ಕಲ್ಲೇರಿ ಸೇತುವೆ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದ ಬಿಜೆಪಿ ನಡೆ ಖಂಡನೀಯ -ಎಸ್‌ಡಿಪಿಐ

ಕಲ್ಮಡ್ಕ ಗ್ರಾಮದ ಕಲ್ಲೇರಿಯಲ್ಲಿ ಪುತ್ತೂರು-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಳೆದ ಬಾರಿಯ ಸರ್ಕಾರದಿಂದ ಮಂಜೂರಾದ ಹಣದಿಂದ ನಿರ್ಮಿಸಿದ ಸೇತುವೆಯ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದ ಬಿಜೆಪಿ ನಡೆಯನ್ನು ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾದ ಹಮೀದ್ ಮರಕ್ಕಡ ಖಂಡಿಸಿದ್ದಾರೆ.

Advertisement
Advertisement

ಉದ್ಘಾಟನೆಯ ಸಮಯದಲ್ಲಿ ಬಿಜೆಪಿ ಪಕ್ಷದ ಧ್ವಜ ಹಿಡಿದುಕೊಂಡು ಸ್ಥಳೀಯ ಪಂಚಾಯತ್ ಸದಸ್ಯರನ್ನು ಕೂಡಾ ಕಡೆಗಣಿಸಿ ಯಾವುದೇ ಪ್ರೋಟೋಕಾಲ್  ಪಾಲನೆ ಮಾಡದೆ ಕಾರ್ಯಕ್ರಮ ಮಾಡಲಾಗಿದೆ.  ಸರ್ಕಾರಿ ಹಣದಿಂದ ಮಾಡಿದ ಕೆಲಸವನ್ನು ಬಿಜೆಪಿ ಪಕ್ಷದಿಂದ ಹಣ ಬಿಡುಗಡೆ ಮಾಡಿದ ರೀತಿಯಲ್ಲಿ ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮಾಡಿದ್ದು ಕಾನೂನು ವಿರೋಧಿ ಕೃತ್ಯವಾಗಿದೆ. ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಅಂಗಾರರು ಕೂಡ ಇದರ ಬಗ್ಗೆ ತುಟಿ ಬಿಚ್ಚದೆ ಮೌನ ಸಮ್ಮತಿ ನೀಡಿದ್ದು ಖಂಡನಾರ್ಹವಾಗಿದೆ.ಈ ದಿನದವರಗೆ ಧ್ವಜವನ್ನು ತೆರವುಗೊಳಿಸಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಕಲ್ಲೇರಿ ಸೇತುವೆ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದ ಬಿಜೆಪಿ ನಡೆ ಖಂಡನೀಯ -ಎಸ್‌ಡಿಪಿಐ"

Leave a comment

Your email address will not be published.


*