ಹಲಸು ಇನ್ನು ಕೃಷಿಕರಲ್ಲಿ ಎಸೆಯುವ ವಸ್ತುವಲ್ಲ. ಅದಕ್ಕೂ ಮಾನ-ಸಮ್ಮಾನಗಳು ಬಂದಿವೆ. ಬಂಟ್ವಾಳದ ಪೊನೋಸ್ ಹಲಸಿನಂಗಡಿಯಲ್ಲಿ ಹಲಸು ಪ್ರೇಮಿ ಕೂಟದ ಮೌನೀಶ್ ಮಲ್ಯರು ಈ ಬಾರು 10 ಸಾವಿರ ಕೆಜಿ ಹಲಸು ಮಾರಾಟ ಮಾಡಿದ್ದಾರೆ. ಈ ಮೂಲಕ ಕೃಷಿಕರಿಗೂ ನೆರವಾಗಿದ್ದಾರೆ. ಈಗ ಹಲಸು ಮೌಲ್ಯವರ್ಧನೆಗೊಂಡು ಸುಮಾರು 25 ಬಗೆಯ ವಿವಿಧ ಹಲಸಿನ ಖಾದ್ಯಗಳು ಅಲ್ಲಿ ಮಾರಾಟಕ್ಕೂ ಲಭ್ಯವಿದೆ.
ಬಂಟ್ವಾಳದ ಪಾಣೆಮಂಗಳೂರಿನ ಪೊನೋಸ್ ಹಲಸಿನಂಗಡಿ ಈಗ ಗಮನಸೆಳೆಯುತ್ತಿದೆ. ಕೇರಳದಲ್ಲಿ ಮಾತ್ರವೇ ಹಲಸಿನಂಗಡಿ ಕಾಣಸಿಗುತ್ತಿದ್ದ ಸಮಯ ಇತ್ತು, ಈಗ ಕರ್ನಾಟಕದ ಅದರಲ್ಲೂ ಬಂಟ್ವಾಳದಲ್ಲಿ ಹಲಸಿನಂಗಡಿ ಕಾಣುತ್ತಿದೆ. ಬಂಟ್ವಾಳದ ಹಲಸು ಪ್ರೇಮಿ ಕೂಟದ ಮೌನೀಶ್ ಮಲ್ಯ ಅವರು ಇದರ ಸಾರಥಿ. ಕಳೆದ ಕೆಲವು ಸಮಯಗಳಿಂದ ಹಲಸಿನಿಂದ ತಯಾರಿಸಬಹುದಾದ ವಿವಿಧ ಉತ್ಪನ್ನಗಳ ಬಗ್ಗೆ ಅಧ್ಯಯನ ಮಾಡಿ, ತಾವೇ ಸ್ವತ: ತಯಾರಿಸಿ, ಅದರಲ್ಲಿ ಇನ್ನಷ್ಟು ಪರಿಣತಿಯನ್ನು ಪಡೆದು ಇದೀಗ ಅಧಿಕೃತವಾಗಿ ಹಲಸಿನಂಗಡಿಗೆ ಚಾಲನೆ ನೀಡಿದ್ದಾರೆ. ಈಗ ಒಂದಲ್ಲ, ಎರಡಲ್ಲ ಸುಮಾರು 25 ಬಗೆಯ ಹಲಸಿನ ಖಾದ್ಯಗಳು ಇಲ್ಲಿ ಲಭ್ಯವಿದೆ. ಹಲಸಿನ ಹಪ್ಪಳದಿಂದ ತೊಡಗಿ ಐಸ್ ಕ್ರೀಂ ವರೆಗೆ ಇಲ್ಲಿ ವಿವಿಧ ಬಗೆಯ ಹಲಸಿನದ್ದೇ ತಿಂಡಿಗಳು ಸಿಗುತ್ತವೆ. ತಾವೇ ಮೌಲ್ಯವರ್ಧನೆ ಮಾಡುವ ಹಲಸು ಉತ್ಪನ್ನಗಳ ಜೊತೆಗೆ ಕೃಷಿಕರು ತಯಾರು ಮಾಡುವ ಹಲಸಿನ ಉತ್ಪನ್ನಗಳನ್ನು ಕೂಡಾ ಮಾರಾಟ ಮಾಡುತ್ತಾರೆ. ಹಲಸಿನ ಉತ್ಪನ್ನಗಳು ಎಲ್ಲೆಲ್ಲಾ ಲಭ್ಯವಿದೆಯೋ ಅಲ್ಲಿಂದೆಲ್ಲಾ ತರುತ್ತಾರೆ. ಕೃಷಿಕರಿಗೆ ಉಪಯೋಗವಾಗಬೇಕು ಹಾಗೂ ಹಲಸು ಪ್ರತೀ ಮನೆಗೂ ವರ್ಷದ ಎಲ್ಲಾ ಸಮಯದಲ್ಲೂ ಲಭ್ಯವಾಗಬೇಕು ಎನ್ನುವುದು ಮೌನೀಶ್ ಮಲ್ಯರ ಉದ್ದೇಶ.
