MIRROR FOCUS

ಕೇರಳ | ಎರ್ನಾಕುಲಂ ಜಿಲ್ಲೆಯ ಕಲಮಸ್ಸೇರಿ ಸಭಾಭವನದಲ್ಲಿ ಸ್ಫೋಟ | ಟಿಫನ್‌ ಬಾಕ್ಸ್‌ನಲ್ಲಿ ಸ್ಫೋಟ…| ಕೇರಳಾದ್ಯಂತ ಕಟ್ಟೆಚ್ಚರ | ಪ್ರಚೋದನಾಕಾರಿ ಸಂದೇಶ ಹರಡಿದರೆ ಕ್ರಮ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸರಣಿ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು  ವರದಿಯಾಗಿದೆ. ಭಯೋತ್ಪಾದಕ ದಾಳಿ ಎಂದು ಶಂಕಿಸಲಾಗುತ್ತಿದ್ದು, ಕೇರಳದಾದ್ಯಂತ ಕಟ್ಟೆಚ್ಚರ ವಹಿಸಲು ಇಲಾಖೆ ಸೂಚಿಸಿದೆ.

Advertisement

ಸ್ಫೋಟ ಸಂಭವಿಸಿದಾಗ 2,000ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡಿರುವ 36 ಮಂದಿಯ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಭಯೋತ್ಪಾದಕ ದಾಳಿಯಾಗಿದ್ದು, ಬಾಂಬ್ ಸ್ಕ್ವಾಡ್, ಫೊರೆನ್ಸಿಕ್ಸ್ ತಂಡ ಮತ್ತು ಎನ್‌ಐಎ ತಂಡ ಸ್ಥಳಕ್ಕೆ ತಲುಪಿದೆ. ಕೇರಳ ರಾಜ್ಯ ಪೊಲೀಸ್‌ ಮುಖ್ಯಸ್ಥ ಡಾ.ಶೇಕ್ ದರ್ವೇಶ್ ಸಾಹೇಬ್  ಅವರು  ಭಾನುವಾರ ನಡೆದ ಸ್ಫೋಟದಲ್ಲಿ ಐಇಡಿ  ಬಳಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ತನಿಖಾ ತಂಡವು ಹಾಲ್‌ನಿಂದ ಐಇಡಿ ಅವಶೇಷಗಳನ್ನು ವಶಪಡಿಸಿಕೊಂಡಿದೆ.

ಟಿಫಿನ್ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಐಇಡಿ ಸ್ಫೋಟಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ. ಸ್ಫೋಟಕ್ಕೂ ಮುನ್ನ ಕಾರೊಂದು ಸಭಾಭವನದ ಬಳಿ  ವೇಗವಾಗಿ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಐಇಡಿ ಹಾಕಿದ ವ್ಯಕ್ತಿಯೇ ಕಾರು ಚಾಲನೆ ಮಾಡಿರಬಹುದು ಎಂದು ತನಿಖಾ ತಂಡ ಶಂಕಿಸಿದೆ.

ಸ್ಫೋಟದ ಸುದ್ದಿ ತಿಳಿದ ತಕ್ಷಣವೇ ಕೇರಳದ ಅಧಿಕಾರಿಗಳು ರಾಜ್ಯದ ಎಲ್ಲಾ 14 ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಎಚ್ಚರಿಕೆ ಮತ್ತು ವಿಶೇಷವಾಗಿ ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳ ಸುತ್ತಲೂ ಜಾಗರೂಕರಾಗಿರಿ ಎಂದು ನಿರ್ದೇಶನ ನೀಡಿದರು.

Advertisement

ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಸಂದೇಶಗಳ ವಿರುದ್ಧ ಕೇರಳ ಡಿಜಿಪಿ ಎಚ್ಚರಿಕೆ ನೀಡಿದ್ದು, ಎರ್ನಾಕುಲಂನಲ್ಲಿ ಇಂದು ಬೆಳಗ್ಗೆ ಧಾರ್ಮಿಕ ಸಭೆಯಲ್ಲಿ ಸ್ಫೋಟ ಸಂಭವಿಸಿದ ನಂತರ,  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷದ ಸಂದೇಶಗಳನ್ನು ಹರಡದಂತೆ ಕೇರಳ ಡಿಜಿಪಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಪ್ರಚೋದನಾಕಾರಿ ಸಂದೇಶ ಹರಡಿದರೆ  ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

A series of blasts was reported at convention centre in Ernakumal Kalamassery on Sunday morning. leading to the death of one person and injuring over 50 others, as reported by local police.Kerala Chief Minister Pinarayi Vijayan confirmed the casualty figures and stressed the seriousness of the incident.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 20-07-2025 | ಮತ್ತೆ ಬದಲಾಯಿತು ಹವಾಮಾನ | ಮಳೆ ಕಡಿಮೆಯಾಗುವ ಲಕ್ಷಣ |

ಮಧ್ಯಮ ಸ್ತರದ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ…

3 hours ago

ಬದುಕು ಪುರಾಣ | ರಾಮಬಾಣದ ಇರಿತ

ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…

10 hours ago

ವಾಸ್ತು ಶಾಸ್ತ್ರದ ಮೂಲಕ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ 5 ಟಿಪ್ಸ್

ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…

10 hours ago

ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು

ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…

20 hours ago

ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ

ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…

20 hours ago

ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ

ರಾಜ್ಯದಲ್ಲಿ ನೆನೆಗುದ್ದಿಗೆ  ಬಿದ್ದಿದ್ದ  ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ  ರೈಲ್ವೆ…

21 hours ago