ಔಷಧಿಯ ಗುಣಗಳುಳ್ಳ ಇಪ್ಪೆ ಮರ ಮಲೆನಾಡಿನ ಕಾಡು ಬೆಳೆಗಳಲ್ಲಿ ಒಂದು.ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ. ಇದರ ಎಲೆ ಹೂವು ಕಾಯಿ ತೊಗಟೆ ಇವು ಉತ್ತಮ ಔಷಧಿಯು ಹೌದು. ರುಚಿಯು ಹೌದು.
ಸಾಧಾರಣವಾಗಿ ಮೇ ಕೊನೆಯ ವಾರಗಳಲ್ಲಿ ಇದರ ಹಣ್ಣು ಬೀಜ ಸಿಕ್ಕುತ್ತದೆ. ಬೀಜವನ್ನು ಸಂಗ್ರಹಿಸಿ ಉಪ್ಪಾಗೆ, ಮುರುಗನ ಬೀಜ ದಿಂದ ಎಣ್ಣೆ ತೆಗೆದಂತೆ (ತುಪ್ಪ) ತೆಗೆಯಬೇಕು ಇದು ಎರಡು ವರ್ಷಕ್ಕೂ ಹಾಳಾಗುವುದಿಲ್ಲ.
1) ಇಪ್ಪೆ ತುಪ್ಪವನ್ನು ಬಿಸಿ ಮಾಡಿ ಹಚ್ಚುವುದರಿಂದ ಸಂಧಿವಾತ ಗುಣವಾಗುತ್ತದೆ.
2) ತಲೆಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.
3) ಇಪ್ಪೇಚಕ್ಕೆ ಕಷಾಯ ಸಂಧಿವಾತಕ್ಕೆ ಒಳ್ಳೆಯ ಔಷಧಿ.
4) ತೊಗಟೆಯ ಪುಡಿಯಲ್ಲಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ.
5) ತೊಗಟೆಯ ಪುಡಿಯನ್ನು ತೋನ್ನು ರೋಗದಲ್ಲಿ ಉಪಯೋಗಿಸುತ್ತೇನೆ.
6) ತೊಗಟೆಯ ಪುಡಿಯನ್ನು ಕ್ಯಾನ್ಸರ್ ರೋಗದಲ್ಲಿ ಬಳಸುತ್ತೇನೆ.
7) ತಿಪ್ಪೆಯ ಹೂವಿನಲ್ಲಿ ಮಾಡಿದ ಲೇಹ್ಯ ನಿದ್ದೆಗೆ ಮತ್ತು ಪುಷ್ಟಿಗೆ ತುಂಬಾ ಒಳ್ಳೆಯದು.
8) ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಬೇಕಾದಾಗ ಶರಭತ್ ಮಾಡಿ ಕುಡಿಯಬಹುದು.
9) ಹೂವನ್ನು ನೀರು ಅಥವಾ ಹಾಲು ಹಾಕಿ ಕುದಿಸಿ ಕುಡಿಯುವುದರಿಂದ ಕರುಳಿನ ಹುಣ್ಣು ಗುಣವಾಗುತ್ತದೆ.
10) ಹಸಿ ಹೂವನ್ನು ತಿನ್ನುವುದರಿಂದ ಕೆಮ್ಮು ಗುಣವಾಗುತ್ತದೆ.
11) ಅರೆಬರೆ ವಣಗಿದ ಹಣ್ಣು ಯಾವ ಡ್ರೈಫ್ರೂಟಿಗೂ ಕಡಿಮೆ ಇಲ್ಲ. ಶಾಲಾ ದಿನಗಳಲ್ಲಿ ಮರದ ಕೆಳಗೆ ಹೆಕ್ಕಿ ತಿನ್ನುವುದೇ ಒಂದು ಸಂಭ್ರಮ. ಹೆಚ್ಚಾಗಿ ಮತ್ತು ಬರುವ ಸಾಧ್ಯತೆಯೂ ಇದೆ.
12) ಇದರ ಎಳೆಯ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಕಿವಿಗೆ ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ.
13) ಬೆಳೆದ ಮರದಿಂದ ಮಣೆ (ಕುಳಿತು ಕೊಳ್ಳಲು) ಮಾಡಿ ಕುಳಿತು ಜಪ ಮಾಡುವುದರಿಂದ ಬೇಗನೆ ಸಿದ್ದಿ ಆಗುವುದು ಎನ್ನುವ ನಂಬಿಕೆ.
14) ಮರದ ಕಡಗೋಲು ತಯಾರಿಸಿ ಮಜ್ಜಿಗೆ ಕಡೆಯುವುದರಿಂದ ವಾತರೋಗ ನಿವಾರಣೆ ಆಗುತ್ತದೆ. ದೇಹಕ್ಕೂ ತಂಪು.
ಖ್ಯಾತ ನಾಟಿ ವೈದ್ಯೆ ಸುಮನಾ ಮಳಗದ್ದೆಯವರು ಇಪ್ಪೆ ಮರದ ಉಪಯೋಗಗಳ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಅವರನ್ನು ಸಂಪರ್ಕಿಸೋದಾದ್ರೆ : ಸುಮನಾ ಮಳಲಗದ್ದೆ 9980182883.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…
ರೈತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಕಲ ಸಹಕಾರ…
21ನೇ ಜಾನುವಾರು ಗಣತಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಥಮ ಸ್ಥಾನ…