Advertisement
ಸುದ್ದಿಗಳು

ಕೃಷಿಗೆ ಸರಳ ರೀತಿಯಲ್ಲಿ ನೀರು ಹಾಯಿಸಿ | ಕಡಿಮೆ ನೀರಲ್ಲಿ ಗಿಡ-ಮರಗಳಿಗೆ ನೀರುಣಿಸುವುದು ಹೇಗೆ..? | ಪೈಪ್‌ ಒಡೆಯದಂತೆ ಹೇಗೆ ಮಾಡಬಹುದು…? | ಇಲ್ಲಿದೆ ಮೈಕ್ರೋ ಸ್ಪ್ರಿಂಕ್ಲರ್…‌ |

Share

ಬೇಸಗೆ ಆರಂಭವಾಯಿತು. ಗಿಡಗಳಿಗೆ, ಕೃಷಿಗೆ ನೀರುಣಿಸಲು ಆರಂಭವಾಯಿತು. ಅನೇಕ ಬಾರಿ ಸರಿಯಾಗಿ ನೀರುಣಿಸಲು ಸಾಧ್ಯವಾಗದೆ ಕೃಷಿ ನಾಶವಾಗುತ್ತದೆ, ಗಿಡಗಳು ಒಣಗುತ್ತವೆ. ಇದಕ್ಕಾಗಿ ಹಲವು ವಿಧಾನಗಳು ಇವೆ. ಅಟೋಮ್ಯಾಟ್‌ ಅತ್ಯಂತ ಸರಳವಾಗಿ ಹೆಚ್ಚು ಉಪಯುಕ್ತವಾಗುವ ವಿಧಾನಗಳನ್ನು ತಯಾರಿಸಿದೆ. ಅದರ ಜೊತೆಗೆ ವಿವಿಧ ಮೈಕ್ರೋಸ್ಪ್ರಿಂಕ್ಲರ್‌ ಕೂಡಾ ತಯಾರು ಮಾಡಿದೆ.

Advertisement
Advertisement
Advertisement

ನೀರಾವರಿ ವಿಷಯದಲ್ಲಿ , ನೀರಾವರಿ ಉತ್ಪನ್ನಗಳ  ಉದ್ಯಮದಲ್ಲಿ 48 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ  ಪ್ರಬೋಧ್ ಕುಮಾರ್ ಜೈನ್ ಅವರು ಆಟೋಮ್ಯಾಟ್ ಸಂಸ್ಥೆಯ ಮೂಲಕ ದೇಶದ ಕೃಷಿಕರಿಗೆ ವಿವಿಧ ಕೃಷಿ ವಸ್ತುಗಳನ್ನು ನೀಡುತ್ತಿದ್ದಾರೆ. ಕಳೆದ 23 ವರ್ಷಗಳಿಂದ  ತುಷಾರ್ ಜೈನ್ ಅವರು ಸಂಸ್ಥೆಯ ನಿರ್ದೇಶಕ ಮತ್ತು  ಸಿಇಒ ಆಗಿ ಇನ್ನಷ್ಟು ಹೊಸ ಹೊಸ ಆವಿಷ್ಕಾರಕ್ಕೆ ಕಾರಣರಾಗಿದ್ದಾರೆ.ಈಚೆಗೆ..

Advertisement

ಈಚೆಗೆ ಆಟೋಮ್ಯಾಟ್ ಹೊಸದಾಗಿ ವಿನ್ಯಾಸಗೊಳಿಸಿದ ನವೀಕೃತ ಮ್ಯಾಕ್ರೋ ಸ್ಪ್ರಿಂಕ್ಲರ್ ಅನ್ನು ಬಿಡುಗಡೆ ಮಾಡಿದೆ.ಇದು  ಕೃಷಿ ಭೂಮಿಯಲ್ಲಿ ಹೆಚ್ಚು ಪ್ರದೇಶವನ್ನು ಕಡಿಮೆ ನೀರಿನ ವಿತರಣೆಯಲ್ಲಿ ಆವರಿಸುತ್ತದೆ. ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಒದಗಿಸಲು ಕಾರಣವಾಗಿದೆ.ಕಡಿಮೆ ಒತ್ತಡದಲ್ಲಿ ಅತ್ಯುತ್ತಮವಾದ ನೀರಿನ ವಿತರಣೆಯನ್ನು ಒದಗಿಸುತ್ತದೆ. ಲೋವೋಲ್ಟೇಜ್‌ ಇದ್ದಾಗಲೂ ಕೂಡಾ ನೀರಿನ ವಿತರಣೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಅದರ ಜೊತೆಗೆ ಕಡಿಮೆ ನೀರನ್ನು ಬಳಕೆ ಮಾಡುತ್ತದೆ. ಈ ಬಗ್ಗೆ…

Advertisement

ಆಟೋಮ್ಯಾಟ್‌ನ ಈ ಮೈಕ್ರೋ ಸ್ಪ್ರಿಂಕ್ಲರ್ ಸಸ್ಯದ ಎಲೆಗಳ ಮೇಲೂ ಸರಿಯಾದ ರೀತಿಯಲ್ಲಿ ನೀರನ್ನು ಹರಡುತ್ತದೆ. ಗಿಡಗಳಿಗೆ ಮಳೆ ಬಂದಾಗ ನೀರಿನ ಸಿಂಪಡಣೆಯಾಗುವ ಮಾದರಿಯಲ್ಲಿಯೇ ನೀರಿನ ವಿತರಣೆಯಾಗುತ್ತದೆ. ಹೀಗಾಗಿ ಗಿಡಗಳಿಗೂ ಅತ್ಯಂತ ತಂಪಾದ ವಾತಾವರಣ ಸೃಷ್ಟಿ ಮಾಡುತ್ತದೆ. ದೀರ್ಘ ನೀರಾವರಿ ಸಮಯದಲ್ಲಿ ಕೂಡಾ ಕಡಿಮೆ ಮಟ್ಟದ ನೀರನ್ನು ಬಳಕೆ ಮಾಡಿ, ನೀರು ವ್ಯರ್ಥವಾಗುವುದು ತಡೆಯುತ್ತದೆ.(ನೀರಾವರಿಯ ವಿಡಿಯೋ ಇಲ್ಲಿದೆ…)

