ಹಲಸಿನ ಕಾಯಿ ದೋಸೆ ಹಿಟ್ಟಿನ ಪಡ್ಡು ಮಾಡುವ ವಿಧಾನ : ದೋಸೆ ಹಿಟ್ಟು, ಇದಕ್ಕೆ ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ 2, ಹಸಿಮೆಣಸು 1 ಚಿಕ್ಕ ದಾಗಿ ಕಟ್ ಮಾಡಿ. ಕ್ಯಾರೆಟ್ ಚಿಕ್ಕ ದಾಗಿ ಕಟ್ ಮಾಡಿ 5 ಚಮಚ. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಚಿಕ್ಕ ದಾಗಿ ಕಟ್ ಮಾಡಿ. ಇವೆಲ್ಲವನ್ನು ಮಿಕ್ಸ್ ಮಾಡಿ.
ಮತ್ತೊಂದು ಹಸಿಮೆಣಸಿನ ಕಾಯಿ ರೌಂಡ್ ಆಗಿ ಕಟ್ ಮಾಡಿ. ಚಿಲ್ಲಿ ಫ್ಲೆಕ್ಸ್, ಎಣ್ಣೆ . ಪಡ್ಡು ಪಾತ್ರೆ ಬಿಸಿ ಆದಾಗ ಅದಕ್ಕೆ ಎಣ್ಣೆ ಸ್ವಲ್ಪ ಹಾಕಿ ನಂತರ ಸ್ವಲ್ಪ , ಸ್ವಲ್ಪ ಹಿಟ್ಟು ಹಾಕಿ ಅದರ ಮೇಲೆ ಚಿಲ್ಲಿ ಫ್ಲೆಕ್ಸ್ , ರೌಂಡ್ ಆಗಿ ಕಟ್ ಮಾಡಿದ ಹಸಿಮೆಣಸು ಹಾಕಿ ಮುಚ್ಚಳ ಮುಚ್ಚಿ. ಬೆಂದ ನಂತರ ಮತ್ತೆ ಕವುಚಿ ಹಾಕಿ ತೆಗೆಯಿರಿ.. ಈವಾಗ ಬಿಸಿ ಬಿಸಿಯಾದ ಪಡ್ಡು ರೆಡಿ
ಮಾವಿನ ಕಾಯಿ ಚಟ್ನಿ: ಕಾಯಿತುರಿ 1/2 ಕಪ್, ಮಾವಿನ ಕಾಯಿ ಕಟ್ ಮಾಡಿದ್ದು 5 ತುಂಡು, ಹಸಿಮೆಣಸು 3, ಉಪ್ಪು ರುಚಿಗೆ ತಕ್ಕಷ್ಟು. ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಿಸಿ ಬಿಸಿ ಪಡ್ಡು ಮಾವಿನ ಕಾಯಿ ಚಟ್ನಿ ಜೊತೆ ಸವಿಯಿರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel