ಬೈಂದೂರಿನಲ್ಲಿ ಗಮನಸೆಳೆದ ಹಲಸು ಹಾಗೂ ಕೃಷಿ ಮೇಳ | ಕೃಷಿಕ ಉದ್ಯಮಿಯಾದರೆ ಮಾತ್ರ ಕೃಷಿ ಉಳಿವು

June 30, 2025
7:16 AM
ಕೃಷಿಕ ಉದ್ಯಮಿಯಾದರೆ ಮಾತ್ರ ಕೃಷಿ ಉಳಿಯಲು ಸಾಧ್ಯ,ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಂಡು ಮಾರಾಟ ಮಾಡಿದರೆ ಆರ್ಥಿಕ ಪ್ರಗತಿ ಹೊಂದಬಹುದು.

ಬೈಂದೂರು ಉತ್ಸವ ಸಮಿತಿ ಹಾಗೂ ಸಮಷ್ಠಿ ಪ್ರತಿಷ್ಠಾನ, ರೈತೋತ್ಥಾನ ಬಳಗ, ರೋಟರಿ ಹಾಗೂ ಲಯನ್ಸ್ ಕ್ಲಬ್  ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಹಲಸು ಮತ್ತು ಕೃಷಿ ಮೇಳವನ್ನು ಬೈಂದೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೈಂದೂರಿನಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಹಲಸು ಮೇಳಕ್ಕೆ ಉದ್ಯಮಿ ಗೋಕುಲ್ ಶೆಟ್ಟಿ ಚಾಲನೆ ನೀಡಿದರು.  3 ದಿನಗಳ ಹಲಸು ಮೇಳದಲ್ಲಿ  ಹಲಸಿನಿಂದ ತಯಾರಿಸಿದ ಖಾದ್ಯಗಳು ಗಮನಸೆಳೆಯಿತು.

Advertisement

ಹಲಸು ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲಸು ಬೆಳೆಗಾರರು, ಹಲಸಿನ ಮೌಲ್ಯವರ್ಧನೆ ಮಾಡುವ ವಿವಿಧ ಖಾದ್ಯಗಳ ಮಳಿಗೆಗಳು, ಹಲಸಿನ ಹೋಳಿಗೆ, ಹಪ್ಪಳ, ಸಂಡಿಗೆ, ಮುಳುಕ, ಕಬಾಬ್, ಮಂಚೂರಿ, ಹಲಸಿನ ಕಡಬು, ಐಸ್ ಕ್ರೀಮ್ ಮುಂತಾದ ಹಲವು ಬಗೆಯ ಹಲಸಿನ ಉತ್ಪನ್ನಗಳು ಹಾಗೂ ವಿವಿಧ ತಳಿಯ ಹಣ್ಣಿನ ಗಿಡ ಮತ್ತು ಹೂವಿನ ಗಿಡಗಳ ಮಳಿಗೆಗಳನ್ನು ತೆರೆಯಲಾಗಿದೆ.    ಕೈಮಗ್ಗದ ಸೀರೆಗಳು, ಕರಕುಶಲ ವಸ್ತುಗಳು, ಗ್ರಾಮೀಣ ಭಾಗದ ತಿಂಡಿ-ತಿನಿಸುಗಳ ಮಳಿಗೆಗಳು ಜನರ ಮನ ಸೆಳೆದವು.

ಕೃಷಿಕ ಉದ್ಯಮಿಯಾದರೆ ಮಾತ್ರ ಕೃಷಿ ಉಳಿಯಲು ಸಾಧ್ಯ,ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಂಡು ಮಾರಾಟ ಮಾಡಿದರೆ ಆರ್ಥಿಕ ಪ್ರಗತಿ ಹೊಂದಬಹುದು ಎಂದು ಕೃಷಿಕ ಸಮಾಜದ ಅಧ್ಯಕ್ಷ ವೆಂಕಟೇಶ್ ಹೊಸಕೋಟೆ ಹೇಳಿದರು. 

ಇಂತಹ ಮೇಳಗಳ ಮೂಲಕ ಯುವಕರಲ್ಲಿ ಕೃಷಿಯತ್ತ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ. ಜಿಲ್ಲೆಯ ಹವಾಮಾನಕ್ಕೆ ತಕ್ಕಂತೆ ಕೃಷಿ ಮಾಡುವುದು ಉತ್ತಮ. ವಿವಿಧ ಹಣ್ಣುಗಳಿಂದ ಖಾದ್ಯ ತಯಾರಿಸುವ ಬಗ್ಗೆ ಮಾಹಿತಿ ದೊರಕಿದ್ದು ಸಹಕಾರಿಯಾಗಿದೆ ಎಂದು  ರೈತ ಮಂಜುನಾಥ ಗಾಣಿಗ ಹೇಳುತ್ತಾರೆ. 

ಮೇಳಗಳು ಗ್ರಾಹಕರು ಹಾಗೂ ಕೃಷಿಕರಿಗೆ ಸಹಕಾರಿಯಾಗಿದೆ. ಕೆಲಸದ ಒತ್ತಡಗಳ ನಡುವೆ ಕೃಷಿ ಬಗ್ಗೆ ಮಾಹಿತಿ ಹಾಗೂ ಆಸಕ್ತಿ ಹೊಂದಲು ನೆರವಾಗುತ್ತದೆ ಎನ್ನುತ್ತಾರೆ  ಕೃಷಿಕ ಗೋಪಾಲ ನಾಯ್ಕ್.

ಚಂದ್ರ ಹಲಸು ಸೇರಿ ಇತರೆ ತಳಿಯ ಹಲಸುಗಳಿಗೆ ಮೇಳದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ತುಮಕೂರಿನ ಹಲಸು ಬೆಳೆಗಾರ ನರಸಿಂಹ ಮೂರ್ತಿ. ಕಳೆದ 9 ವರ್ಷಗಳಿಂದ ರಾಜ್ಯದ ವಿವಿದೆಡೆ ಹಲಸು ಮೇಳಗಳಲ್ಲಿ ಭಾಗವಹಿಸುತ್ತಿದ್ದೇನೆ, ಇಂತಹ ಮೇಳಗಳಿಂದ ಯಾವುದೇ ಮಧ್ಯವರ್ತಿಗಳಿಲ್ಲದೆ ಹಲಸುಗಳಿಗೆ ಉತ್ತಮ ದರ ದೊರೆಯುತ್ತಿದೆ ಎನ್ನುತ್ತಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ
ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್
July 15, 2025
9:31 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ | ತುಂಬಿ ಹರಿಯುತ್ತಿರುವ ನದಿಗಳು
July 15, 2025
9:29 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror