ಕಾಣಿಯೂರು ಬಳಿ ಬೈತಡ್ಕದಲ್ಲಿ ಸೇತುವೆಗೆ ಡಿಕ್ಕಿಯಾದ ಕಾರು ಹೊಳೆಗೆ ಬಿದ್ದಿತ್ತು. ಕಾರಿನಲ್ಲಿ ಇಬ್ಬರು ಯುವಕರು ಇದ್ದರು. ಭಾನುವಾರ ಬೆಳಗ್ಗೆ ಕಾರು ಬಿದ್ದಿರುವುದು ಸಿಸಿಟಿವಿ ದೃಶ್ಯಾವಳಿಯ ಮೂಲಕ ಖಚಿತವಾಗಿತ್ತು. ಅದಾಗಿ ಶೋಧ ಕಾರ್ಯ ನಡೆಸಿ ಕಾರನ್ನು ಹರಸಾಹಸದಿಂದ ಹೊಳೆಯಿಂದ ಮೇಲೆ ತರಲಾಯಿತು. ಈಗ ಯುವಕರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಹೊಳೆಯಲ್ಲೂ ಶೋಧ ಕಾರ್ಯ ಆರಂಭವಾಗಿದೆ.
ಶನಿವಾರ ತಡರಾತ್ರಿ ಕಾರು ಬೈತಡ್ಕ ಮಸೀದಿ ಬಳಿಯಲ್ಲಿ ನೇರವಾಗಿ ಹೊಳೆಗೆ ಬೀಳುವ ದೃಶ್ಯದ ಮೂಲಕ ಕಾರು ಹೊಳೆಗೆ ಬಿದ್ದಿರುವುದು ಖಚಿತವಾಗಿತ್ತು. ಹೀಗಾಗಿ ಶೋಧ ಕಾರ್ಯ ನಡೆದ ಬಳಿಕ ಘಟನಾ ಸ್ಥಳದಿಂದ ಸುಮಾರು 60 ಮೀಟರ್ ದೂರಲ್ಲಿ ಕಾರು (ಮಾರುತಿ 800) ಪತ್ತೆಯಾಗಿದೆ. ಹರಸಾಹಸದ ಮೂಲಕ ಕಾರನ್ನು ಸವಣೂರಿನ ಚಾಲಕರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ ನೆರವಿನಿಂದ ಮೇಲೆ ತೆಗೆಯಲಾಗಿದೆ. ಯುವಕರ ಪತ್ತೆ ಕಾರ್ಯ ಆರಂಭವಾಗಿದೆ.
ಆದರೆ ಯುವಕರು ಕಾರಿನಿಂದ ಜಿಗಿದರೇ ಅಥವಾ ಹೊಳೆಯಿಂದ ದಾಟಿ ಬಂದರೇ ಅಥವಾ ಹೊಳೆಯಲ್ಲಿ ಕೊಚ್ಚಿ ಹೋದರೇ ಈ ಪ್ರಶ್ನೆಗಳ ಆಧಾರದಲ್ಲಿ ಈಗ ತನಿಖೆ ಆರಂಭವಾಗಿದೆ. ಕಾರಿನಲ್ಲಿ ಇಬ್ಬರು ಯುವಕರು ಇದ್ದದ್ದು ಖಚಿತವಾಗಿದೆ. ಪುತ್ತೂರು-ಕಾಣಿಯೂರು ರಸ್ತೆ ನಡುವೆ ಸವಣೂರು ಹಾಗೂ ಕಾಣಿಯೂರು ಪ್ರದೇಶದಲ್ಲಿ ಪೊಲೀಸರು ರಾತ್ರಿ ವೇಳೆ ವಾಹನ ತಪಾಸಣೆ ಮಾಡುತ್ತಾರೆ. ಈ ಸಮಯದಲ್ಲಿ ವಾಹನಗಳ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಪಡೆಯುತ್ತಾರೆ. ರಾತ್ರಿ ವೇಳೆ ಈ ಯುವಕರು ಸಾಗುತ್ತಿದ್ದ ಕಾರಿನ ಸಂಖ್ಯೆ ಹಾಗೂ ಕಾರಿನ ಚಾಲಕನ ಸಂಖ್ಯೆಯನ್ನೂ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ವಿಟ್ಲ ಕುಂಡಡ್ಕದ ಧನುಷ್ (26) ಮತ್ತು ಮಂಜೇಶ್ವರ ನಿವಾಸಿ ಧನುಷ್ (21) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ವಿಟ್ಲದಿಂದ ಹೊರಟಿದ್ದ ಕಾರು ಗುತ್ತಿಗಾರಿನ ಸಂಬಂಧಿಕರ ಮನೆಗೆ ಬರುತ್ತಿತ್ತು. ತಡರಾತ್ರಿ ನಿದ್ರೆಯ ಮಂಪರಿನಲ್ಲಿದ್ದರೇ ಯುವಕರು ಎಂಬುದು ಸಂದೇಹಕ್ಕೆ ಕಾರಣವಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಅಪಘಾತವು ಸುಮಾರು 12.30 ರ ಆಸುಪಾಸಿನಲ್ಲಿ ನಡೆದಿದೆ. ಅದಾದ ಬಳಿಕ ಈ ಯುವಕರ ಮೊಬೈಲ್ ಬಳಕೆಯಾಗಿದೆ ಎಂಬುದು ಸದ್ಯದ ಮಾಹಿತಿ. ತಡರಾತ್ರಿ ಮನೆಗೂ ಕರೆ ಮಾಡಿದ್ದಾರೆ ಎಂಬುದು ಮನೆಯವರ ಮಾಹಿತಿ. ಹಾಗಾದರೆ ಈ ಇಬ್ಬರು ಯುವಕರ ಮೊಬೈಲ್ ಏನಾಗಿದೆ?. ಹೊಳೆ ದಾಟಿದರೆ ? ಈಜಿ ಬಂದರೇ ? ಎಂಬುದು ತನಿಖೆಯ ದಾರಿಗಳು. ಹೀಗಾಗಿ ಮೊಬೈಲ್ ಟವರ್ ಲೊಕೇಶನ್ ಹಾಗೂ ಇತರ ಮಾಹಿತಿಗಳ ಮೂಲಕ ತನಿಖೆ ಆರಂಭಿಸಿದ್ದಾರೆ ಪೊಲೀಸರು. ಭಾರೀ ಮಳೆಯ ಕಾರಣದಿಂದ ರಸ್ತೆ ಬದಿ ಕಾಣದೆ ಸೇತುವೆಗೆ ಡಿಕ್ಕಿಯಾಯಿತೇ ? ಯುವಕರು ನಿದ್ರೆಯ ಮಂಪರಿನಲ್ಲಿದ್ದರೇ ? ಈ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಸದ್ಯ ಯುವಕರಿಗೆ ಶೋಧ ಕಾರ್ಯ ಆರಂಭವಾಗಿದೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.