ತೋಟದಲ್ಲಿ, ಮನೆಯ ಪಕ್ಕದ ಮರದಡಿಯಲ್ಲಿ ತರಗೆಲೆಗಳ ಶಬ್ಧ ಜೋರಾಗಿ ಕೇಳುತ್ತಿದೆಯೆಂದರೆ ಅಲ್ಲಿ ಹರಟೆಮಲ್ಲ ಹಕ್ಕಿಗಳಿವೆಯೆಂದೇ ಅರ್ಥ. ಅವುಗಳು ತರಗೆಲೆಗಳೆಡೆಯಲ್ಲಿರುವ ಹುಳು ಹುಪ್ಪಟೆಗಳನ್ನು ಹುಡುಕಿ ತಿನ್ನುತ್ತವೆ. ಬಣ್ಣವೂ ಸಾಮಾನ್ಯವಾಗಿ ತರಗೆಲೆ ಅಂದರೆ ಒಣ ಎಲೆಗಳಂತೆಯೇ ನಸು ಕಂದು ಇರುವುದರಿಂದ ತರಗೆಲೆ ಹಕ್ಕಿ ಎಂಬ ಹೆಸರೂ ಇದೆ. ತರಗೆಲೆಗೆ ತುಳುವಿನಲ್ಲಿ ಬಜಕ್ಕುರೆ ಎನ್ನುವುದರಿಂದ ಬಜಕ್ಕುರೆ ಹಕ್ಕಿ ಎಂದು ಕರೆಯುತ್ತಾರೆ.
ಕರ್ಕಶ ಸ್ವರ ಹಾಗೂ ತೀಕ್ಷ್ಣ ಕಣ್ಣುಗಳು ಹೆದರಿಕೆ ಹುಟ್ಟಿಸುವಂತಿವೆ. ಬಾಗಿದ ಕೊಕ್ಕು ಇದ್ದು ದುಂಡಗೆ ಶರೀರವಿದ್ದು ,20 ರಿಂದ 25 ಸೆ.ಮೀ ನಷ್ಟು ದೊಡ್ಡದಾಗಿರುತ್ತದೆ. ಸಾಮಾನ್ಯವಾಗಿ ಏಳು ಹಕ್ಕಿಗಳು ಒಟ್ಟಿಗೆ ಇರುವುದರಿಂದ ಸೆವೆನ್ಪ ಸಿಸ್ಟರ್ಸ್ ಎಂದು ಆಂಗ್ಲ ಭಾಷೆಯಲ್ಲೂ, ಸಾತ್ ಬಾಯಿ ಎಂದು ಹಿಂದಿಯಲ್ಲೂ ಕರೆಯುತ್ತಾರೆ. ವರ್ಷಕ್ಕೊಮ್ಮೆ ಸಂತಾನಾಭಿವೃದ್ಧಿ ಮಾಡುತ್ತವೆ. ಇವುಗಳು ಸಂಘಜೀವಿಗಳಾಗಿವೆ. ಹುಳು ಹುಪ್ಪಟೆಗಳನ್ನು ತಿನ್ನುತ್ತ ಬೆಳೆಗಳ ರಕ್ಷಣೆ ಮಾಡುತ್ತವೆ. ರೈತನ ಮಿತ್ರನೆಂದೇ ಗುರುತಿಸಲ್ಪಡುವ ಹಕ್ಕಿಯಾಗಿದೆ ಈ ತರಗೆಲೆ ಹಕ್ಕಿ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ಬಾಳಿಲ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement