#Jiolaptop | ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ಜಿಯೋಬುಕ್ ಲ್ಯಾಪ್​ಟಾಪ್ | ಇಂದಿನಿಂದ ಖರೀದಿಗೆ ಲಭ್ಯ |

August 5, 2023
1:01 PM
ಜಿಯೋಬುಕ್ ಲ್ಯಾಪ್​ಟಾಪ್ ರಿಲಯನ್ಸ್ ಡಿಜಿಟಲ್‌ ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇದರ ಬೆಲೆ ಕೇವಲ 16,999 ರೂ. ರಿಲಯನ್ಸ್ ಜಿಯೋ ಮೊನ್ನೆಯಷ್ಟೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಜಿಯೋಬುಕ್ ಲ್ಯಾಪ್​ಟಾಪ್ ಅನ್ನು ಬಿಡುಗಡೆ ಮಾಡಿತ್ತು.

ಇತ್ತೀಚೆಗೆ ವಿದ್ಯಾರ್ಥಿಗಳಿಂದ ಹಿಡಿದು, ವ್ಯಾಪಾರಿಗಳಿಗೆ, ಸಾಫ್ಟ್‌ ವೇರ್‌ ಕೆಲಸ ಮಾಡುವವರಿಗೆ ಲ್ಯಾಪ್‌ ಟಾಪ್‌ ಇಲ್ಲಂದ್ರೆ ಕೆಲಸ ಬಹಳ ಕಷ್ಟ. ಆದರೆ ಲ್ಯಾಪ್‌ ಟಾಪ್‌ ಬೆಲೆ ಕೇಳಿದ್ರೆ ಮಕ್ಕಳಿಗಂತೂ ಪೋಷಕರು ತೆಗೆದುಕೊಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಈಗ ಅದರ ಭಯ ಇಲ್ಲ. ಕೇವಲ 16,999ಗೆ ಲ್ಯಾಪ್‌ ಟಾಪ್‌ ಲಭ್ಯವಾಗಲಿದೆ.

Advertisement
Advertisement

ಜಿಯೋಬುಕ್ ಲ್ಯಾಪ್​ಟಾಪ್  ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇದರ ಜೊತೆಗೆ, ಅಮೆಜಾನ್ ಮೂಲಕ ಕೂಡ ಖರೀದಿಸಬಹುದು. ಮೊದಲ ಸೇಲ್ ಪ್ರಯುಕ್ತ ಆಫರ್ ಘೋಷಣೆ ಮಾಡಲಾಗಿದೆ. ಇದರ ಬೆಲೆ ಕೇವಲ 16,999 ರೂ. ರಿಲಯನ್ಸ್ ಜಿಯೋ ಮೊನ್ನೆಯಷ್ಟೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಜಿಯೋಬುಕ್ ಲ್ಯಾಪ್​ಟಾಪ್ ಅನ್ನು ಬಿಡುಗಡೆ ಮಾಡಿತ್ತು. ಇದು ಬಜೆಟ್ ಬೆಲೆಯ ಲ್ಯಾಪ್​ಟಾಪ್ ಆಗಿದ್ದರೂ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಇದೀಗ ಇಂದಿನಿಂದ ಈ ಲ್ಯಾಪ್​ಟಾಪ್ ದೇಶದಲ್ಲಿ ಮಾರಾಟ ಕಾಣುತ್ತಿದೆ. ಜಿಯೋಬುಕ್ ಲ್ಯಾಪ್​ಟಾಪ್ ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇದರ ಜೊತೆಗೆ, ಅಮೆಜಾನ್ ಮೂಲಕ ಕೂಡ ಖರೀದಿಸಬಹುದು. ಮೊದಲ ಸೇಲ್ ಪ್ರಯುಕ್ತ ಆಫರ್ ಘೋಷಣೆ ಮಾಡಲಾಗಿದೆ. ಇದರ ಬೆಲೆ ಕೇವಲ 16,999 ರೂ.

Advertisement

ಜಿಯೋಬುಕ್ ಲ್ಯಾಪ್​ಟಾಪ್ ಡಿಜಿಬಾಕ್ಸ್‌ನಲ್ಲಿ ಒಂದು ವರ್ಷದ ವರೆಗೆ 100GB ಉಚಿತ ಕ್ಲೌಡ್ ಸ್ಟೋರೇಜ್ ಮಾಡುವ ಆಯ್ಕೆ ನೀಡಲಾಗಿದೆ. 4G ಸಂಪರ್ಕದ ಜೊತೆ ಆಕ್ಟಾ-ಕೋರ್ ಪ್ರೊಸೆಸರ್‌ಗೆ ಬೆಂಬಲವನ್ನು ಹೊಂದಿದ್ದು, ಇದರಲ್ಲಿ ಹೈ-ಡೆಫಿನಿಷನ್ ವಿಡಿಯೋಗಳ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದಾಗಿದೆ. ಹೊಸ ಜಿಯೋ ಲ್ಯಾಪ್‌ಟಾಪ್ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 4GB LPDDR4 RAM ಅನ್ನು ಹೊಂದಿದೆ. ಕಂಪನಿಯು ತನ್ನ ಟೀಸರ್‌ನಲ್ಲಿ ಜಿಯೋಬುಕ್ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಿದೆ.

ಈ ಲ್ಯಾಪ್​ಟಾಪ್ 64GB ಸಂಗ್ರಹಣೆಯನ್ನು ನೀಡುತ್ತದೆ, ಬೇಕಾದಲ್ಲಿ ಇದನ್ನು SD ಕಾರ್ಡ್‌ನೊಂದಿಗೆ 256GB ವರೆಗೆ ವಿಸ್ತರಿಸಬಹುದು. ಜಿಯೋಬುಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇನ್ಫಿನಿಟಿ ಕೀಬೋರ್ಡ್ ಮತ್ತು ದೊಡ್ಡ ಬಹು-ಗೆಸ್ಚರ್ ಟ್ರ್ಯಾಕ್‌ಪ್ಯಾಡ್. ಜಿಯೋಬುಕ್ ಲ್ಯಾಪ್​ಟಾಪ್ ಅಂತರ್ನಿರ್ಮಿತ USB ಮತ್ತು HDMI ಪೋರ್ಟ್‌ಗಳೊಂದಿಗೆ ಬಂದಿದೆ. ಕಂಪನಿಯ JioOS ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಲ್ಯಾಪ್​ಟಾಪ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಆಗಿದೆ. ಲ್ಯಾಪ್‌ಟಾಪ್ 4G ಸಂಪರ್ಕ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈಗೆ ಬೆಂಬಲವನ್ನು ಹೊಂದಿದೆ.

Advertisement

ಇದು ಅಲ್ಟ್ರಾ-ಸ್ಲಿಮ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ಸುಮಾರು 990 ಗ್ರಾಂ ತೂಕದ್ದಾಗಿದೆ ಎಂದು ಜಿಯೋ ಹೇಳಿದೆ. ಇದರಲ್ಲಿ 11.6-ಇಂಚಿನ ಕಾಂಪ್ಯಾಕ್ಟ್ ಆಂಟಿ-ಗ್ಲೇರ್ HD ಡಿಸ್ ಪ್ಲೇ ನೀಡಲಾಗಿದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದು ಜಿಯೋ ಉತ್ಪನ್ನವಾಗಿರುವುದರಿಂದ, ಜಿಯೋ TV ಮತ್ತು JioCloud ನಂತಹ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಲಿನಕ್ಸ್ ಆಧಾರಿತ ಕೋಡಿಂಗ್ ಸಾಫ್ಟ್‌ವೇರ್ JioBIAN ನೊಂದಿಗೆ ಬಳಕೆದಾರರು ಕೋಡಿಂಗ್ ಭಾಷೆಗಳನ್ನು (ಜಾವಾ, ಪೈಥಾನ್ ಮತ್ತು ಪರ್ಲ್) ಕಲಿಯಬಹುದು. ಆಫೀಸ್ ಮತ್ತು ಪವರ್‌ಪಾಯಿಂಟ್‌ನಂತಹ ಮೈಕ್ರೋಸಾಫ್ಟ್ ಅಪ್ಲಿಕೇಶನ್‌ಗಳನ್ನು ಲ್ಯಾಪ್‌ಟಾಪ್ ಬೆಂಬಲಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

Source : Online Media

Advertisement

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |
May 12, 2024
11:56 AM
by: ಸಾಯಿಶೇಖರ್ ಕರಿಕಳ
ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ : ಗೋಕೃಪಾಮೃತ ಇರುವಾಗ ಮಾರುಕಟ್ಟೆಯಲ್ಲಿನ ದುಬಾರಿ ಕೃಷಿ ಗೊಬ್ಬರ & ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ
May 12, 2024
11:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror