ಕನಸೆಂಬ ಪಕ್ಷಿಯ ಬೆನ್ನೇರಿ ಹೊರಟಾಗ…..!

April 3, 2021
10:00 AM
“ಕನಸು” ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಹ  ತಾನು ಮುಂದೆ ಜೀವನದಲ್ಲಿ ಹೇಗೆ ಆಗಬೇಕು ಎಂಬ ಕನಸು ಕಾಣುತ್ತಲೇ ಬರುತ್ತಾನೆ. ಆ ಕನಸು ನನಸಾಗುತ್ತದೆಯೋ? ಇಲ್ಲವೋ! ಎಂದು ತಿಳಿಯಲು ಸಾಧ್ಯವಿಲ್ಲ. ಆದರೂ ಸಹ ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗುತ್ತಾನೆ! ಒಂದಲ್ಲಾ ಒಂದು ದಿನ ತಾನು ಆ ಕನಸನ್ನು ನನಸು ಮಾಡಿಕೊಳ್ಳುವೆ ಎಂಬ ಛಲ ಆತನಲ್ಲಿ ಇರುತ್ತದೆ.
ವ್ಯಕ್ತಿ ತನ್ನ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣುವ ಬದಲು ಕೇವಲ ಒಂದು ಕನಸನ್ನು ಕಂಡು ಆ ಕನಸನ್ನು ನನಸು ಮಾಡಿಕೊಳ್ಳಲು ಮುಂದಡಿ ಇರಿಸಿದರೆ ಒಂದು ದಿನ ನನಸಾಗಿಯೇ ಆಗುತ್ತದೆ. ಕೇವಲ ಆ ಕನಸನ್ನು ಬೆನ್ನತ್ತಿ ಹೊರಟರೆ ಸಾಲದು,  ಕನಸನ್ನು ಬೆನ್ನತ್ತಿ ಹೋಗುವ ದಾರಿ ಹಾಗೂ ತಲುಪುವ ಗುರಿ ಎರಡೂ ಸಹ ಒಳ್ಳೆಯದಾಗಿರಬೇಕು.
ನಮ್ಮ ಗುರಿ ಸಾಧನೆಯು ಇನ್ನೊಬ್ಬರ ಜೀವನವನ್ನು ಹಾಳು ಮಾಡಬಾರದು, ನಮ್ಮ ಕನಸು ಇನ್ನೊಬ್ಬರ ಕನಸಿಗೆ ಮುಳ್ಳಾಗಬಾರದು, ನಮ್ಮ ನಿರ್ಧಾರಗಳು ಇನ್ನೊಬ್ಬರ ಬದುಕಿಗೆ ಮುಳುವಾಗಬಾರದು.
ಬದುಕಿನಲ್ಲಿ ನೂರಾರು ಕನಸುಗಳನ್ನು ಕಂಡು ಯಾವ ಕನಸನ್ನು ಈಡೇರಿಸಿಕೊಳ್ಳುವುದು ಎಂದು ಚಿಂತೆ ಮಾಡುವ ಬದಲು ಕೇವಲ ಒಂದು ಕನಸನ್ನು ಕಾಣಿ, ಹಾಗೂ ಆ ಕನಸನ್ನು ನನಸಾಗಿಸಲು ಹೋರಾಟ ಮಾಡಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆ, ನಿಷ್ಠೆ, ಸತ್ಯ, ಅಹಿಂಸೆ, ಪ್ರೀತಿ ಹಾಗೂ ನಿರ್ದಿಷ್ಟ ಗುರಿ ಮತ್ತು ಉದ್ದೇಶ. ಈ ಅಂಶಗಳು ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಿಸಲು ಸಹಕಾರಿಯಾಗುತ್ತದೆ.
ಆದರೆ ಈ ಕನಸಿನ ಓಟದಲ್ಲಿ ಪ್ರೀತಿ, ಸ್ನೇಹ, ಸಂಬಂಧಗಳನ್ನು ಎಂದಿಗೂ ಮರೆಯದಿರಿ. ಏಕೆಂದರೆ ಒಂದು ನಿಜವಾದ ಪ್ರೀತಿ, ಒಂದು ನಿಜವಾದ ಸ್ನೇಹ, ನಿಮ್ಮ ಈ ಸಾಧನೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರಬಹುದು.
ಸಾಧನೆಯ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಿ. ಏಕೆಂದರೆ ನಮ್ಮ ದೇಹಕ್ಕೆ ಬಂಧನ ಇರಬಹುದು ಆದರೆ ನಮ್ಮ ಭಾವನೆಗಳಿಗೆ ಬಂಧನವಿಲ್ಲ. ಹಾಗೂ ಆ ಭಾವನೆಗಳನ್ನು ಬಂಧಿಸಲು ಸಾಧ್ಯವೂ ಇಲ್ಲ. ಭಾವನೆಗಳು ಎಂದಿಗೂ ಸ್ವತಂತ್ರ. ಭಾವನೆಗಳೇ ಒಂದು ಪ್ರಪಂಚ.
“ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗು… ಆದರೆ ಎಂದಿಗೂ ಮರೆಯದಿರು ಪ್ರೀತಿ, ಸ್ನೇಹ, ಸಂಬಂಧಗಳನ್ನು…..”
# ಉಲ್ಲಾಸ್‌ ಕಜ್ಜೋಡಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ
ಮುಂದಿನ ಸೂರ್ಯಗ್ರಹಣದ ಪ್ರಭಾವಗಳು ಏನು..? ಯಾವ ರಾಶಿಯವರಿಗೆ ಉತ್ತಮ..?
March 17, 2025
6:13 AM
by: ದ ರೂರಲ್ ಮಿರರ್.ಕಾಂ
ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!
March 16, 2025
8:13 AM
by: ರಮೇಶ್‌ ದೇಲಂಪಾಡಿ
ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!
March 16, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror