ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ.
ಬಲಿತ ಹಲಸಿನ ಕಾಯಿ 3/4 ಕಪ್, ಒಂದು ಪಾತ್ರೆಗೆ ಚನ್ನ 2 ಚಮಚ, ಅಲಸಂದೆ ಕಾಳು (ಅಲಸಂಡೆ)2 ಚಮಚ ಬಟಾಣಿ 2 ಚಮಚ ನೆನೆ ಹಾಕಿ. (6 ಗಂಟೆ ಕಾಲ), ಕುಕ್ಕರ್ ಗೆ ಚನ್ನ, ಬಟಾಣಿ, ಅಲಸಂದೆ ಕಾಳು , ಬಲಿತ ಹಲಸಿನ ಕಾಯಿ, 3/4 ಕಪ್ ಉಪ್ಪು ರುಚಿಗೆ ತಕ್ಕಷ್ಟು ನೀರು ಸೇರಿಸಿ 3 ಸೀಟಿ ಕೂಗಿಸಿ. ನಂತರ ಒಂದು ಪಾತ್ರೆಗೆ ಹಾಕಿ ಇದಕ್ಕೆ, ಚಾಟ್ ಮಸಾಲ 1/2 ಚಮಚ, ಗರಂ ಮಸಾಲ 1 ಚಮಚ, ಓಂ ಕಾಳು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಹಸಿಮೆಣಸಿನ 2 ಚಿಕ್ಕ ದಾಗಿ ಕಟ್ ಮಾಡಿ ಹಾಕಿ, ಕೊತ್ತಂಬರಿ ಪುಡಿ 1/2 ಚಮಚ, ಹಿಂಗು ಸ್ವಲ್ಪ, ಡ್ರೈ ಮ್ಯಾಂಗೋ ಪೌಡರ್ 1/4 ಚಮಚ ಇವುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ . ನಂತರ ಬ್ರೆಡ್ ಬದಿ ಕಟ್ ಮಾಡಿ ನಂತರ ನೀರಿನಲ್ಲಿ ಅದ್ದಿ ತೆಗೆಯಿರಿ, ನಂತರ ಮಿಕ್ಸ್ ಮಾಡಿ ಇಟ್ಟು ಕೊಂಡ ಸಾಮಗ್ರಿಗಳನ್ನು ಹಾಕಿ ರೋಲ್ ಮಾಡಿ ನಂತರ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.( ಮೀಡಿಯಂ ಉರಿಯಲ್ಲಿ ಬೇಯಿಸಿ). ಸಾಸ್ ಜೊತೆ ಅಥವಾ ಚಟ್ನಿ ಜೊತೆ ಸೂಪರ್ ರುಚಿ.