ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 105 ಜೂನಿಯರ್ ಫೀಲ್ಡ್ ಎಂಜಿನಿಯರ್, ಜೂನಿಯರ್ ಫೀಲ್ಡ್ ಆಫೀಸರ್ ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 12, 2023 ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು.
ಜೂನಿಯರ್ ಫೀಲ್ಡ್ ಎಂಜಿನಿಯರ್- 85, ಜೂನಿಯರ್ ಫೀಲ್ಡ್ ಆಫೀಸರ್- 20 ಹುದ್ದಗೆಳು ಖಾಲಿ ಇದ್ದು, ಜೂನಿಯರ್ ಫೀಲ್ಡ್ ಎಂಜಿನಿಯರ್ ಹುದ್ದೆಗೆ ಸಿವಿಲ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಆಗಿರಬೇಕು ಹಾಗೂ ಜೂನಿಯರ್ ಫೀಲ್ಡ್ ಆಫೀಸರ್ ಹುದ್ದೆಗೆ ಸಿಎ/ ICWA (ಇಂಟರ್), CMA (ಇಂಟರ್), ಪದವಿ, ಸ್ನಾತಕೋತ್ತರ ಪದವಿ ಆಗಿರಬೇಕು.
ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 12, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ವೇತನ ಮಾಸಿಕ 45,000 ರೂ ಆಗಿದ್ದು, ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ಮಾಡಲು ಸಿದ್ಧರಿರಬೇಕು.
ಅರ್ಜಿ ಶುಲ್ಕ: SC/ST/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ, ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 300 ರೂ. ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ. ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/01/2023 , ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 12, 2023
ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…
ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…
ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…
‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…