Advertisement

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಈ ವಿಶಿಷ್ಟವಾದ ನೀರಾವರಿ ಉತ್ಪನ್ನಗಳನ್ನು ಕಳೆದ 26 ವರ್ಷಗಳಿಂದ ಸರಬರಾಜು ಮಾಡುತ್ತಿರುವ ಬೆಂಗಳೂರಿನ ಹೇರಂಭ ಎಂಟರ್‌ಪ್ರೈಸಸ್‌ ಕೃಷಿಕರ ಸೇವೆಯಲ್ಲಿದೆ. ಈಗಾಗಲೇ ಹಲವಾರು ಕೃಷಿಕರು ಆಟೋಮ್ಯಾಟ್‌ನ ಈ ಮೈಕ್ರೋ ಸ್ಪ್ರಿಂಕ್ಲರ್ ಸೇರಿದಂತೆ ನೀರಾವರಿ ವೇಳೆ ನೀರಿನಲ್ಲಿ ಮರಳು ತಡೆಗಟ್ಟಲು ಪಿಲ್ಟರ್‌, ಸೆಮಿ ಅಟೊಮ್ಯಾಟಿಕ್‌ ಫಿಲ್ಟರ್‌, ಅಟೋಮ್ಯಾಟಿಕ್‌ ಫಿಲ್ಟರ್‌, ಪ್ರೆಶರ್‌ ವಾಲ್ವ್‌ , ಹನಿನೀರಾವರಿ ವ್ಯವಸ್ಥೆ, ಮೈಕ್ರೋಜೆಟ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಬಳಸಿ ಸಂಸತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಕ್ರೋಜೆಟ್‌ ,  ಪ್ರಶರ್‌ ವಾಲ್ವ್‌ ಹಾಗೂ ಫಿಲ್ಟರ್‌ಗಳು ಈಗ ಹೆಚ್ಚು ಕೃಷಿಕರನ್ನು ಗಮನ ಸೆಳೆಯುತ್ತಿದೆ. ಮೈಕ್ರೋಜೆಟ್‌ ಹನಿನೀರಾವರಿ ಮಾದರಿಯಲ್ಲಿ ಕಡಿಮೆ ನೀರನ್ನು ಬಳಕೆ ಮಾಡಿ ಹೆಚ್ಚು ಪ್ರದೇಶವನ್ನು ಕವರ್‌ ಮಾಡಿದರೆ, ಪ್ರಶರ್‌ ವಾಲ್ವ್‌ ನೀರಾವರಿ ವೇಳೆ ಪೈಪ್‌ ನಲ್ಲಿ ಅಧಿಕ ಒತ್ತಡ ಉಂಟಾಗದಂತೆ ತಡೆಯುತ್ತದೆ. ಫಿಲ್ಟರ್‌ಗಳು ಜೆಟ್‌ಗಳಲ್ಲಿ ಯಾವುದೇ ಕಸ, ಮರಳು ಸೇರದಂತೆ ತಡೆಯುತ್ತದೆ. ಹೀಗಾಗಿ ಕೃಷಿಕರು ನೆಮ್ಮದಿಯ ನೀರಾವರಿ ವ್ಯವಸ್ಥೆಯನ್ನು ಕಾಣುವಂತಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲೂ ಈ ನೀರಾವರಿ ವ್ಯವಸ್ಥೆಗೆ ಮೈಕ್ರೋಸ್ಪಿಂಕ್ಲರ್‌ ಸಹಿತ ಎಲ್ಲಾ ವಸ್ತುಗಳು ಲಭ್ಯವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಬೆಂಗಳೂರಿನ ಹೇರಂಭ ಎಂಟರ್‌ಪ್ರೈಸಸ್‌ನ ಎಚ್‌ ಆರ್‌ ವಿಷ್ಣುಮೂರ್ತಿ ಅವರನ್ನು 9448373221 ಅಥವಾ 08023302550 ಸಂಖ್ಯೆಯಲ್ಲಿ ಸಂಪರ್ಕ ಮಾಡಬಹುದು.

Advertisement

Summer has started. Started to irrigate plants and agriculture crops. Many times, without proper irrigation, the crops are destroyed, the plants wither. There are many methods for this. Automat has made methods very simple and useful. Apart from that, various micro sprinklers have also been prepared by Automart. Now it is also causing the demand of farmers.

Advertisement

( ಕೃಷಿ ಉಪಕರಣ ಹಾಗೂ ಕೃಷಿಯ ಯಾವುದೇ ಸಲಕರಣೆ ಮತ್ತು ಗೊಬ್ಬರಗಳ ಜಾಹೀರಾತು ಹಾಗೂ ಸುದ್ದಿ ಪ್ರಸಾರಕ್ಕಾಗಿ ಸಂಪರ್ಕ ಮಾಡಿ – 9449125447 – ದ ರೂರಲ್‌ ಮಿರರ್.ಕಾಂ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

11 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

11 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

22 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

1 day ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

1 day ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago