ಪತಿಪತ್ನಿ ಇಬ್ಬರೂ ಏಕಕಾಲಕ್ಕೆ ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ್ದಾರೆ. ಕಡಬ ತಾಲೂಕಿನ ಮರ್ಧಾಳದ ವಿಜಯ್ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ವಾಣಿ ಶೆಟ್ಟಿ ಅವರು ಪದೋನ್ನತಿ ಹೊಂದಿದ ದಂಪತಿಗಳು.
ಇವರು ಮೂಲತಃ ಕಡಬ ತಾಲೂಕಿನ ಮರ್ದಾಳದವರಾದ ವಿಜಯಕುಮಾರ್ ಅವರು ಕೃಷಿ ಕುಂಟುಂಬದ ಹಿನ್ನೆಲೆಯವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮರ್ಧಾಳದಲ್ಲಿ ಪೂರೈಸಿ ಹೈಸ್ಕೂಲ್ ಹಾಗೂ ದ್ವಿತೀಯ ಪಿಯುಸಿ ಯನ್ನು ನಮ್ಮ ಕುಕ್ಕೆ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಪದವಿಯನ್ನು ಬಿಕಾಂ ಪದವಿಯೊಂದಿಗೆ 1991 ರಿಂದ 94 ರಲ್ಲಿ ನಮ್ಮಮಹಾವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ನಂತರ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ 1998 ರಲ್ಲಿ ಕಾನೂನು ಪದವಿಯನ್ನು ಪಡೆದಿರುತ್ತಾರೆ. ನಂತರ 1999 ರಿಂದ ಇವರು ಮಂಗಳೂರಿನ ಖ್ಯಾತ ವಕೀಲರಾದ ಪಿಪಿ ಹೆಗಡೆ ಅವರೊಂದಿಗೆ ಲಾ ಪ್ರಾಕ್ಟೀಸ್ ಮಾಡುತ್ತಿದ್ದರು.
ಮಂಗಳೂರಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರ ಆರಂಭಿಸಿ ಸಾಕಷ್ಟು ಅನುಭವ ಪಡೆದ ನಂತರ 2008ರಲ್ಲಿ ಜಡ್ಜ್ ಆಗಿ ನೇಮಕಗೊಂಡು ಶಿವಮೊಗ್ಗ ಬೆಂಗಳೂರು ಹಾಸನ ಬೆಳಗಾಂ ಮಂಡ್ಯ ಜಿಲ್ಲೆಯಲ್ಲಿ ಜುಡಿಶಿಯಲ್ ಮ್ಯಾಗ್ಜಿಸ್ಟ್ರೇಟ್ ಹಾಗೂ ಸಿವಿಲ್ ಜಡ್ಜ್ ಸೀನಿಯರ್ ಡಿವಿಷನ್ ಆಗಿ ಕೆಲಸ ನಿರ್ವಹಿಸಿರುತ್ತಾರೆ. ಅದಲ್ಲದೆ ಇವರು ಕರ್ನಾಟಕ ಲೋಕಾಯುಕ್ತ ಇಲಾಖೆಯ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ನಿರ್ವಹಿಸಿರುತ್ತಾರೆ , ಅದಲ್ಲದೆ ಕರ್ನಾಟಕದ ಲೋಕಾಯುಕ್ತ ಇಲಾಖೆಯ ಸೆಕ್ರೆಟರಿ ಯಾಗಿಯೂ ನಾಲ್ಕು ವರ್ಷಗಳ ಕಾಲ ಕೆಲಸ ನಿರ್ವಹಿಸಿರುತ್ತಾರೆ ಸರಳ ಸಜ್ಜನಕಿಯ ವ್ಯಕ್ತಿಯಾಗಿರುವ ವಿಜಯ್ ಕುಮಾರ್ ರೈ ಇವರು ವಕೀಲ ವೃತ್ತಿಯಲ್ಲಿ ಸಾಕಷ್ಟು ಅನುಭವ ಪಡೆದು ವಕೀಲರಿಗೆ ಮಾರ್ಗದರ್ಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜ ಚನ್ನ ಬೋಂಡಾಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎಂ ಜಿ ಸಿದ್ದೇಶ ರಾಮ, 5 ನೇ ತರಗತಿ ಎಂ ಜಿ ಸಿದ್ದೇಶ…