Opinion

#Rassia-Ukrain| ವಿಶ್ವ ಒಂದು ಬಹುದೊಡ್ಡ ಅನಾಹುತಕ್ಕೆ ಕಾಯುತ್ತಿದೆಯೇ.!? | ಮಿತಿ ಮೀರುತ್ತಿದೆ ವ್ಲಾದಿಮಿರ್‌‌ ಪುಟಿನ್ ಕ್ರೌರ್ಯ..! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ರಷ್ಯಾ ಉಕ್ರೇನಿನ ಗಡಿ ಭಾಗದಲ್ಲಿ ಅತ್ಯಂತ ಅಪಾಯಕಾರಿ ಅಣ್ವಸ್ತ್ರಗಳನ್ನು ಉಪಯೋಗಿಸಲು ಸಿದ್ದವಾಗಿ ನಿಯೋಜಿಸಿದೆ. ವ್ಲಾದಿಮಿರ್‌‌ ಪುಟಿನ್ ಕ್ರೌರ್ಯ ಮಿತಿ ಮೀರುತ್ತಿದೆ ತನ್ನ ದೇಶದಲ್ಲಿ ಬಂಡಾಯವೆದ್ದ ಎಲ್ಲರನ್ನೂ ಕೊಲ್ಲುತ್ತಿದ್ದಾರೆ. ಆಡಳಿತ ವಿರುದ್ಧದ ಧ್ವನಿ ಎತ್ತುವವರನ್ನು ಬಂಧಿಸುವ ಮೂಲಕ ಸದ್ದು ಅಡಗಿಸುತ್ತಿದ್ದಾರೆ. ಹುಚ್ಚತನದ ಪರಮಾವಧಿ ತಲುಪುತ್ತಿರುವಂತಿದೆ….

Advertisement
Advertisement

ಇತ್ತ ಕಡೆ ಉಕ್ರೇನ್ ಅಧ್ಯಕ್ಷ ವೊಲೋಡ್ಮಿರ್ ಯೆಲೆನ್ಸ್ಕಿ ಮತ್ತಷ್ಟು ಹಠಮಾರಿಯಾಗುತ್ತಿದ್ದಾರೆ. ತನ್ನ ದೇಶದ ಎಷ್ಟು ಜನ ಸತ್ತರು ಚಿಂತೆ ಇಲ್ಲ, ತಾನು ಮಾತ್ರ ವಿಶ್ವದ ಪ್ರತಿರೋಧದ ಹೀರೋ ಆಗಬೇಕು ಎಂಬ ಹುಚ್ಚಿಗೆ ಬಿದ್ದು ತನ್ನದೇ ಜನರ ಮಾರಣಹೋಮಕ್ಕೆ ಕಾರಣವಾಗುತ್ತಿದ್ದಾರೆ….

ಅಮೆರಿಕದ ಬೈಡೆನ್ ನೇತೃತ್ವದ ನ್ಯಾಟೋ ತಮ್ಮ ಬತ್ತಳಿಕೆಯಲ್ಲಿರುವ ಕೆಲವು ಅನಾಹುತಕಾರಿ ಆಯುಧಗಳನ್ನು ಉಕ್ರೇನಿಗೆ ನೀಡಿ ಝಲೆನ್ಸ್ಕಿಯನ್ನು ಪ್ರಚೋದಿಸುತ್ತಾ ಹೊಡೆದಾಡಿ ಸಾಯಿರಿ ಎಂದು ಯುದ್ದಾಟ ಆಡಿಸುತ್ತಿದ್ದಾರೆ. ಯುದ್ಧ ವಿರಾಮದ ಮಾತುಕತೆಯ ಸೊಲ್ಲೆತ್ತುತ್ತಲೇ ಇಲ್ಲ…..

ವಿಶ್ವದ ಜನ ಸಾಮಾನ್ಯರು ಎಂದಿನಂತೆ ಕಾರ್ಪೊರೇಟ್ ಜಗತ್ತಿನ ಬಲೆಯೊಳಗೆ ಸಿಲುಕಿ ಕುಟುಂಬ ನಿರ್ವಹಣೆಗಾಗಿಯೇ ಇಡೀ ಬದುಕನ್ನು ಸವೆಸುತ್ತಾ ಜೀವನೋತ್ಸಾಹವನ್ನೇ ಕಳೆದುಕೊಂಡಂತೆ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ತಮಗೂ ಇದಕ್ಕೂ ಸಂಬಂಧವಿಲ್ಲ. ಒಂದು ವೇಳೆ ಜಗತ್ತು ಹಾಳಾಗಿ ಹೋಗುವುದಾದರೆ ಹೋಗಲಿ ಬಿಡಿ ಎನ್ನುವ ನಕಾರಾತ್ಮಕ ಪ್ರತಿಕ್ರಿಯೆಗೆ ಬಂದಿದ್ದಾರೆ…..

ಜಗತ್ತಿನ ಎಲ್ಲಾ ಧರ್ಮಗಳ ಶಾಂತಿ ಬೋಧಕ ಧರ್ಮಗುರುಗಳು ಲಕ್ಷಾಂತರ ಜನರ ಮಾರಣಹೋಮವಾಗಿ ತದನಂತರ ಅಳಿದುಳಿದವರ ಸೇವಾ ಕಾರ್ಯ ಮಾಡಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆಯಲು ಹವಣಿಸುತ್ತಿದ್ದಾರೆ…..

Advertisement

18 ತಿಂಗಳ ದೀರ್ಘ ಅವಧಿಯ ಎರಡು ದೇಶಗಳ ಯುದ್ಧದಲ್ಲಿ ಅನೇಕ ಸಾವು ನೋವು ವಲಸೆ ಎಲ್ಲವನ್ನೂ ನೋಡಿದ ನಂತರವೂ ವಿಶ್ವದ ಪ್ರತಿಕ್ರಿಯೆ ಮಾತ್ರ ಅನಾಗರಿಕವಾಗಿದೆ ಎಂದೇ ಹೇಳಬೇಕಾಗುತ್ತದೆ. ಕನಿಷ್ಠ ಯುದ್ಧ ವಿರಾಮ ಘೋಷಿಸಿ ಮಾತುಕತೆಯ ಹಂತಕ್ಕೂ ಇನ್ನೂ ಹೋಗಿಲ್ಲ ಎಂದಾದರೆ ಖಂಡಿತ ವಿಶ್ವ ಮತ್ತೊಂದು ಬೃಹತ್ ನರಮೇದಕ್ಕೆ ಸಾಕ್ಷಿಯಾಗಲು ಕಾಯುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ……

ಬೆಂಕಿಯ ಕಿಡಿ ಹೊತ್ತಿಸಲು, ಅದನ್ನು ಹಬ್ಬಿಸಲು, ಅದರ ಜ್ವಾಲೆಯಲ್ಲಿ ಸುಡಲು ಹಾತೊರೆಯುವ ಮನಸ್ಸುಗಳ ನಡುವೆ ಬೆಳಕಿನ ದೀಪ ಹಚ್ಚುವ ಹೃದಯಗಳ ಸಂಖ್ಯೆ ಕ್ಷೀಣಿಸುತ್ತಿದೆ. ಯಾವುದೇ ಕ್ಷಣದಲ್ಲಿ ಉಕ್ರೇನ್ ಮೇಲೆ ಭೀಕರ ದಾಳಿ ನಡೆಯಬಹುದು. ಪುಟಿನ್ ಹತಾಶನಾಗುತ್ತಿದ್ದಾನೆ. ಲಕ್ಷಾಂತರ ಉಕ್ರೇನ್ ನಾಗರಿಕರು ಯಾವುದೇ ಕ್ಷಣದಲ್ಲಿ ಆಪತ್ತಿಗೆ ಸಿಲುಕಬಹುದು….

