ಸುದ್ದಿಗಳು

ಜೆಡಿಎಸ್‌ ಅಭ್ಯರ್ಥಿ, ಬಿಜೆಪಿ ಚಿಹ್ನೆ….! |ಡಾ.ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದೇವೆ : ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಬೇಕು – ಹೆಚ್‌ ಡಿ ಕುಮಾರಸ್ವಾಮಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬಿಜೆಪಿ – ಜೆಡಿಎಸ್‌(JDS-BJP) ಮೈತ್ರಿ ರಾಜ್ಯ ರಾಜಕೀಯದಲ್ಲಿ ಹೊಸ ತಿರುವನ್ನು ನೀಡಲಿದೆ. ಇದು ಕಾಂಗ್ರೆಸ್‌ಗೆ(Congress) ಹೊಡೆತ ನೀಡುವ ಲಕ್ಷಣಗಳಿವೆ. ಈ ಮಧ್ಯೆ ಡಾ ಮಂಜುನಾಥ್‌(Dr C N Manjunath) ಜೆಡಿಎಸ್‌ ಅಭ್ಯರ್ಥಿ BJP ಚಿಹ್ನೆ ಮೇಲೆ ಚುನಾವಣೆ ಎದುರಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.  ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಆಗಿದೆ. ಡಾ.ಸಿ.ಎನ್‌ ಮಂಜುನಾಥ್‌ ಯಾವ ಪಕ್ಷದ ಸಿಂಬಲ್‌ನಲ್ಲಿ ನಿಂತರೂ ಒಂದೇ. ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಬೇಕು ಅನ್ನೋ ಕಾರಣಕ್ಕೆ ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ವಿ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

Advertisement

ಶಿವಮೊಗ್ಗದಲ್ಲಿಂದು ಚುನಾವಣಾ ಪ್ರಚಾರಕ್ಕೆ (Shivamogga Election Campaign) ತೆರಳಿದ್ದ ವೇಳೆ ಅವರು ಮೈತ್ರಿ ಅನಿವಾರ್ಯತೆಗಳ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮಂಜುನಾಥ್‌ ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ. ಬೆಂಗಳೂರು ಗ್ರಾಮಾಂತರ (Bengalruu Rural) ಭಾಗದ ಜನರಿಗೆ ಮಂಜುನಾಥ್‌ ಅವರ ಬಗ್ಗೆ ವಿಶೇಷ ಅಭಿಮಾನ ಇದೆ. ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯೇ ಇದಕ್ಕೆ ಕಾರಣ. ಮಂಜುನಾಥ್‌ ಅವರಿಂದ ಆ ಭಾಗದಲ್ಲಿ ಜೀವ ಪಡೆದ ಜನ ಇಂದಿಗೂ ಅವರನ್ನು ನೆನಸುತ್ತಾರೆ. ಹಾಗಾಗಿ ಮಂಜುನಾಥ್‌ ಗೆದ್ದೇ ಗೆಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬುದ್ಧಿವಂತ ಅಳಿಯನಿಗೆ ರಾಜಕೀಯ ಬೇಕಿತ್ತಾ? : ದೇವೇಗೌಡರ (HD Devegowda) ಬುದ್ಧಿವಂತ ಅಳಿಯ ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು ಅಂತ ಇರಲಿಲ್ಲ. ಆದ್ರೆ ಬುದ್ಧಿವಂತ ದೇವೇಗೌಡರ ಕುಟುಂಬ ಲೆಕ್ಕಾಚಾರ ಮಾಡಿ ಬಿಜೆಪಿಯಿಂದ ನಿಲ್ಲಿಸಿದೆ ಎಂದು ಹೆಚ್‌ಡಿಕೆ ಸಮರ್ಥಿಸಿಕೊಂಡಿದ್ದಾರೆ. ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು ಅಂತಾ ಇರಲಿಲ್ಲ. ಹಲವು ಜನರು ರಾಜಕೀಯಕ್ಕೆ ಬರುವುದು ಸೂಕ್ತ ಅಂತಾ ವಿಶ್ಲೇಷಣೆ ಮಾಡಿದರು. ಆಗ ಮಂಜುನಾಥ್‌ ಹೆಸರು ಮುನ್ನೆಲೆಗೆ ಬಂತು. ಅಲ್ಲದೇ ಬಿಜೆಪಿಗೂ ಉತ್ತಮ ಅಭ್ಯರ್ಥಿಯನ್ನು ಕೊಟ್ಟ ಹೆಸರು ಬರುತ್ತೆ ಅಂತಾ ಹೇಳಿದಾಗ, ನಾನೇ ಅವರನ್ನು ಮನವೊಲಿಸುವ ಜವಾಬ್ದಾರಿ ತೆಗೆದುಕೊಂಡೆ. ದೇವೇಗೌಡರನ್ನೂ ಮನವೊಲಿಸುವ ಕೆಲಸ ಮಾಡಿದೆ. ರಾಜಕೀಯ ತಂತ್ರಗಾರಿಕೆ ವರ್ಕೌಟ್ ಆಗಬೇಕು ಅಂತ ನಾವೇ ಅವರನ್ನ ಬಿಜೆಪಿಯಿಂದ ನಿಲ್ಲಿಸಿದ್ವಿ ಎಂದು ತಿಳಿಸಿದ್ದಾರೆ.

ಮೈತ್ರಿ ಯಾಕೆ ಅನಿವಾರ್ಯ ಆಯ್ತು? : ಇಂದಿನ ರಾಜಕೀಯ ಬೆಳವಣಿಗೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಮೈತ್ರಿ ಅನಿವಾರ್ಯ ಅನ್ನಿಸಿತು. ಕಳೆದ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷೆ ಮಾಡಿತ್ತು. ನಾವೂ ಸಹ ಅದ್ಭುತವಾಗಿ ಪಂಚರತ್ನ ಯಾತ್ರೆ ಮಾಡಿದ್ದರಿಂದ ಹೆಚ್ಚಿನ ಸ್ಥಾನಗಳನ್ನ ನಿರೀಕ್ಷೆ ಮಾಡಿದ್ದೆವು. ಅದು ಸಾಧ್ಯವಾಗಲಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಭ್ರಷ್ಟ ವ್ಯವಸ್ಥೆ ಆರಂಭವಾಯಿತು. ಯಾವ ಸರ್ಕಾರದಲ್ಲೂ ಇಂತಹ ಕೆಟ್ಟ ಆಡಳಿತ ನೋಡಲಿಲ್ಲ. ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಫಿಕ್ಸ್ ಮಾಡಿ ಲೂಟಿ ಮಾಡುವ ಕೆಲಸ ಶುರುವಾಯ್ತು. ಈ ರಾಜ್ಯವನ್ನ ಯಾವ ಮಟ್ಟಕ್ಕೆ ದಿವಾಳಿ ಮಾಡಬಹುದು ಅನ್ನೋದನ್ನ ನೆನಸಿಕೊಂಡಾಗ, ಪ್ರತಿಯೊಬ್ಬರಿಗೂ ಆತಂಕ ಆಗುತ್ತೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಗೂ ಮೈತ್ರಿ ಅನಿವಾರ್ಯವಾಯಿತು ಎಂದು ತಿಳಿಸಿದ್ದಾರೆ. ಈ ಬಾರಿ ಮೈತ್ರಿ ಪಕ್ಷ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹಾಕಿಕೊಂಡಿದೆ. ಕನಿಷ್ಠ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹೆಚ್‌ಡಿಕೆ ಶಪಥ ಮಾಡಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…

3 hours ago

ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ

ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…

3 hours ago

ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…

3 hours ago

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ | ತುಂಬಿ ಹರಿಯುತ್ತಿರುವ ನದಿಗಳು

ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ…

3 hours ago

ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ

ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…

17 hours ago