ಬಂಟ್ವಾಳ:ಹಲಸು ಒಂದು ಕಾಲದಲ್ಲಿ ಹಸಿದ ಹೊಟ್ಟೆಯ ಆಹಾರವಾಗಿತ್ತು, ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯನ ನಿರ್ಲಕ್ಷ್ಯದಿಂದ ಹಲಸು ಮೂಲೆಗುಂಪಾಗಿತ್ತು. ಈಗ ಮನೆಯಲ್ಲಿ ಅನ್ನದ ಬಟ್ಟಲಿಗೆ ಬರುತ್ತಿದೆ, ಹಲಸು ಕೂಡಾ ಉತ್ತಮ ಆಹಾರವಾಗಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ವಸಂತ ಬಿ ಬಾಳಿಗಾ ಹೇಳಿದರು.
ಅವರು ರಾರಾಸಂ ಫೌಂಡೇಶನ್ ಬಂಟ್ವಾಳ ಮತ್ತು ಹಲಸು ಪ್ರೇಮಿ ಕೂಟ, ಬಂಟ್ವಾಳ ಇದರ ಸಹಯೋಗದಲ್ಲಿ ಆಯೋಜಿಸಿದ “ಹಲಸಿನೊಂದಿಗೆ ಫೋಟೋ” ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲಸು ಬೆಳೆದರೆ ಮಾತ್ರಾ ಸಾಲದು ಅದರ ಮೌಲ್ಯವರ್ಧನೆ ಹಾಗೂ ಮಾರಾಟವೂ ಅಗತ್ಯವಿದೆ. ಅದನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿರುವ ಹಲಸು ಪ್ರೇಮಿ ಕೂಟದ ಪಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಎಂದರು.ಹಲಸು ನಮ್ಮ ಜೀವನದ ಒಂದು ಭಾಗ. ನಮ್ಮಲ್ಲಿ ಬೆಳೆದ ಹಲಸುಗಳಿಗೆ ಹೊಸ ರೂಪ ಕೊಟ್ಟು ಜನರಿಗೆ ಬಗೆ ಬಗೆಯ ತಿನಸುಗಳು ಸಿಗಲು ಹಲಸಿನಂಗಡಿ ತುಂಬಾ ಸಹಕಾರಿ ಎಂದರು.
ಅತಿಥಿಗಳಾಗಿದ್ದ ಅಂಕಣಗಾರ, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ ಮಾತನಾಡಿ, ಯಾವುದೇ ಆಂದೋಲನಗಳು ಹಂತ ಹಂತವಾಗಿ ಬೆಳೆಯಬೇಕು. ಹಲಸು ಆಂದೋಲನವು ಈಗ ಊಟದ ಬಟ್ಟಲಿಗೆ ಬಂದಿದೆ ಮಾತ್ರವಲ್ಲ ಕಾರ್ಪೋರೇಟ್ ವಲಯದಲ್ಲೂ ಹಲಸು ಸ್ಥಾನ ಪಡೆದಿದೆ.ಹಲಸು ಮಾರುಕಟ್ಟೆಯು ಇಂದು ವ್ಯಾಪಿಸಿದೆ. ಮೌಲ್ಯವರ್ಧನೆಯೂ ನಡೆಯುತ್ತಿದೆ ಇದು ಆಶಾದಾಯಕ ಬೆಳವಣಿಗೆ ಎಂದರು.
ನಿವೃತ್ತ ಅರಣ್ಯ ಅಧಿಕಾರಿ ಮತ್ತು ಹಲಸು ಬೆಳೆಗಾರ ಗ್ಯಾಬ್ರಿಯಲ್ ವೇಗಸ್ ಮಾತನಾಡಿ, ಹಲಸು ಕೃಷಿಯೂ ಭವಿಷ್ಯದಲ್ಲಿ ಉತ್ತಮ ಕೃಷಿಯಾಗುವುದರಲ್ಲಿ ಸಂದೇಹವಿಲ್ಲ. ಆಹಾರ ಬೆಳೆಯೂ ಆದ ಹಲಸು ಬೆಳೆದು ಈ ಬಾರಿ ಆದಾಯಯೂ ಗಳಿಸಿದ್ದೇನೆ. ಹಲಸಿಗೆ ಮಾರುಕಟ್ಟೆ ಇಲ್ಲ ಎಂದು ಅನೇಕರು ಹೇಳುತ್ತಿದ್ದರು. ಈ ವರ್ಷ ನಮ್ಮಲ್ಲಿ ಬೆಳೆದ ಹಲಸಿಗೆ ಉತ್ತಮ ಬೇಡಿಕೆಯೂ ಬಂದಿತ್ತು ಎಂದರು.
ಕೃಷಿಕ, ಪತ್ರಕರ್ತ ಮಹೇ
ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟ ಕೃಷ್ಣ ಶರ್ಮ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪೋನೋಸ್ ಹಲಸಿನಂಗಡಿ ಮಾಲಕರು ಹಾಗೂ ಹಲಸು ಪ್ರೇಮಿಕೂಟದ ಮೌನೇಶ್ ಮಲ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ವಿವಿಧ ಹಲಸು ತಳಿಗಳನ್ನು ಜನರಿಗೆ ನೀಡಿ ಹಲಸು ಸಂರಕ್ಷಣೆ ಹಾಗೂ ಕೃಷಿಕರಿಂದಲೇ ಹಲಸು ಖರೀದಿ ನಡೆಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲಸಿನೊಂದಿಗೆ ಫೋಟೋ” ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ರಾರಾಸಂ ಸಂಸ್ಥೆಯ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ರಾರಾಸಂ ನಿರ್ದೇಶಕರಾದ ಕೇಶವ್ ಮಾಸ್ಟರ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ದಾಮೋದರ್ ಮಾಸ್ಟರ್ ನಿರೂಪಿಸಿದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…