ಹಲಸಿನ ಬೀಜ ಕ್ಯಾಬೇಜ್ ಪಕೋಡಾ ಕ್ಕೆ ಬೇಕಾಗುವ ಸಾಮಗ್ರಿಗಳು : ಹಲಸಿನ ಬೀಜ 1 ಕಪ್ ಜಜ್ಜಿ ಸಿಪ್ಪೆ ತೆಗೆದು ಕ್ಲೀನ್ ಮಾಡಿ ಬೇಯಿಸಿ ಇಟ್ಟು ಕೊಳ್ಳಿ.
ಕ್ಯಾಬೇಜ್ 1/2 ಕಪ್ , ಈರುಳ್ಳಿ ಚಿಕ್ಕದು 1 ತೆಳ್ಳಗೆ ಕಟ್ ಮಾಡಿ, ಜೀರಿಗೆ 1 ಚಮಚ, ಓಂ ಕಾಳು 1/4 ಚಮಚ, ಮೆಣಸಿನ ಪುಡಿ 1 ಚಮಚ, ಅರಿಸಿನ ಪುಡಿ ಸ್ವಲ್ಪ,
ಅಕ್ಕಿ ಹುಡಿ 6 ಚಮಚ, ಕಾರ್ನ್ ಫ್ಲೋರ್ 1/4 ಕಪ್, ಕಡಲೆ ಹಿಟ್ಟು 1/4 ಕಪ್ , ಸ್ವಲ್ಪ ನೀರು ಸೇರಿಸಿ, ಕರಿಬೇವಿನ ಸೊಪ್ಪು ಚಿಕ್ಕ ದಾಗಿ ಕಟ್ ಮಾಡಿ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಮಾಡುವ ವಿಧಾನ : ಒಂದು ಪಾತ್ರೆಗೆ ಕ್ಯಾಬೇಜ್ ಚಿಕ್ಕ ದಾಗಿ ಕಟ್ ಮಾಡಿ ತೊಳೆದು ಹಾಕಿ , ಈರುಳ್ಳಿ ಕಟ್ ಮಾಡಿ ಹಾಕಿ ಕರಿಬೇವಿನ ಸೊಪ್ಪು, ಜೀರಿಗೆ, ಓಂ ಕಾಳು, ಮೆಣಸಿನ ಪುಡಿ, ಅರಿಸಿನ ಪುಡಿ, ಅಕ್ಕಿ ಹುಡಿ, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಉಪ್ಪು ರುಚಿಗೆ ತಕ್ಕಷ್ಟು, ನೀರು ಸ್ವಲ್ಪ ಬೇಯಿಸಿ ಇಟ್ಟು ಕೊಂಡ ಹಲಸಿನ ಬೀಜ ಪುಡಿ ಮಾಡಿ ಹಾಕಿ. ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ ಈವಾಗ ಬಿಸಿ ಬಿಸಿಯಾದ ಪಕೋಡ ರೆಡಿ ನಿಮಗೆ ಇಷ್ಟವಾದ ಚಟ್ನಿ ಜೊತೆ ಸಾಸ್ ಜೊತೆ, ಅಥವಾ ಹಾಗೆ ಕೂಡಾ ತಿನ್ನಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…