” ಹೋರಾಡ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ ” ಎಂದು ಈ ಮೂರ್ಖರಿಗೆ ಹೇಳುವವರು ಯಾರು, ಅಮಾಯಕ ಜನರ ನೋವು ಸಂಕಷ್ಟಗಳನ್ನು ಪರಿಹರಿಸುವವರು ಯಾರು, ಯುದ್ಧದ ಪರಿಣಾಮ ಉಂಟುಮಾಡುವ ಭೀಕರ ಪರಿಸ್ಥಿತಿ ನಿಭಾಯಿಸುವವರು ಯಾರು, ಎಲ್ಲಿ ಅಡಗಿ ಕುಳಿತಿದ್ದಾರೆ ವಿಶ್ವದ ಆ ಸೃಷ್ಟಿಕರ್ತ ದಿವ್ಯ ಶಕ್ತಿಗಳು…..

ಶತಮಾನಗಳ ಹಿಂದಿನ ಕೆಲವೇ ಕೆಲವು ಬಲಿಷ್ಠ ಶಾಂತಿ ದೂತ ನಾಯಕರು ನೆನಪಾಗುತ್ತಿದ್ದಾರೆ. ಬಹುಶಃ ಅವರು ಇದ್ದಿದ್ದರೆ ಒಂದಷ್ಟು ಶಾಂತಿಯ ಧ್ವನಿ ವಿಶ್ವಮಟ್ಟದಲ್ಲಿ ಮೊಳಗುತ್ತಿತ್ತು. ಈಗ ಒಣ ಪ್ರತಿಷ್ಟೆಯ ವಿನಾಶಕಾರಿ ನಾಯಕರೇ ಹೆಚ್ಚಾಗಿದ್ದಾರೆ. ಆದರೂ ಯಾವುದೇ ಸಾಮೂಹಿಕ ಹತ್ಯಾಕಾಂಡ ಆಗದಿರಲಿ ಎಲ್ಲವೂ ಸುಖಾಂತ್ಯವಾಗಲಿ, ಸದ್ಯದ ವಿಶ್ವದ ಪ್ರಭಾವಿ ರಾಜಕೀಯ ಮತ್ತು ಧಾರ್ಮಿಕ ನಾಯಕರು ಆದಷ್ಟು ಬೇಗ ಆಸಕ್ತಿ ತೆಗೆದುಕೊಂಡು ಯುದ್ಧ ನಿಲ್ಲಿಸಲು ಪ್ರಯತ್ನಿಸಲಿ, ಆರ್ಥಿಕ ಶೃಂಗಸಭೆಯ ರೀತಿ ಜಾಗತಿಕ ಮಟ್ಟದ ಯುದ್ಧ ವಿರೋಧಿ ಶಾಂತಿ ಶೃಂಗಸಭೆ ನಡೆಯಲಿ, ಸಾಧ್ಯವಾದರೆ ಅಲಿಪ್ತ ನೀತಿಯ ಭಾರತವೇ ಅದರ ನೇತೃತ್ವ ವಹಿಸಿಲಿ ಎಂದು ಆಶಿಸುತ್ತಾ………

ಬರಹ :
ವಿವೇಕಾನಂದ ಎಚ್.ಕೆ., 9844013068..
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್

ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…

7 hours ago

ಕಬ್ಬು ಪೂರೈಸಿದ ರೈತರಿಗೆ 15 ದಿನದೊಳಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುವಂತೆ ಮಂಡ್ಯ  ಜಿಲ್ಲಾಧಿಕಾರಿ ಸೂಚನೆ

ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳು  ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ…

7 hours ago

ಗದಗದಲ್ಲಿ  ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಪ್ರತಿ ಕ್ವಿಂಟಲ್ ಗೆ 7280 ರೂಪಾಯಿ ಬೆಂಬಲ ಬೆಲೆ ನಿಗದಿ

2024-25 ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಹುಟ್ಟುವಳಿ…

7 hours ago

ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |

ಕಳೆದ ವಾರ ಅಡಿಕೆ ಹಾಳೆತಟ್ಟೆಯನ್ನು ಅಮೇರಿಕಾ ರಫ್ತು ಮಾಡಿತ್ತು, ಅದಾಗಿ ಈಗ ಮಾವಿನಹಣ್ಣು…

10 hours ago

ದೀಪ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490

11 hours ago