ಸಾವಯವ ಕೃಷಿ | ರೈತ ಬೆಳೆದ ಮಾವಿನ ಶುಂಠಿಯ ತೂಕ ಬರೋಬ್ಬರಿ 7 ಕೆಜಿ…!|

March 27, 2022
2:53 PM

ಸಾಮಾನ್ಯವಾಗಿ ಶುಂಠಿಯ ಗೊಂಚಲು ಸಾಮಾನ್ಯವಾಗಿ ಒಂದರಿಂದ ಎರಡು ಕೆ.ಜಿ ಮಾತ್ರ ಇರುತ್ತದೆ. ಆದರೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಮೋಪಿದೇವಿ ಮಂಡಲದ ಶಿವರಾಮಪುರ ಎಂಬಲ್ಲಿ ಯರ್ಲಗಡ್ಡದ ನಾಗೇಶ್ವರರಾವ್  ಎಂಬುವವರು ಮನೆಯ ಹಿತ್ತಲಲ್ಲಿ ಬೆಳೆದ ಶುಂಠಿಯ ಗೊಂಚಲು ಬರೋಬ್ಬರಿ 7 ಕೆಜಿತೂಗುತ್ತಿದೆ.‌ಇದು ರೈತ ಸಮಾವೇಶವೊಂದರಲ್ಲಿ ಪ್ರಮುಖ ಆಕರ್ಷಣೆಯಾಗಿದೆ.

ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಪದ್ಧತಿಯಲ್ಲಿಯೇ ಈ ಶುಂಠಿಯನ್ನು ಬೆಳೆಯಲಾಗಿದೆ,ಇದನ್ನು ಮಾವಿನ ಶುಂಠಿ ಎಂದು ಕರೆಯಲಾಗುತ್ತದೆ. ಈ ಶುಂಠಿಯನ್ನು ಉಪ್ಪಿನಕಾಯಿಗೆ ಹೆಚ್ಚಿಗೆ ಬಳಸಲಾಗುತ್ತದೆ. ಈಗ ಒಂದು ಕೆಜಿ ಶುಂಠಿ ಬೆಲೆ 50 ರೂಪಾಯಿವರೆಗೆ ಇದೆ.

ಅರಿಶಿನದ ಸುಗ್ಗಿಯ ಅವಧಿ 7 ತಿಂಗಳಿಂದ 9 ತಿಂಗಳುಗಳಾಗಿದೆ. ಮಾವಿನ ಶುಂಠಿ ಕೇವಲ ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಮಾವಿನ ಶುಂಠಿಯನ್ನು ಕರ್ಕುಮಾ ಮಂಗ್ಗಾ ಎಂದೂ ಕರೆಯುತ್ತಾರೆ. ಮಾವಿನ ಶುಂಠಿಯಲ್ಲಿ ಈ ರೀತಿಯಾಗಿ ತೂಕ ಹೆಚ್ಚಾಗುವುದು ಬಹಳ ಅಪರೂಪ ಎಂದು ಘಂಟಸಾಲ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ವಿ.ಮಂಜುವಾಣಿ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
April 11, 2026
7:09 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!
April 9, 2026
6:42 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror