ನಮ್ಮ ಹೆಮ್ಮೆಯ ಇಸ್ರೋ(ISRO) ಯಾವುದರಲ್ಲೂ ಕಡಿಮೆ ಇಲ್ಲ. ದಿನದಿಂದ ದಿನಕ್ಕೆ ತನ್ನ ಸಾಧನೆಯನ್ನು ಹೆಚ್ಚಿಸುತ್ತಾ ಸಾಗುತ್ತಿದೆ. ಹಾಗೆ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ (Propulsion Module) ಅನ್ನು ಚಂದ್ರನ ಕಕ್ಷೆಯಿಂದ(Moon orbit) ಭೂಮಿಯ ಕಕ್ಷೆಗೆ(Earth Orbit) ಇಸ್ರೋ ಯಶಸ್ವಿಯಾಗಿ ಮರಳಿ ತರಲಿದೆ. ಚಂದ್ರನ ಕಾರ್ಯಾಚರಣೆಯ ಉದ್ದೇಶ ಪೂರೈಸಿದ ನಂತರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಚಂದ್ರನಿಂದ(Moon) ಭೂಮಿಗೆ ಕಕ್ಷೆ ಬದಲಿಸಲಾಗಿದೆ. ಚಂದ್ರನ ಮೇಲೆ ಉಪಗ್ರಹ ಉಡಾವಣೆ(Satellite) ಮಾಡುವುದು ಮಾತ್ರವಲ್ಲ, ಅದರ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
ವಿಕ್ರಮ್ ಲ್ಯಾಂಡರ್‌ನಲ್ಲಿನ ಹಾಪ್ ಪ್ರಯೋಗದಂತೆ ಮತ್ತೊಂದು ವಿಶಿಷ್ಟ ಪ್ರಯೋಗದಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಜು.14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆ.23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಐತಿಹಾಸಿಕ ಸಾಧನೆ ಮಾಡಿತು. ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯನ್ನು ಸಮೀಕ್ಷೆ ನಡೆಯಿತು. ಲ್ಯಾಂಡರ್ ಮತ್ತು ರೋವರ್ 1 ಚಂದ್ರನ ದಿನ (ಭೂಮಿಯ 14 ದಿನಗಳಿಗೆ ಸಮ) ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಿವೆ. ಆ ಮೂಲಕ ಚಂದ್ರಯಾನ-3 ಮಿಷನ್ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಿವೆ.
ISRO will successfully bring back Chandrayaan-3 spacecraft propulsion module from Moon orbit to Earth orbit. After completing the mission of the lunar mission, the propulsion module was re-orbited from the Moon to the Earth. ISRO has demonstrated its capability not only in launching satellites on the moon but also in bringing its instruments back.
– ಅಂತರ್ಜಾಲ ಮಾಹಿತಿ
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…