Advertisement
ಸುದ್ದಿಗಳು

ಹೊಸರುಚಿ | ಹಲಸಿನ ಬೀಜ ಚನ್ನ ಸಾಂಬಾರ್

Share

ಹಲಸಿನ ಬೀಜ ಚನ್ನ ಸಾಂಬಾರ್ :  ಬೇಕಾಗುವ ಸಾಮಗ್ರಿಗಳು :  ಹಲಸಿನ ಬೀಜ 1 ಕಪ್ ಜಜ್ಜಿ ಸಿಪ್ಪೆ ತೆಗೆದು ಕ್ಲೀನ್ ಮಾಡಿ ಇಟ್ಟು ಕೊಳ್ಳಿ.
ಚನ್ನ 1/4 ಕಪ್ ನೆನೆ ಹಾಕಿ ಇಟ್ಟು ಕೊಳ್ಳಿ.  ಫ್ರೈ ಮಾಡಿ ಕೊಳ್ಳಲು:  ಕೆಂಪು ಮೆಣಸು 3( ಖಾರ ಜಾಸ್ತಿ ಬೇಕಾದರೆ ಜಾಸ್ತಿ ಹಾಕಬಹುದು), ಉದ್ದಿನ ಬೇಳೆ 1 ಚಮಚ, ಸಾಸಿವೆ ಸ್ವಲ್ಪ, ಕೊತ್ತಂಬರಿ ಬೀಜ 1 ಚಮಚ, ಜೀರಿಗೆ 3/4 ಚಮಚ, ಹಿಂಗು ಸ್ವಲ್ಪ, ಮೆಂತೆ ಕಾಳು ಸ್ವಲ್ಪ, ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ.

ಮಾಡುವ ವಿಧಾನ : ಮೊದಲಿಗೆ ಹಲಸಿನ ಬೀಜ, ಚನ್ನ ಉಪ್ಪು ರುಚಿಗೆ ತಕ್ಕಷ್ಟು, ಚಿಕ್ಕ ತುಂಡು ಬೆಲ್ಲ, ನೀರು ಹಾಕಿ ಬೇಯಿಸಿಕೊಳ್ಳಿ. ಜಾರ್ ಗೆ ಫ್ರೈ ಮಾಡಿದ ಸಾಮಗ್ರಿಗಳನ್ನು ಹಾಕಿ ಇದಕ್ಕೆ ಕಾಯಿತುರಿ 1/2 ಕಪ್, ಅರಿಸಿನ ಪುಡಿ ಸ್ವಲ್ಪ ಹುಣಸೆ ಹಣ್ಣು ಹಾಕಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬೇಯಿಸಿದ ಹಲಸಿನ ಬೀಜ ಚನ್ನ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಕುದಿಸಿ ಸ್ಟವ್ ಆಫ್ ಮಾಡಿ.  ನಂತರ ಸಾಸಿವೆ, ಎಣ್ಣೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಚಟಪಟಾಯಿಸಿ. ಬಿಸಿ ಬಿಸಿಯಾದ ದೋಸೆ, ಅನ್ನ ಜೊತೆಗೆ ಸೂಪರ್. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ….

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

Published by
ದಿವ್ಯ ಮಹೇಶ್

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

19 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

20 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

20 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

20 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

21 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago