Advertisement
ಹೊಸರುಚಿ-ಅಡುಗೆ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್

Share

ಹಲಸಿನ ಕಾಯಿ ಬಳಸಿ ಮಾಡುವ ಬೋಂಡಾ ಒಂದು ವಿಶೇಷ ಮತ್ತು ರುಚಿಕರ ಗ್ರಾಮೀಣ ಸ್ನ್ಯಾಕ್ ಆಗಿದೆ. ಇದು ಸಾಮಾನ್ಯ ಬೋಂಡಾ ಮತ್ತು ಚೀಸ್ ಬೋಂಡಾ ಎಂಬ ಎರಡು ರೀತಿಯಲ್ಲಿ ಮಾಡಬಹುದು. ಹೊರಗೆ ಕರಕರೆ, ಒಳಗೆ ಮೃದುವಾದ ರುಚಿ ನೀಡುವ ಈ ಬೋಂಡಾ, ಸಂಜೆ ಚಹಾ ಸಮಯಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ಬೇಕಾಗುವ ಸಾಮಗ್ರಿಗಳು :  ಹಲಸಿನ ಕಾಯಿ – 1 ¼ ಕಪ್ (ಕಟ್ ಮಾಡಿ ಕ್ಲೀನ್ ಮಾಡಿದದ್ದು), ಗರಂ ಮಸಾಲಾ – ½ ಚಮಚ, ಚಾಟ್ ಮಸಾಲಾ – ¼ ಚಮಚ,  ಜೀರಿಗೆ ಪುಡಿ – 1 ಚಮಚ, ಕೊತ್ತಂಬರಿ ಪುಡಿ – 1 ಚಮಚ, ಕಸೂರಿ ಮೇತಿ – ಸ್ವಲ್ಪ, ಜೀರಿಗೆ – ಸ್ವಲ್ಪ, ಅರಿಶಿನ ಪುಡಿ – ಸ್ವಲ್ಪ, ಓಂ ಕಾಳು – ¼ ಚಮಚ,  ಉಪ್ಪು – ರುಚಿಗೆ ತಕ್ಕಷ್ಟು,  ಹಸಿಮೆಣಸಿನ ಕಾಯಿ – 2 (ಚಿಕ್ಕದಾಗಿ ಕಟ್ ಮಾಡಿದದ್ದು),  ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ¼ ಚಮಚ, ಕರಿಬೇವಿನ ಸೊಪ್ಪು – ಸ್ವಲ್ಪ, ಈರುಳ್ಳಿ – 1 (ಚಿಕ್ಕದಾಗಿ ಕಟ್ ಮಾಡಿದದ್ದು)

ಹಿಟ್ಟು ತಯಾರಿಸಲು

  • ಕಡಲೆ ಹಿಟ್ಟು – ½ ಕಪ್
  • ಅಕ್ಕಿ ಹಿಟ್ಟು – 2 ಚಮಚ
  • ಮೆಣಸಿನ ಪುಡಿ – ಸ್ವಲ್ಪ
  • ಹಿಂಗು – ಸ್ವಲ್ಪ
  • ಉಪ್ಪು – ಸ್ವಲ್ಪ
  • ನೀರು – ಅಗತ್ಯಕ್ಕೆ ತಕ್ಕಷ್ಟು
  • ಚೀಸ್ ಕ್ಯೂಬ್‌ಗಳು – ಅಗತ್ಯಕ್ಕೆ ತಕ್ಕಷ್ಟು (ಬೇಕಾದರೆ ಮಾತ್ರಾ)

ಮಾಡುವ ವಿಧಾನ :  ಮೊದಲಿಗೆ ಹಲಸಿನ ಕಾಯಿಗೆ ಸ್ವಲ್ಪ ಉಪ್ಪು, ನೀರು ಮತ್ತು ¼ ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ. ಬೇಯಿಸಿದ ನಂತರ ನೀರನ್ನು ತೆಗೆದು, ಹಲಸಿನ ಕಾಯಿಯನ್ನು ನುಣ್ಣಗೆ ಹುಡಿ ಮಾಡಿ.  ಇದಕ್ಕೆ ಗರಂ ಮಸಾಲಾ, ಚಾಟ್ ಮಸಾಲಾ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಕಸೂರಿ ಮೇತಿ, ಜೀರಿಗೆ, ಅರಿಶಿನ ಪುಡಿ ಸೇರಿಸಿ.  ನಂತರ ಓಂ ಕಾಳು, ಹಸಿಮೆಣಸಿನ ಕಾಯಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಸೊಪ್ಪು ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಇಟ್ಟುಕೊಳ್ಳಿ.

ಹಿಟ್ಟು ತಯಾರಿ :  ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಹಿಂಗು, ಉಪ್ಪು ಹಾಕಿ.  ನೀರು ಸೇರಿಸಿ ಮಧ್ಯಮ ಗಟ್ಟಿತನದ ಹಿಟ್ಟನ್ನು ತಯಾರಿಸಿ.

ಬೋಂಡಾ ಕರಿಯುವುದು :  ತಯಾರಿಸಿದ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ. ಕಾದ ಎಣ್ಣೆಯಲ್ಲಿ ಹಾಕಿ ಕೆಂಪಾಗಿ, ಕರಕರೆಯಾಗುವವರೆಗೆ ಕರಿಯಿರಿ.  ಚೀಸ್ ಬೋಂಡಾ ಮಾಡಲು, ಉಂಡೆಯ ಮಧ್ಯದಲ್ಲಿ ಚೀಸ್ ತುಂಡು ಇಟ್ಟು ಉಂಡೆ ಮಾಡಿ, ಹಿಟ್ಟಿನಲ್ಲಿ ಅದ್ದಿ ಕರಿಯಿರಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬಿಸಿ ಬಿಸಿ ಹಲಸಿನ ಕಾಯಿ ಬೋಂಡಾವನ್ನು ತೆಂಗಿನ ಚಟ್ನಿ ಅಥವಾ ಟೊಮ್ಯಾಟೊ ಸಾಸ್ ಜೊತೆ ಸರ್ವ್ ಮಾಡಿದರೆ ಇನ್ನಷ್ಟು ರುಚಿಯಾಗಿರುತ್ತದೆ.

Jackfruit bonda is a crispy and delicious snack made using boiled jackfruit mixed with spices, coated in gram flour batter, and deep fried. It can also be made with a cheese filling for extra flavor. It is a perfect traditional evening snack.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

Published by
ದಿವ್ಯ ಮಹೇಶ್

Recent Posts

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

7 hours ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

1 day ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

1 day ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

2 days ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

3 days ago