ಹಲಸನ್ನು ಸ್ಥಳೀಯ ಕೃಷಿಕರ ತೋಟದಿಂದಲೇ ಖರೀದಿ ಮಾಡುತ್ತಾರೆ. ಕೃಷಿಕರಿಗೆ ಉತ್ತಮ ಧಾರಣೆ ನೀಡಿ ಖರೀದಿ ಮಾಡಿ ಬಳಿಕ ಗುಣಮಟ್ಟದ ಹಣ್ಣುಗಳ ಮಾರಾಟದ ಬಳಿಕ ಉಳಿದ ಹಣ್ಣುಗಳಲ್ಲಿ ಹಪ್ಪಳ ಇತ್ಯಾದಿ ಮೌಲ್ಯವರ್ಧನೆ ಮಾಡುತ್ತಾರೆ. ಹೀಗೇ ಈ ಬಾರಿ ಸುಮಾರು ಹತ್ತು ಸಾವಿರ ಕೆಜಿಯಷ್ಟು ಹಲಸು ಖರೀದಿ ಹಾಗೂ ಮಾರಾಟ ಮಾಡಿದ್ದಾರೆ. ಈ ಮೂಲಕ ಕೃಷಿಕರಿಗೂ ನೆರವಾಗಿದ್ದಾರೆ. ಕೆಲವು ಕೃಷಿಕರು ಹಲಸಿನ ಮೌಲ್ಯವರ್ಧನೆ ಮಾಡಿಯೇ ನೀಡುತ್ತಾರೆ. ಅದಕ್ಕೂ ವೇದಿಕೆ ಕಲ್ಪಿಸಿದ್ದಾರೆ, ಗುಣಮಟ್ಟ ಕಾಪಾಡಿಕೊಂಡವರಿಗೆ ಮಾತ್ರವೇ ಆದ್ಯತೆ ನೀಡಿದ್ದಾರೆ.
ಈ ಬಾರಿ ಹಲಸು ಗಿಡಗಳು, ತಳಿ ಸಂರಕ್ಷಣೆ ಕಡೆಗೂ ಮೌನೀಶ್ ಮಲ್ಯ ಅವರು ಗಮನ ಹರಿಸಿದ್ದು ಸುಮಾರು 2 ಸಾವಿರ ಕಸಿ ಹಲಸು ಗಿಡಗಳನ್ನು ತಯಾರು ಮಾಡಿಸಿ ಕೃಷಿಕರಿಗೆ ನೀಡಿ ಹಲಸು ಖರೀದಿ ಮಾಡುವ ಭರವಸೆ ನೀಡಿದ್ದಾರೆ. ಹಲಸು ಪ್ರತೀ ಮನೆಯಲ್ಲೂ ಉಪಯೋಗದ ವಸ್ತುವಾಗಬೇಕು ಎಂಬುದು ನಮ್ಮ ಉದ್ದೇಶ ಎನ್ನುವ ಮೌನೀಶ್ ಮಲ್ಯರು, ಹಲಸಿನ ಹಣ್ಣನ್ನು ಖರೀದಿ ಮಾಡುವವರು ಅನೇಕರು ಇದ್ದಾರೆ, ಆದರೆ ಹಲಸು ಬೆಳೆಯುವ ಹಾಗೂ ಮಾರಾಟ ಮಾಡುವ ಕೃಷಿಕರ ಸಂಖ್ಯೆ ಹೆಚ್ಚಾಗಬೇಕಿದೆ ಎನ್ನುತ್ತಾರೆ. ದೊಡ್ಡ ದೊಡ್ಡ ಕಾರಲ್ಲಿ ಬರುವ ಮಂದಿ ಹಲಸನ್ನು ಹೊತ್ತೊಯ್ಯಲು ಅಂಜುವುದಿಲ್ಲ, ಆದರೆ ತೋಟದಿಂದ ಕೃಷಿಕರು ಹಲಸು ಮನೆಗೆ ತರಲು ಅಂಜಿಕೆ ಮಾಡುವುದನ್ನು ಈಗ ಕಾಣುತ್ತಿದ್ದೇವೆ, ಇದು ಬದಲಾಗಬೇಕು, ಹಲಸು ಕೂಡಾ ಆದಾಯ ತರುವ ಕೃಷಿಯಾಗಲಿದೆ ಎನ್ನುತ್ತಾರೆ ಮೌನೀಶ್ ಮಲ್ಯರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…