ಕಲ್ಮಡ್ಕ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ, ತಿಪ್ಪನಕಜೆ ಶಂಕರನಾರಾಯಣ ಭಟ್ ಮಂಗಳವಾರ ಮುಂಜಾನೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ನನಗೆ ಬಾಲ್ಯದಲ್ಲೇ ಪತ್ರಿಕೆ ಓದಲು ಪ್ರೋತ್ಸಾಹಿಸಿದವರು ಪುಟ್ಟಣ್ಣ ಎಂದು ನೆನಪಿಸಿಕೊಂಡಿದ್ದಾರೆ ಎಂದು ತಿಪ್ಪನ ಕಜೆ ಶಂಕರನಾರಾಯಣ ಭಟ್ ಅವರ ಸಹೋದರ ( ದೊಡ್ಡಪ್ಪನ ಮಗ) ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಅವರು. ನಾನು 6 ನೇ ತರಗತಿಯಲ್ಲಿ ಇದ್ದಾಗ ಮೊದಲ ಬಾರಿಗೆ ಪತ್ರಿಕೆ (ಕನ್ನಡಪ್ರಭ) ಓದಲು ಪ್ರೋತ್ಸಾಹಿಸಿದವರು. ಮುಂದೆ ಅದೇ ಪತ್ರಿಕೆಗೆ ನಾನು ಸಂಪಾದಕನಾದಾಗ ತುಂಬಾ ಖುಷಿಪಟ್ಟಿದ್ದರು.ಮುಂಗಾರು ಪತ್ರಿಕೆ, ಕನ್ನಡಪ್ರಭ ಪತ್ರಿಕೆಯಲ್ಲಿ ನನ್ನ ಬರಹಗಳನ್ನು ತಪ್ಪದೆ ಓದುತ್ತಿದ್ದರು. ಊರಿಗೆ ಬಂದಾಗ ಅದನ್ನು ನನಗೆ ಹೇಳುವುದರಲ್ಲಿ ಅವರು ಯಾವತ್ತೂ ಮರೆಯುತ್ತಿರಲಿಲ್ಲ. ಎಸ್.ಎಲ್. ಭೈರಪ್ಪ ನವರ ಕಾದಂಬರಿ ಓದು ಎಂದು ನಾನು ಹೈಸ್ಕೂಲಿನಲ್ಲಿ ಇದ್ದಾಗಲೇ ಹೇಳುತ್ತಿದ್ದರು.
ಅವರು ಆರ್ ಎಸ್ ಎಸ್ ಸ್ವಯಂ ಸೇವಕರು. ಅವರಲ್ಲಿ ಅಪಾರ ದೇಶಭಕ್ತಿ ಮತ್ತು ಸಾಹಿತ್ಯ ಓದು ಇತ್ತು. ಕಿರಿಯರ ಜತೆ ಸದಾ ಪ್ರೀತಿಯಿಂದ ಮಾತನಾಡಿಸುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು. ಕಲ್ಮಡ್ಕ ಒಬ್ಬ ಹಿರಿಯ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ನೆನಪು ಸದಾ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದೂ ಶಿವಸುಬ್ರಹ್ಮಣ್ಯ ಪ್ರಾರ್ಥಿಸಿದ್ದಾರೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…