ಹಲಸಿನ ಬೀಜದ ರೊಟ್ಟಿ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್, ಅಕ್ಕಿ ಹುಡಿ 2 ಕಪ್, ಕಾಯಿ ತುರಿ 4 ಸ್ಪೂನ್, ಹಸಿಮೆಣಸು 2 ( ಬೇಕಿದ್ದರೆ ಜಾಸ್ತಿ ಹಾಕಬಹುದು). ಹಸಿ ಶುಂಠಿ (ಚಿಕ್ಕದಾಗಿ ಕಟ್ ಮಾಡಿ)1 ಸ್ಪೂನ್, ನೀರುಳ್ಳಿ 1/2 ಕಪ್, ಕರಿಬೇವಿನ ಸೊಪ್ಪು 6 ಸ್ಪೂನ್, ಅರಶಿನ ಹುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು 1 ಸ್ಪೂನ್,ಕೊತ್ತಂಬರಿ ಹುಡಿ. ಸ್ವಲ್ಪ ಜೀರಿಗೆ ಸ್ವಲ್ಪ 1 ಚಮಚ, ತುಪ್ಪ ಅಥವಾ ಎಣ್ಣೆ.
ಮಾಡುವ ವಿಧಾನ: ಜಜ್ಜಿದ ಹಲಸಿನ ಬೀಜವನ್ನು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಕಾಯಿ ತುರಿ, ಮೆಣಸು, ಶುಂಠಿ ಹಾಕಿ ರುಬ್ಬಿಕೊಳ್ಳಿ.. ಇದಕ್ಕೆ ಅಕ್ಕಿ ಹುಡಿ, ನೀರುಳ್ಳಿ, ಕರಿಬೇವಿನ ಸೊಪ್ಪು, ಅರಶಿನ ಹುಡಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಹುಡಿ, ಜೀರಿಗೆ, ಉಪ್ಪು ಎಲ್ಲವನ್ನೂ ಹಾಕಿ ಕಲಸಿಕೊಳ್ಳಿ. ಕಿತ್ತಳೆ ಗಾತ್ರದ ಉಂಡೆಯನ್ನು ಮಾಡಿ ಬಾಳೆಎಲೆಯ ತಳಭಾಗದಲ್ಲಿ ಕಿತ್ತಳೆ ಗಾತ್ರದ ಉಂಡೆಯನ್ನು ಹಾಕಿ ಇನ್ನೊಂದು ಎಲೆ ಇಂದ ಮುಚ್ಚಿ ಪೂರಿಯಂತೆ ಒತ್ತಿ. ಅಥವಾ ಕೈ ಯಲ್ಲಿ ತಟ್ಟ ಬಹುದು. ಕಾದ ಕಾವಲಿಯ ಮೇಲೆ ಹಾಕಿ ಬೇಯಿಸಿ ಬಾಳೆಎಲೆ ತೆಗೆದು ಎರಡು ಬದಿ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.




