ಹರಿವೆ ಸೊಪ್ಪು ಹಲಸಿನ ಬೀಜದ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು : ಹರಿವೆ ಸೊಪ್ಪು 2ಕಪ್, ಹಲಸಿನ ಬೀಜ 8, ಬೆಲ್ಲ ರುಚಿಗೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಅರಸಿನ ಹುಡಿ.1/4ಚಮಚ, ಮೆಣಸಿನ ಪುಡಿ 1/4ಚಮಚ, ಕಾಯಿತುರಿ. ಒಗ್ಗರಣೆ ಗೆ : ಸಾಸಿವೆ, ಉದ್ದಿನ ಬೇಳೆ,ಎಣ್ಣೆ ,ಕೆಂಪು ಮೆಣಸು.ಕರಿಬೇವಿನ ಸೊಪ್ಪು.
ಮಾಡುವ ವಿಧಾನ : ಮೊದಲು ಹರಿವೆ ಸೊಪ್ಪನ್ನ ಚೆನ್ನಾಗಿ ತೊಳೆದು ಕ್ಲಿನ್ ಮಾಡಿ. ಆ ನಂತರ ಚಿಕ್ಕದಾಗಿ ಕಟ್ ಮಾಡಿ ಅದರ ದಂಟನ್ನ ಕಟ್ ಮಾಡಿ ಹಾಕಿ ಸ್ವಲ್ಪ ನೀರು ಚಿಟಿಕೆ ಉಪ್ಪು ಹಾಕಿ ಇಡಿ. 10 ನಿಮಿಷದ ಬಳಿಕ ಉಪಯೋಗಿಸಿ. ಹಲಸಿನ ಬೀಜದ ಸಿಪ್ಪೆ ತೆಗೆದು ತುಂಡು ಮಾಡಿ ಇಡಿ. ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ,ಕೆಂಪು ಮೆಣಸು, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ. ಹಲಸಿನ ಬೀಜವನ್ನು ಹಾಕಿ ಫ್ರೈ ಮಾಡಿ ನೀರು ಹಾಕಿ ಬೇಯಲುಬಿಡಿ. ನಂತರ ಸೊಪ್ಪು ಹಾಕಿ, ಉಪ್ಪು ,ಬೆಲ್ಲ ಅರಸಿನ, ಕೆಂಪು ಮೆಣಸಿನ ಪುಡಿ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೆಂದನಂತರ ಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಲ್ಯ ರೆಡಿ.

