ಕನಸೆಂಬ ಪಕ್ಷಿಯ ಬೆನ್ನೇರಿ ಹೊರಟಾಗ…..!

Share
“ಕನಸು” ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಹ  ತಾನು ಮುಂದೆ ಜೀವನದಲ್ಲಿ ಹೇಗೆ ಆಗಬೇಕು ಎಂಬ ಕನಸು ಕಾಣುತ್ತಲೇ ಬರುತ್ತಾನೆ. ಆ ಕನಸು ನನಸಾಗುತ್ತದೆಯೋ? ಇಲ್ಲವೋ! ಎಂದು ತಿಳಿಯಲು ಸಾಧ್ಯವಿಲ್ಲ. ಆದರೂ ಸಹ ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗುತ್ತಾನೆ! ಒಂದಲ್ಲಾ ಒಂದು ದಿನ ತಾನು ಆ ಕನಸನ್ನು ನನಸು ಮಾಡಿಕೊಳ್ಳುವೆ ಎಂಬ ಛಲ ಆತನಲ್ಲಿ ಇರುತ್ತದೆ.
ವ್ಯಕ್ತಿ ತನ್ನ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣುವ ಬದಲು ಕೇವಲ ಒಂದು ಕನಸನ್ನು ಕಂಡು ಆ ಕನಸನ್ನು ನನಸು ಮಾಡಿಕೊಳ್ಳಲು ಮುಂದಡಿ ಇರಿಸಿದರೆ ಒಂದು ದಿನ ನನಸಾಗಿಯೇ ಆಗುತ್ತದೆ. ಕೇವಲ ಆ ಕನಸನ್ನು ಬೆನ್ನತ್ತಿ ಹೊರಟರೆ ಸಾಲದು,  ಕನಸನ್ನು ಬೆನ್ನತ್ತಿ ಹೋಗುವ ದಾರಿ ಹಾಗೂ ತಲುಪುವ ಗುರಿ ಎರಡೂ ಸಹ ಒಳ್ಳೆಯದಾಗಿರಬೇಕು.
ನಮ್ಮ ಗುರಿ ಸಾಧನೆಯು ಇನ್ನೊಬ್ಬರ ಜೀವನವನ್ನು ಹಾಳು ಮಾಡಬಾರದು, ನಮ್ಮ ಕನಸು ಇನ್ನೊಬ್ಬರ ಕನಸಿಗೆ ಮುಳ್ಳಾಗಬಾರದು, ನಮ್ಮ ನಿರ್ಧಾರಗಳು ಇನ್ನೊಬ್ಬರ ಬದುಕಿಗೆ ಮುಳುವಾಗಬಾರದು.
ಬದುಕಿನಲ್ಲಿ ನೂರಾರು ಕನಸುಗಳನ್ನು ಕಂಡು ಯಾವ ಕನಸನ್ನು ಈಡೇರಿಸಿಕೊಳ್ಳುವುದು ಎಂದು ಚಿಂತೆ ಮಾಡುವ ಬದಲು ಕೇವಲ ಒಂದು ಕನಸನ್ನು ಕಾಣಿ, ಹಾಗೂ ಆ ಕನಸನ್ನು ನನಸಾಗಿಸಲು ಹೋರಾಟ ಮಾಡಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆ, ನಿಷ್ಠೆ, ಸತ್ಯ, ಅಹಿಂಸೆ, ಪ್ರೀತಿ ಹಾಗೂ ನಿರ್ದಿಷ್ಟ ಗುರಿ ಮತ್ತು ಉದ್ದೇಶ. ಈ ಅಂಶಗಳು ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಿಸಲು ಸಹಕಾರಿಯಾಗುತ್ತದೆ.
ಆದರೆ ಈ ಕನಸಿನ ಓಟದಲ್ಲಿ ಪ್ರೀತಿ, ಸ್ನೇಹ, ಸಂಬಂಧಗಳನ್ನು ಎಂದಿಗೂ ಮರೆಯದಿರಿ. ಏಕೆಂದರೆ ಒಂದು ನಿಜವಾದ ಪ್ರೀತಿ, ಒಂದು ನಿಜವಾದ ಸ್ನೇಹ, ನಿಮ್ಮ ಈ ಸಾಧನೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರಬಹುದು.
ಸಾಧನೆಯ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಿ. ಏಕೆಂದರೆ ನಮ್ಮ ದೇಹಕ್ಕೆ ಬಂಧನ ಇರಬಹುದು ಆದರೆ ನಮ್ಮ ಭಾವನೆಗಳಿಗೆ ಬಂಧನವಿಲ್ಲ. ಹಾಗೂ ಆ ಭಾವನೆಗಳನ್ನು ಬಂಧಿಸಲು ಸಾಧ್ಯವೂ ಇಲ್ಲ. ಭಾವನೆಗಳು ಎಂದಿಗೂ ಸ್ವತಂತ್ರ. ಭಾವನೆಗಳೇ ಒಂದು ಪ್ರಪಂಚ.
“ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗು… ಆದರೆ ಎಂದಿಗೂ ಮರೆಯದಿರು ಪ್ರೀತಿ, ಸ್ನೇಹ, ಸಂಬಂಧಗಳನ್ನು…..”
# ಉಲ್ಲಾಸ್‌ ಕಜ್ಜೋಡಿ
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|

ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…

5 hours ago

ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |

ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…

7 hours ago

ಅಮೆರಿಕದ ಹಲವು ರಾಜ್ಯಗಳಲ್ಲಿ ಚಂಡಮಾರುತ-ಸುಳಿಗಾಳಿ; ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ

ಅಮೆರಿಕದ  ಹಲವು ರಾಜ್ಯಗಳಲ್ಲಿ  ಅತ್ಯಂತ ಪ್ರಬಲ ಚಂಡಮಾರುತ ಹಾಗೂ  ಸುಳಿಗಾಳಿ ಉಂಟಾಗಿದ್ದು,  ಈವರೆಗೆ…

7 hours ago

ಉತ್ತರ ಒಳನಾಡಿನಲ್ಲಿ ಬಿಸಿಹವೆ – ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…

8 hours ago

ಕಾಶ್ಮೀರದಲ್ಲಿ ಹಿಮಪಾತ ಆರಂಭ | ಮಧ್ಯಭಾರತ ಹಾಗೂ  ಉತ್ತರ ಭಾರತದಲ್ಲಿ  ತಾಪಮಾನ ಗಣನೀಯ ಪ್ರಮಾಣದಲ್ಲಿ  ಏರಿಕೆ

ಕಣಿವೆ ರಾಜ್ಯ  ಕಾಶ್ಮೀರದಲ್ಲಿ  ಹಿಮಪಾತ  ಆರಂಭವಾಗಿದೆ.   ಕಾಶ್ಮೀರದ  ಹಲವು ಭಾಗಗಳಲ್ಲಿ ಎರಡು ದಿನಗಳ…

8 hours ago