ಪುತ್ತೂರು | ಜೂನ್ 25, 26 ರಂದು ಹಲಸು ಮೇಳ

ಪುತ್ತೂರಿನ ನವತೇಜ ಮತ್ತು ಜೇಸಿ ಸಂಸ್ಥೆಗಳು ಜಂಟಿಯಾಗಿ 2022 ಜೂನ್ 25 ಮತ್ತು 26 ರಂದು ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಸುಕೃತೀಂದ್ರ ಸಭಾಭವನದಲ್ಲಿ ದಿನಪೂರ್ತಿ ‘ಹಲಸು ಮೇಳ’ವನ್ನು ಸಂಘಟಿಸಿದೆ. ಈ ಮೇಳದಲ್ಲಿ ಹಲಸು ಮಾತ್ರವಲ್ಲದೆ ಇತರ ಹಣ್ಣುಗಳ ಪ್ರದರ್ಶನಗಳಿವೆ ಎಂದು ನವತೇಜ ಟ್ರಸ್ಟ್‌ನ ಪ್ರಮುಖರಾದ ಸುಹಾಸ್ ಮರಿಕೆ, ಅನಂತ ಪ್ರಸಾದ್ ನೈತ್ತಡ್ಕ ಹಾಗೂ ಜೇಸೀ ಶಶಿರಾಜ್ ತಿಳಿಸಿದ್ದಾರೆ.

Advertisement
Advertisement

ಹಲಸಿನ ವಿವಿಧ ಖಾದ್ಯಗಳ ಲೈವ್ ಮೇಳದ ಆಕರ್ಷಣೆ. ತಿಪಟೂರಿನ ಪ್ರಸಿದ್ಧ ಕೆಂಪು ಹಲಸು ಮೇಳಕ್ಕೆ ಬರಲಿದೆ. ಹಲಸಿನ ತಳಿಗಳ ವೈವಿಧ್ಯಗಳಿವೆ. ಮೌಲ್ಯವರ್ಧನೆ ಮಾಡಿದವರ ಯಶೋಗಾಥೆಗಳಿವೆ. ಹಲಸಿನ ತೋಟ ಎಬ್ಬಿಸಿದವರ ಕಷ್ಟ-ಸುಖಗಳ ನಿರೂಪಗಳಿವೆ. ಈಗಾಗಲೇ ಈ ಕ್ಷೇತ್ರದಲ್ಲಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದವರ ಮಳಿಗೆಗಳಿವೆ.

Advertisement
ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‍ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್. ಹಲಸಿನ ಇಷ್ಟೊಂದು ಖಾದ್ಯಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುತ್ತಿರುವುದು ಹಲಸು ಪ್ರಿಯರಿಗೆ ಖುಷಿ ನೀಡಿದೆ. ಈ ಹಿಂದೆ ಈ ಸಂಸ್ಥೆಗಳ ಆಶ್ರಯದಲ್ಲಿ ಸಾವಯವ ಮೇಳ, ಹಲಸಿನ ಮೇಳಗಳು ತುಂಬು ಯಶಸ್ವಿಯಾಗಿರುವುದು ಗಮನಾರ್ಹ. ಹೆಚ್ಚಿನ ಮಾಹಿತಿಗೆ ಸುಹಾಸ್ ಮರಿಕೆ (94805 35708) ಸಂಪರ್ಕಿಸಬಹುದು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಪುತ್ತೂರು | ಜೂನ್ 25, 26 ರಂದು ಹಲಸು ಮೇಳ"

Leave a comment

Your email address will not be published.


*