ಹಲಸಿನ ಹಣ್ಣಿನ ಗುಳಿ ಅಪ್ಪಕ್ಕೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 2.1/2 ಲೋಟ. (ಕಟ್ ಮಾಡಿ ಇಡಿ.), ದೋಸೆ ಅಕ್ಕಿ 1 ಲೋಟ. (ಚೆನ್ನಾಗಿ ತೊಳೆದು 3 ಗಂಟೆ ನೆನೆ ಹಾಕಿ.), ಕಾಯಿ ತುರಿ 1 ಲೋಟ, ಬೆಲ್ಲ ರುಚಿಗೆ ತಕ್ಕಷ್ಟು. (ಪುಡಿ ಮಾಡಿ ಹಾಕಿ.), ಉಪ್ಪು ಸ್ವಲ್ಪ, ಮೊಸರು ಸಣ್ಣ 1 ಸೌಟು, ತುಪ್ಪ.
ಮಾಡುವ ವಿಧಾನ: ಗ್ರೈಂಡರ್ ಗೆ ಕಾಯಿತುರಿ, ಮೊಸರು ಹಾಕಿ ನುಣ್ಣಗೆ ರುಬ್ಬಿ, ನಂತರ ಬೆಲ್ಲ, ಕಟ್ ಮಾಡಿದ ಹಲಸಿನ ಹಣ್ಣು,
ಉಪ್ಪು, ಅಕ್ಕಿ ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ ತೆಗೆಯಿರಿ. ನಂತರ ಪಡ್ಡು ಮಣೆ ಬಿಸಿ ಆದಾಗ ಅದಕ್ಕೆ ಸ್ವಲ್ಪ ತುಪ್ಪ ಹಾಕಿ . ನಂತರ ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ . ನಂತರ ಕವುಚಿ ಹಾಕಿ ತೆಗೆಯಿರಿ. ಈವಾಗ ರುಚಿಯಾದ ಗುಳಿ ಅಪ್ಪ ಸವಿಯಲು ರೆಡಿ. | ವಿಶೇಷ ಸೂಚನೆ: ಇದಕ್ಕೆ ನಾನು ನೀರು ಹಾಕಿಲ್ಲ. ಹಿಟ್ಟು ಸೌಟಿನಿಂದ ಬೀಳುವ ರೀತಿ ಹದವಾಗಿ ಇರಲಿ. ಸ್ವಲ್ಪ ಬಿಸಿ ಇದ್ದಾಗಲೇ ಇದನ್ನು ಸವಿಯಿರಿ.
ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…
ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್…
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…
ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…
ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…