ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಅವರಿಗೆ ಆದ ನಷ್ಟ ಬರೋಬ್ಬರಿ 30-40 ಕೋಟಿ ರೂಪಾಯಿ. ಹೀಗೇಕೆ ಎನ್ನುವ ವಿಚಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ ಅವರು ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಸಮಾಜದ ಆಗು-ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇದರಿಂದ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದೂ ಇದೆ. ಆದರೆ, ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಈಗ ಕಂಗನಾ ರಾಣವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಮಾತನಾಡಿದ ವಿಡಿಯೋ ಒಂದನ್ನು ಅವರು ಹಂಚಿಕೊಂಡಿದ್ದಾರೆ. ‘ನನಗೆ ಇಷ್ಟ ಬಂದಿದ್ದನ್ನು ನಾನು ಹೇಳುತ್ತೇನೆ. ಅದರಿಂದ ಹಣ ಕಳೆದುಕೊಂಡರೂ ತೊಂದರೆ ಇಲ್ಲ’ ಎಂದು ಎಲಾನ್ ಮಸ್ಕ್ ಅವರು ಈ ವಿಡಿಯೋದಲ್ಲಿ ಹೇಳಿದ್ದರು. ಈ ಮಾತು ಕಂಗನಾಗೆ ಇಷ್ಟವಾಗಿದೆ. ಇದು ಅವರ ಜೀವನದಲ್ಲೂ ನಡೆದಿದೆ ಎನ್ನಲಾಗುತ್ತಿದೆ.
‘ನಾನು ಹಿಂದುತ್ವದ ಬಗ್ಗೆ, ರಾಜಕಾರಣಿಗಳು ಹಾಗೂ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ 30-40 ಕೋಟಿ ರೂಪಾಯಿ ನಷ್ಟ ಆಗಿದೆ. 20-25 ಬ್ರ್ಯಾಂಡ್ಗಳು ತಮ್ಮ ಒಪ್ಪಂದವನ್ನು ರಾತ್ರೋರಾತ್ರಿ ರದ್ದು ಮಾಡಿಕೊಂಡವು’ ಎಂದಿದ್ದಾರೆ ಕಂಗನಾ.
‘ನಾನು ಸ್ವತಂತ್ರಳು. ನನಗೆ ಅನಿಸಿದ್ದನ್ನು ಹೇಳಲು ಯಾವುದೂ ಅಡ್ಡಿಯಾಗದು. ನಾನು ಎಲಾನ್ ಮಸ್ಕ್ ಅವರನ್ನು ಈ ವಿಚಾರದಲ್ಲಿ ಪ್ರಶಂಸಿಸುತ್ತೇನೆ. ಏಕೆಂದರೆ ಎಲ್ಲರೂ ದೌರ್ಬಲ್ಯಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಆದರೆ, ಎಲಾನ್ ಮಸ್ಕ್ ಆ ರೀತಿ ಅಲ್ಲ. ಶ್ರೀಮಂತನಾದವನು ಹಣಕ್ಕಾಗಿ ಕಾಳಜಿ ವಹಿಸಬಾರದು’ ಎಂದಿದ್ದಾರೆ.
ಟ್ವಿಟರ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ, ಎಲಾನ್ ಮಸ್ಕ್ ಅವರು ಟ್ವಿಟರ್ನ ಪಡೆದುಕೊಂಡಮೇಲೆ ಈ ಖಾತೆಯನ್ನು ಹಿಂದಿರುಗಿ ನೀಡಲಾಗಿದೆ. ಈ ಕಾರಣಕ್ಕೂ ಅವರಿಗೆ ಎಲಾನ್ ಮಸ್ಕ್ ಮೇಲೆ ವಿಶೇಷ ಗೌರವ ಇದೆ.
ಸದ್ಯ ಕಂಗನಾ ರಣಾವತ್ ಅವರು ‘ಚಂದ್ರಮುಖಿ 2’ ಹಾಗೂ ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಎಮರ್ಜೆನ್ಸಿ’ ಚಿತ್ರಕ್ಕೆ ಕಂಗನಾ ರಣಾವತ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಕೂಡ. ನಿರ್ಮಾಣದಲ್ಲೂ ಅವರ ಪಾಲಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…