ಹಾಲು(Milk) ಸಸ್ಯಜನ್ಯ ಮೂಲದಿಂದ ಬರದಿದ್ದರೂ ಸಸ್ತಿನಿ(memmal) ಪ್ರಾಣಿಯಿಂದ(animal) ಬರುವ ಸಸ್ಯಹಾರದಂತೆ(vegetarian) ಪರಿಗಣಿಸಬಹುದು. ಬಹಳಷ್ಟು ಜನರು ಸಸ್ಯಹಾರಿಗಳು ಹಸುವಿನ ಹಾಲನ್ನು(Cow milk) ಬಳಸುವುದನ್ನು ಮೂದಲಿಸುತ್ತಾರೆ. ಕಾಡಿನ ಜಿಂಕೆ ಕಡವೆ ಕಾಡುಕೋಣ ಇತ್ಯಾದಿ ಸಸ್ತಿನಿ ಪ್ರಾಣಿಗಳಲ್ಲಿ ಆಯಾ ಪ್ರಾಣಿಗಳ ಕರುಗಳಿಗೆ(calf) ಎಷ್ಟು ಬೇಕೋ ಅಷ್ಟು ಮಾತ್ರ ಉತ್ಪತ್ತಿಯಾಗುತ್ತದೆ. ಅವುಗಳ ಕರುವಿಗೆ ತಾಯಿ ಹಾಲಿನಿಂದ ಹೊಟ್ಟೆ ಹುಳ ಆಗುವುದಿಲ್ಲ. ಆದರೆ ಮನುಷ್ಯ ಸಾಕುವ ಹಸುಗಳಿಗೆ ಮನುಷ್ಯನ ವಿಶೇಷ ಆರೈಕೆಯಿಂದ ಅದರ ಕರುವಿನ ಅವಶ್ಯಕತೆಗಿಂತ ಹೆಚ್ಚು ಹಾಲಿನ ಉತ್ಪಾದನೆ ಆಗುತ್ತದೆ. ಒಂದು ವೇಳೆ ಅಕಸ್ಮಾತ್ತಾಗಿ ಕರು ತನ್ನ ತಾಯಿಯ ಅಷ್ಟೂ ಮೊಲೆಹಾಲು ಕುಡಿದರೆ ಖಂಡಿತವಾಗಿಯೂ ಆ ಕರುವಿಗೆ ಅಜೀರ್ಣ ವಾಗುತ್ತದೆ. ಮನುಷ್ಯ ಆ ಕರುವಿಗೆ ಮಿಕ್ಕ ಹಾಲನ್ನು ಮಾತ್ರ ಬಳಸುತ್ತಾನೆ.
ಹಸುವಿನ ಹಾಲನ್ನು ಕೆಲವರು ಕೋಳಿ ಮೊಟ್ಟೆಗೆ ಹೋಲಿಸುತ್ತಾರೆ. ಆದರೆ ಕೋಳಿ ಮೊಟ್ಟೆಯಿಂದ ಕೋಳಿ ಮರಿ ಜನಿಸಿದಂತೆ ಹಸುವಿನ ಹಾಲಿನಿಂದ ಹಸುವಿನ ಕರು ಹುಟ್ಟುವುದಿಲ್ಲ…!! ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ… ಹಾಲು ಮಜ್ಜಿಗೆ ಮೊಸರು ಬೆಣ್ಣೆ ತುಪ್ಪ ವಾಗಿ ಎಷ್ಟು ಕಾಲ ಬೇಕಾದರೂ ಇಡುವಂತಹದ್ದು. ಈ ಬಗೆಯಲ್ಲಿ ಯಾವುದೇ ಮಾಂಸಾಹಾರವನ್ನ ಚಿರ ಕಾಲ ಇಡಲು ಸಾದ್ಯವಿಲ್ಲ. ದೇಸಿ ಹಸುವಿನ ಹಾಲನ್ನು ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಮನುಷ್ಯ ತನ್ನ ಅಗತ್ಯಕ್ಕೆ ಆರೋಗ್ಯ ದೃಷ್ಟಿಯಿಂದ ಬಳಸುತ್ತಿದ್ದ.
ಆದರೆ ಬ್ರಿಟಿಷ್ ರು ಬಂದ ಮೇಲೆ ಕಾಫೀ ಟೀ ಗಳಿಗೆ ಯಥೇಚ್ಛವಾಗಿ ಹಾಲು ಬಳಕೆ ಶುರುವಾಯಿತು. ಹಿಂದೆ ಹಾಲು ಮಕ್ಕಳಿಗೆ ಮತ್ತು ರೋಗಿ ಗಳಿಗೆ ಹೆಚ್ಚಾಗಿ ನಮ್ಮಲ್ಲಿ ಬಳಕೆಯಾಗು ತ್ತಿತ್ತು. ಈ ಐವತ್ತು ವರ್ಷಗಳ ಹಿಂದೆ ಹಾಲು ಮಾರುವುದು ಎಂಬ ಕಲ್ಪನೆ ಯೇ ಇರಲಿಲ್ಲ. ನಗರ ಪ್ರದೇಶದಲ್ಲೂ ಚಿಕ್ಕ ಪ್ರಮಾಣದಲ್ಲಿ ಹಾಲು ವ್ಯಾಪಾರ ಆಗು ತ್ತಿತ್ತು. ಈ ಡೈರಿ ಫಾರಂ ಕಲ್ಪನೆ ಭಾರತದಲ್ಲಿ ಇರಲಿಲ್ಲ. ಭಾರತೀಯರು ಹಾಲನ್ನು ಅಮೃತ ದಂತೆ ಪೂಜನೀಯ ವಾಗಿ ಬಳಸುತ್ತಿದ್ದರು. ಹಾಲು ಕೊಡುವ ಗೋವನ್ನ ಅತ್ಯಂತ ಪ್ರೀತಿಯಿಂದ ಪೂಜನೀಯವಾಗಿ ನೋಡಿಕೊಳ್ಳುತ್ತಿದ್ದರು.
ಹಾಲಿಗೆ ನಕಾರಾತ್ಮಕತೆ ಬಂದದ್ದು ಈ ಹೆಚ್ ಎಫ್ ಜೆರ್ಸಿ ಹಸುಗಳು ಮಾರುಕಟ್ಟೆ ಗೆ ಬಂದಮೇಲೆ… ಹೆಚ್ಚು ಹಾಲು ಕೊಡಲು ಸ್ಟಿರಾಯ್ಡ್ ಇಂಜಕ್ಷನ್ , ಹಸು ಬೆದೆಗೆ ಬರಲು ಇಂಜಕ್ಷನ್, ಹಸುವಿನ ಬೆಳವಣಿಗೆಗೆ ಚೋದಕಗಳು… ಹಸುವನ್ನ ಕಾರ್ಖಾನೆಯ ಯಂತ್ರದಂತೆ ನೋಡಿದಾಗ ಹಸುವಿನ ಹಾಲೂ ಮಾಂಸಾಹಾರದಂತೆ ಭಾಸ ವಾಗಬಹುದು. ಆದರೆ ಅಗತ್ಯ ಕ್ಕೆ ಬೇಕಾದಷ್ಟೇ ಹಾಲನ್ನು ಪ್ರೀತಿಯಿಂದ ಲಾಲನೆ ಪೋಷಣೆ ಮಾಡಿದ ಹಸುಗಳಿಂದ ಪಡೆದರೆ ಖಂಡಿತವಾಗಿಯೂ ಹಸುವಿನ ಹಾಲು ಅಮೃತ.
ಹಸುವಿನ ಹಾಲನ್ನು ಮಾಂಸಾಹಾರಕ್ಕೆ ಹೋಲಿಸುವುದು ಮೂರ್ಖತನ. ಯಾವುದೇ ಜೀವಿಯ ಪ್ರಾಣ ತೆಗದು, ಹಿಂಸಿಸಿ ಪಡೆದ ವಸ್ತು ಮಾಂಸಾಹಾರ… ಹೆಚ್ಚುವರಿ ಗವ್ಯೋತ್ಪನ್ನವಾದ ಹಾಲು ಖಂಡಿತವಾಗಿಯೂ ಹಿಂಸೆಯಿಂದ ಬರುವಂತಹ ವಸ್ತುವಲ್ಲ…
ಹಸುವಿನ (ವಿಶೇಷವಾಗಿ ದೇಸಿ) ಹಾಲು ಅಮೃತ… ದಯಮಾಡಿ ಯಾರೂ ಹಸುವಿನ ಹಾಲನ್ನು ಮಾಂಸಾಹಾರಕ್ಕೆ ಹೋಲಿಸದಿರಿ….