂಗ್ ಉತ್ಪನ್ನಗಳು ಇತ್ಯಾದಿಗಳನ್ನು ಅಲ್ಲಿಗೆ ರಫ್ತು ಮಾಡಲು ಅವಕಾಶಗಳಿವೆ. ಇದೇ ರೀತಿ ಸಂಯುಕ್ತ ಅರಬ್ ರಾಷ್ಟ್ರಗಳಿಗೆ ಆಭರಣಗಳ ರಫ್ತಿಗೆ ಸಾಧ್ಯತೆಗಳು ಹೆಚ್ಚಾಗಿವೆ.ಭಾರತ ಇಂದು ಅಮೇರಿಕಾದ ಸುಂಕದ ಹೆಚ್ಚಳದಿಂದಾಗಿ ಈ ಉದ್ದಿಮೆಗಳಿಗೆ ತೊಂದರೆಗಳು ಆಗುತ್ತಿರುವ ಕಾರಣ ಮೇಲೆ ಹೆಸರಿಸಿದ ಮುಕ್ತ ಇಲ್ಲವೇ ಇತರ ವ್ಯಾಪಾರ ಒಪ್ಪಂದಗಳಿಂದ ಲಾಭ ಪಡೆಯಲು ಸಾಧ್ಯ.
ಇಷ್ಟು ಮಾತ್ರವಲ್ಲದೆ ಈ ಒಪ್ಪಂದಗಳ ಆಧಾರದಲ್ಲಿ ವಿವಿಧ ವಸ್ತುಗಳು ಮತ್ತು ಸೇವೆಗಳ ರಫ್ತು ಹೆಚ್ಚಬಹುದು.ಇವೆಲ್ಲಾ ಉದ್ಯೋಗ ಸೃಷ್ಟಿ,ವಿದೇಶಿ ಬಂಡವಾಳದ ಒಳಹರಿವು,ಕಡಿಮೆ ವೆಚ್ಚದ ಕಚ್ಚಾ ವಸ್ತುಗಳ ಆಮದು,ಪೈಪೋಟಿಯ ಹೆಚ್ಚಳ ಮುಂತಾದ ಲಾಭಗಳನ್ನು ತಂದುಕೊಡಲು ಸಾಧ್ಯ.
ಭಾರತಕ್ಕಾಗುವ ಸಮಸ್ಯೆಗಳು.
ಮೇಲೆ ಹೆಸರಿಸಿದ ನಾನಾ ರೀತಿಯ ಒಪ್ಪಂದಗಳು ನಾನಾ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡಬಹುದು.ಉದಾಹರಣೆಗೆ ಬೇರೆ ಬೇರೆ ರೀತಿಯ ಕೃಷಿ ಉತ್ಪನ್ನಗಳ ಆಮದು,ಆಂತರಿಕ ಉದ್ದಿಮೆಗಳಿಗೆ ಸಂಕಷ್ಟ,ಅಸಮಾನತೆ,ನಿರುದ್ಯೋಗ,ಆರ್ಥಿಕ ಅಸ್ಥಿರತೆ,ಆಮದಿನ ಮೇಲೆ ಹತೋಟಿ ಸಾಧಿಸಲು ಅಸಾಧ್ಯವಾಗುವುದು ಇತ್ಯಾದಿ..
ಮೇಲೆ ಹೆಸರಿಸಿದ ಸಮಸ್ಯೆಗಳು ಬರುವ ಸಾಧ್ಯತೆಗಳು ಇದ್ದ ಕಾರಣ ಭಾರತ ಈ ಮೊದಲು ಆರ್. ಸಿ. ಇ. ಪಿ ಗೆ ಸಹಿ ಹಾಕಿರಲಿಲ್ಲ. ಇದೇ ರೀತಿ ಆಂತರಿಕವಾಗಿ ಕೃಷಿಕರಿಗೆ ಸಮಸ್ಯೆ ಆಗುವ ಕಾರಣ ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಲ್ಲಿಲ್ಲ.
ಪ್ರಸ್ತುತ ಅಮೇರಿಕಾ ಹಾಕಿದ ಸವಾಲುಗಳನ್ನು ಭಾರತ ಎದುರಿಸಲೇ ಬೇಕು.ನಈ ನಿಟ್ಟಿನಲ್ಲಿ ರಷ್ಯಾ,ಚೀನಾ ಮತ್ತು ಜಪಾನ್ ದೇಶಗಳೊಂದಿಗೆ ಪ್ರಾಥಮಿಕ ಹಂತದ ಮಾತುಕತೆಗಳಾಗಿವೆ.ಇವುಗಳೊಂದಿಗೆ ಮೇಲೆ ಹೆಸರಿಸಿದ ನಾನಾ ರೀತಿಯ ಮುಕ್ತ ವ್ಯಾಪಾರ ಒಪ್ಪಂದಗಳು ಇವಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ನಿಶ್ಚಿತ.ಇದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ವ್ಯಾಪಾರ ಒಪ್ಪಂದಗಳು ಆಗುವ ಸಾಧ್ಯತೆಗಳು ದಟ್ಟವಾಗಿವೆ.ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಒಪ್ಪಂದಗಳು ಅಮೇರಿಕಾದ ವಿರುದ್ಧವಾಗಿ ಬಂದು ಜಾಗತಿಕವಾಗಿ ಸಮಗ್ರ ಬದಲಾವಣೆಗೆ ಅವಕಾಶ ಮೂಡಿಬರಲಿದೆ.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…