ಇಸ್ರೇಲ್- ಪ್ಯಾಲೇಸ್ಟೈನ್ ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಇಸ್ರೇಲ್ ಸೇನೆಯು ಬೃಹತ್ ದಾಳಿಯ ಮುನ್ಸೂಚನೆಯೊಂದನ್ನು ನೀಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು #BenjaminNetanyahu ಅವರು, ಇಸ್ರೇಲ್ ಸೇನೆ ಸಿಂಹಗಳಂತೆ ಹೋರಾಡಲಿದೆ. ನಮ್ಮ ಶತ್ರುಗಳು ನಡೆಸಿದ ದೌರ್ಜನ್ಯವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಾವು ಎಂದಿಗೂ ಹಮಾಸ್ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅನೇಕ ದಶಕಗಳಲ್ಲಿ ಯಹೂದಿ ಜನರಿಗೆ ಮಾಡಿದ ಈ ದೌರ್ಜನ್ಯಗಳನ್ನು ಜಗತ್ತಿಗೆ ಅಥವಾ ಯಾರಿಗಾದರೂ ಮರೆಯಲು ನಾವು ಎಂದಿಗೂ ಬಿಡುವುದಿಲ್ಲ. ನಾವು ನಮ್ಮ ಶತ್ರುಗಳನ್ನು ಅಭೂತಪೂರ್ವ ಬಲದಿಂದ ಹೊಡೆಯುತ್ತಿದ್ದೇವೆ ಎಂದು ಹೇಳುವ ಮೂಲಕ ದಾಳಿಯ ಇಸ್ರೇಲ್ ಪ್ರಧಾನಿಯವರು ದಾಳಿಯ ಮುನ್ಸೂಚನೆ ನೀಡಿದ್ದಾರೆ.
ಕಳೆದ ಎಂಟು ದಿನಗಳಲ್ಲಿ ಹಮಾಸ್‍ನ #Hamas 1,300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪ್ಯಾಲೇಸ್ಟೈನ್‍ನ ಗಾಝಾ ಮತ್ತು ವೆಸ್ಟ್ ಬ್ಯಾಂಕ್‍ನಲ್ಲಿ 1,900 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗಾಝಾ ಗಡಿಯಲ್ಲಿ ನೆಲದ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿದ್ದು, ಮೂರು ಲಕ್ಷಕ್ಕೂ ಅಧಿಕ ಸೈನಿಕರ ನಿಯೋಜನೆ ಮಾಡಲಾಗಿದೆ. ಇಸ್ರೇಲ್ ಸೇನೆಯು ಉತ್ತರ ಗಾಜಾದಲ್ಲಿದಾಳಿಗೆ ತಯಾರಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಗಾಝಾದಿಂದ ದಕ್ಷಿಣಕ್ಕೆ ತೆರಳಲು ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.
– ಅಂತರ್ಜಾಲ ಮಾಹಿತಿ
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…